SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 5, 2024
ಆಹಾರ ಮತ್ತು ನಾಗರಿಕ ಸಚಿವ ಕೆ, ಹೆಚ್ ಮುನಿಯಪ್ಪ ತೆರಳುತ್ತಿದ್ದ ಕಾರು ರಾಷ್ಟ್ರೀಯ ಹೆದ್ದಾರಿ 75 ಶಾಂತಿ ಗ್ರಾಮದ ಟೋಲ್ ಬಳಿ ಅಪಘಾತವಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ.
ಸಚಿವರಾದ ಕೆ ಹೆಚ್ ಮುನಿಯಪ್ಪರವರು ಹಾಸನದಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಆ ವೇಳೆ ರಾಷ್ಟ್ರೀಯ ಹೆದ್ದಾರಿ 75 ರ ಬಳಿ ಬರುವ ಶಾಂತಿ ಗ್ರಾಮದ ಟೋಲ್ ಬಳಿ ಇನ್ನೋವಾ ಕಾರೊಂದು ಹಿಂಬದಿಯಿಂದ ಸಚಿವರ ಕಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸಚಿವರ ಕಾರಿನ ಹಿಂಬದಿ ಜಖಂಗೊಂಡಿದ್ದು, ಸಚಿವರು ಸೇರಿದಂತೆ ಕಾರಿನಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ. ನಂತರ ಸಚಿವರು ಬದಲಿ ಕಾರಿನಲ್ಲಿ ಸಮಾವೇಶಕ್ಕೆ ತೆರಳಿದರು.
SUMMARY| The car in which Food and Civil Supplies Minister K H Muniyappa was travelling met with an accident near Shanti village toll plaza on National Highway 75. Fortunately, those in the car were not harmed.
KEYWORDS| Minister K H Muniyapppa, car accident, hasana,