ಒಂದಕ್ಕೊಂದು ಡಿಕ್ಕಿಯಾದ ಬೈಕ್‌ | 21 ವರ್ಷದ ಯುವಕ ಸಾವು

13

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 26, 2024 ‌ 

ಶಿವಮೊಗ್ಗ ತಾಲ್ಲೂಕು ಕುಂಸಿಯಲ್ಲಿ ಎರಡು ಬೈಕ್‌ಗಳ ನಡುವೆ ಡಿಕ್ಕಿಯಾದ ಪರಿಣಾಮ 21 ವರ್ಷದ ಯುವಕನೊಬ್ಬ ಸಾವನ್ನಪ್ಪಿದ್ದಾನೆ. 

ಕುಂಸಿ ಗ್ರಾಮದಿಂದ ಹುಬ್ಬನಹಳ್ಳಿ ಸಂಪರ್ಕಿಸುವ ರಸ್ತೆಯಲ್ಲಿ ಭಾನುವಾರ ಸಂಜೆ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿದೆ. ಇಲ್ಲಿನ ಹಾರ್ನಹಳ್ಳಿ ನಿವಾಸಿ ಶಶಿಧರ್‌ ಸಾವನ್ನಪ್ಪಿದ್ದಾರೆ. 

ಊರಿನಿಂದ ಕುಂಸಿ ಕಡೆ ತೆರಳುತ್ತಿದ್ದ ಶಶಿಧರ್‌ ಬೈಕ್‌ಗೆ ಕುಂಸಿಯಿಂದ ಹುಬ್ಬನಹಳ್ಳಿ ಕಡೆ ಬೈಕ್‌ನ ನಡುವೆ ಎದುರುಬದುರು ಡಿಕ್ಕಿಯಾಗಿದೆ. 

ಇನ್ನೂ ಘಟನೆಯಲ್ಲಿ ಇನ್ನೊಂದು ಬೈಕ್‌ನಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಈ ಸಂಬಂಧ ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

SUMMARY |   man was killed in a collision between two bicycles at Kumsi in Shivamogga taluk

KEY WORDS  |  man was killed in a collision between two bicycles,  Kumsi in Shivamogga taluk

Share This Article