ಕೇಂದ್ರ ಗೃಹ ಸಚಿವರ ಪುತ್ರ ಇನ್ಮುಂದೆ ಐಸಿಸಿ ಅಧ್ಯಕ್ಷ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 2, 2024

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿಯಾಗಿರುವ Jay Shah ಪ್ರಸ್ತುತ ಅಂತರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಆಗಸ್ಟ್ ನಲ್ಲಿ ಜಯ್‌ ಶಾ ಐಸಿಸಿ ಯ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಇದೀಗ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದಾರೆ. 

ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅತಿ ಕಿರಿಯ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಜಯ್  ಶಾ ಪಾತ್ರರಾಗಿದ್ದು, ಈ ಹುದ್ದೆಗೇರಿದ 5ನೇ ಭಾರತೀಯರಾಗಿದ್ದಾರೆ. ಜಯ್‌ ಶಾಗಿಂತಲೂ ಮೊದಲು ರಾಜಕಾರಣಿ ಶರದ್‌ ಪವಾರ್‌, ಭಾರತೀಯರಾದ ಉದ್ಯಮಿ ದಿವಂಗತ ಜಗಮೋಹನ್‌ ದಾಲ್ಮಿಯಾ,  ವಕೀಲ ಶಶಾಂಕ್‌ ಮನೋಹರ್‌ ಮತ್ತು ಕೈಗಾರಿಕೋದ್ಯಮಿ ಎನ್‌ ಶ್ರೀನಿವಾಸನ್‌ ಅವರು ವಿಶ್ವ ಕ್ರಿಕೆಟ್‌ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಈ ಹಿಂದೆ  ಜಯ್ ಶಾ 2019 ರಲ್ಲಿ ಬಿಸಿಸಿಐ ನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದರು. ಪ್ರಸ್ತುತ ಐಸಿಸಿಯ ಅಧ್ಯಕ್ಷರಾಗಿದ್ದು, ಈ ಹಿಂದೆ ಇದ್ದ ಐಸಿಸಿ ಅಧ್ಯಕ್ಷರಾಗಿದ್ದ ಗ್ರೆಗ್ ಬಾರ್ಕ್ಲೇ ಅವರ ಸ್ಥಾನವನ್ನು ಇನ್ನು ಮುಂದೆ ಜಯ್​ ಶಾ ತುಂಬಲಿದ್ದಾರೆ. ಇದುವರೆಗೆ ಬಿಸಿಸಿಐ ನ ಕಾರ್ಯದರ್ಶಿಯಾಗಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ ಜಯ್‌ ಶಾ ರಿಗೆ  ಮುಂದೆ  ಕ್ರಿಕೆಟ್‌ ಅನ್ನು ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಒಲಿಂಪಿಕ್‌ ಕ್ರೀಡೆಯನ್ನಾಗಿಸುವ ಹಾಗೆಯೇ   ಮುಂಬರುವ ಚಾಂಪಿಯನ್ಸ್‌ ಟ್ರೋಫಿಯ ಸುತ್ತಲಿನ ಬಿಕ್ಕಟ್ಟನ್ನು ಕೊನೆಗೊಳಿಸುವ ಜವಬ್ದಾರಿ ಇದೆ.

SUMMARTY| Jay Shah, who is the secretary of the Board of Control for Cricket in India (BCCI), is currently elected as the president of the International Cricket Council (ICC).

 

KEY WORDS| Jay Shah, Board of Control for Cricket in India, International Cricket Council, Cricket,

Share This Article