SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 25, 2024
ಶಿವಮೊಗ್ಗ| ಎಂಎಲ್ ಎ ಮತ್ತು ಶಾಸಕರು ಬಂದಾಗ ಮಾತ್ರ ಇಂದಿರಾ ಕ್ಯಾಂಟಿನ್ ನಲ್ಲಿ ಒಳ್ಳೇ ಊಟ ಕೊಡ್ತಾರೆ ಎಂಬ ಆರೋಪ ಇದೆ, ಅದೇನಾದರೂ ನಿಜವಾಗಿದ್ದರೆ ಆ ಟೆಂಡರ್ ಹಿಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ತಿಳಿದರು.
ಇಂದು ಶಿವಮೊಗ್ಗ ಪ್ರವಾಸ ಕೈಗೊಂಡಿದ್ದ ರಹೀಂ ಖಾನ್ ಇಂದಿರಾ ಕ್ಯಾಂಟಿನ್ ಅಲ್ಲಿ ಊಟ ಸೇವಿಸಿದರು. ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟಿಲ್ ಸಿದ್ದರಾಮಯ್ಯನವರ ಕನಸು ಅವರು ಹಿಂದೆ ಸಿ ಎಂ ಆಗಿದ್ದಾಗ 200 ಇಂದಿರಾ ಕ್ಯಾಂಟಿನ್ ಅನ್ನು ಕೊಟ್ಟಿದ್ದರು, ಈಗ ಪ್ರಸ್ತುತ ಮೂರು ಇಂದಿರಾ ಕ್ಯಾಂಟಿನ್ ಕೊಟ್ಟಿದ್ದಾರೆ. ಈ ಇಂದಿರಾ ಕ್ಯಾಂಟಿನ್ ಇಂದ ಬಡವರಿಗೆ ಕಡಿಮೆ ಹಣದಲ್ಲಿ ಊಟಾ ಸಿಗುತ್ತೆ. ನಾನು ಆ ಊಟವನ್ನು ಟೇಸ್ಟ್ ಮಾಡ್ದೆ ಊಟಾ ಚೆನ್ನಾಗಿದೆ. ಈಗಿರುವ ಹೊಸ ಆದೇಶದಲ್ಲಿ ಇಂದಿರ ಕ್ಯಾಂಟಿನ್ ಮೆನುವಿನಲ್ಲಿ ರೊಟ್ಟಿ ಚಪಾತಿ ಕೊಡಬೇಕೆಂಬ ರೂಲ್ಸ್ ಇದೆ ಎಂದರು.
ಹಾಗೆಯೇ ಎಂಎಲ್ ಎ ಮತ್ತು ಶಾಸಕರು ಬಂದಾಗ ಮಾತ್ರ ಇಂದಿರಾ ಕ್ಯಾಂಟಿನ್ ನಲ್ಲಿ ಒಳ್ಳೇ ಊಟ ಕೊಡ್ತಾರೆ ಎಂಬ ಆರೋಪ ಇದೆ, ಅದೇನಾದರೂ ನಿಜವಾಗಿದ್ದರೆ ಆ ಟೆಂಡರ್ ಹಿಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ಹಾಗೆಯೇ ವಕ್ಪ್ ಕಾಯಿದೆ ತಿದ್ದುಪಡಿ ಬಗ್ಗೆ ಮಾತನಾಡಿದ ಅವರು ವಕ್ಫ್ ಅಂದರೆ ನಮ್ಮ ಕಮ್ಯೂನಿಟಿಯಲ್ಲಿ ಯಾರಿಗೆ ಮಕ್ಕಳಿಲ್ಲ ಹಾಗೆಯೇ ಯಾರು ಬಡವರಿದ್ದಾರೆ ಅವರಿಗೆ ನಮ್ಮ ಕಮಿಟಿ ದಾನ ನೀಡುತ್ತೆ. ಇದರಲ್ಲಿ 99 ಭಾಗ ನಮ್ಮ ಕಮ್ಯೂನಿಟಿಯವರೆ ಇದ್ದಾರೆ.ನಮ್ಮಲ್ಲಿ ದುಡ್ಡಿದ್ದವರು ಅದಕ್ಕೆ ದಾನ ನೀಡುತ್ತಾರೆ. ದಾನ ನೀಡಿದ್ದಕ್ಕೆ ಸಾಕ್ಷಿ ಇರಲೆಂದು ನಾವು ವಕ್ಪ್ ಅಂತ ಒಂದು ಬೋರ್ಡ್ ಅನ್ನು ಮಾಡಿದ್ವೇವೆ, ಆದರೆ ಬಿಜೆಪಿಯವರು ಜನರ ತಲೆ ತಿರುಗಿಸಲು ಚುನಾವಣೆ ಸಮಯದಲ್ಲಿ ಇಂತಹ ವಿಷಯಗಳನ್ನು ತರುತ್ತಾರೆ. ನಾಳೆ ವಕ್ಫ್ ಬಿಲ್ ಪಾಸಾಗಲ್ಲ ಎಂಬ ನಂಬಿಕೆ ನಮಗಿದೆ ಎಂದರು
SUMMARY| There are allegations that only when MLAs and MLAs come, they serve good food at indira canteens, if that is true, will action be taken against those who held the tender?
KEYWORDS| ,rahim khan, shivamogga, indhira canteen,