SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 2, 2024
ಉಪೇಂದ್ರ ಏನೆ ಮಾಡಿದ್ರು ಡಿಫೆರೆಂಟು ಅನ್ನೋದಕ್ಕೆ ಅವರ ನಿರ್ದೇಶನದ ಯುಐ ಸಿನಿಮಾದ ಟೀಸರ್ ಮತ್ತೊಂದು ಸಾಕ್ಷಿ ಕೊಟ್ಟಿದೆ. ಬೇರೆಯದ್ದೆ ಲೆವೆಲ್‌ನಲ್ಲಿರು ಉಪ್ಪಿಯ ಯುಐ ವಾರ್ನಿಂಗ್ ಟೀಸರ್, ಭವಿಷ್ಯದ ರಿಯಾಲಿಟಿಯನ್ನ ತೋರಿಸ್ತಿದೆ. ಕೋವಿಡ್‌ಗಿಂತಲೂ ಎಐ ತಂದೊಡ್ಡಬಲ್ಲ ಅಪಾಯವನ್ನ ತೋರಿಸುವುದರ ಜೊತೆಯಲ್ಲಿ ಉಪೇಂದ್ರ ಟೀಸರ್‌ನಲ್ಲಿ ಜಾತಿಯ ಸೀಲ್ ಹಾಗೂ ಧರ್ಮದ ಬಡಿದಾಟ, ಅಧಿಕಾರದ ಸರ್ವಾಧಿಕಾರವನ್ನ ತೋರಿಸಿದ್ದಾರೆ.
ಸಖತ್ ಕುತೂಹಲ ಕೆರಳಿಸ್ತಿರುವ ಯುಐ ಟೀಸರ್ ಲಹರಿ ಫಿಲ್ಮ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಎರಡು ನಿಮಿಷ 16 ಸೆಕೆಂಡ್ ಇರುವ ಈ ಟೀಸರ್ ನಲ್ಲಿ ಉಪೇಂದ್ರ ಜಾಗತಿಕ ತಾಪಮಾನ, ಕೋವಿಡ್ 19, ಯುದ್ಧ, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಹಣದುಬ್ಬರ, ಹಾಗೂ ನಿರುದ್ಯೋಗ ಸಮಸ್ಯೆಗಳನ್ನು ಫಿಲ್ಮಿ ಸ್ಟೈಲ್‌ನಲ್ಲಿ ತುಂಬಿಸಿದ್ದಾರೆ.
ಟೀಸರ್ ನಲ್ಲಿ ಏನಿದೆ.
ಈ ಹಿಂದೆಲ್ಲ ನಾನು ನೀನು, ಹೌದು ಏನಿವಾಗ ಎನ್ನುತ್ತಿದ್ದ ಉಪೇಂದ್ರ ಯು ಐ ಮೂಲಕ ಇದೇ ಜಗತ್ತು ಇದೆ ನಡೆಯುತ್ತಿರುವುದು ನೋಡು ನೋಡು ಎನ್ನುತ್ತಿದ್ದಾರೆ. ಸಿಂಗಲ್ ಬಾಳೆಹಣ್ಣಿಗೆ ಬಡಿದಾಡುವ ಜನರಿಗೆ ಮೈ ಮುಚ್ಚುವ ಬಟ್ಟೆಯಿಲ್ಲದಿದ್ದರೂ ಮೊಬೈಲ್ ಎಷ್ಟು ಅನಿವಾರ್ಯವಾಗಿದೆ ಎಂಬುದು ಟೀಸರ್‌ನಲ್ಲಿ ಕಾಣಬಹುದು.
2040 ರ ವೇಳೆಗೆ ಪರಿಸ್ಥಿತಿ ಹೀಗೂ ಇರಬಹುದು, ಮಾಡಲು ಕೆಲಸವಿಲ್ಲದಿದ್ದರೂ ಜನ ಮೊಬೈಲಿಗೆ ಯಾವ ರೀತಿ ಅಡಿಕ್ಟ್ ಆಗಿದ್ದಾರೆ ಎನ್ನುವುದಕ್ಕೆ ಟೀಸರ್ ನಲ್ಲಿ ಮೊಬೈಲ್ ಅನ್ನು ಉಚಿತವಾಗಿ ಕೊಡುವ ಸೀನ್ ಅನ್ನು ತೋರಿಸಿರುವ ಉಪ್ಪಿ, ಸಮಾಜದಲ್ಲಿ ನಾವು ಯಾವ ಸ್ಥಿತಿಯಲ್ಲಿದ್ದೇವೆ ಎಂಬ ಅಂಶವನ್ನು ಬಿಚ್ಚಿಟ್ಟಿದ್ದಾರೆ. ಬಟ್ಟೆ ಇಲ್ಲದಿದ್ದರೂ ಜನ ಜಾತಿ ಜಾತಿ ಎಂದು ಹೇಗೆ ಹೊಡೆದಾಡುತ್ತಾರೆ. ಮುಂದೊಂದು ದಿನ ಜಾತಿಯ ಲೇಬಲ್ ಅನ್ನು ಬೆನ್ನಿನ ಮೇಲೆ ಸೀಲ್ ಹಾಕಿದರೂ ಅಚ್ಚರಿಯಲ್ಲ ಎಂಬಂತಿದೆ ಟೀಸರ್
ಟೇಸರ್ ನಲ್ಲಿ ಕೊನೆಗೆ ಸ್ಟೈಲಿಶ್ ಆಗಿ ಗನ್ ಹಿಡಿದು ಸರ್ವಾಧಿಕಾರಿಯಾಗಿ ಬರುವ ಉಪೇಂದ್ರ ಗೆ ಅಲ್ಲಿರುವ ನಿರುದ್ಯೋಗಿ ಜನರು ದಿಕ್ಕಾರ ಕೂಗುತ್ತಾರೆ. ಆಗ ಉಪೇಂದ್ರ ಧಿಕ್ಕಾರಕ್ಕಿಂತ ಇಲ್ಲಿ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂಬ ಡೈಲಾಗ್ ಅನ್ನು ಹೊಡೆಯುತ್ತಾರೆ. ಆ ಡೈಲಾಗ್ ಪ್ರಸ್ತುತ ದೇಶದ ರಾಜಕಾರಣವನ್ನ ತೋರಿಸ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಒಟ್ಟಾರೆ ಯು ಐ ಸಿನಿಮಾ ಯಾವ ರೀತಿ ಇರಲಿದೆ ಎಂಬ ಹಿಂಟ್ ಅನ್ನು ಟೀಸರ್ ನಲ್ಲಿ ತೋರಿಸಿರುವ ಉಪ್ಪಿ. ಈ ಸಿನಿಮಾ ಸಮಾಜದ ಮೇಲೆ ಯಾವರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಡಿಸೆಂಬರ್ 20 ರಂದು ತೋರಿಸಲಿದ್ದಾರೆ,
SUMMARY| The two-minute-16-second teaser features Upendra on global warming, COVID-19, war, artificial intelligence and more. He is going to talk about inflation and unemployment.
KEYWORDS| Upendra, ui, global warming, COVID-19, kannadacinema,