SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 25, 2024
ಶಿವಮೊಗ್ಗ: ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ನವೆಂಬರ್ 24ರ ಭಾನುವಾರದಂದು ಕ್ರಿಸ್ತ ರಾಜರ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಸಂಜೆ 4:30ಕ್ಕೆ ಜಪಸರ ಪ್ರಾರ್ಥನೆ ಆರಂಭವಾಯಿತು. 5: ಗಂಟೆಗೆ ಆಡಂಬರದ ಬಲಿ ಪೂಜೆಯೊಂದಿಗೆ ಹಬ್ಬದ ಆಚರಣೆಗೆ ಚಾಲನೆ ನೀಡಲಾಯಿತು. ಶಿವಮೊಗ್ಗ, ಭದ್ರಾವತಿ ಹಾಗೂ ಪುತ್ತೂರು ಧರ್ಮ ಕ್ಷೇತ್ರದ ಧರ್ಮ ಅಧ್ಯಕ್ಷರು ಬಲಿ ಪೂಜೆಯನ್ನು ಅರ್ಪಿಸಿದರು.
ಮೂರು ಧರ್ಮ ಕ್ಷೇತ್ರದ ಧರ್ಮ ಗುರುಗಳು ಧರ್ಮಬಗಿನಿಯರು ಪೂಜೆಯಲ್ಲಿ ಭಾಗವಹಿಸಿದ್ದರು. ಶಿವಮೊಗ್ಗ,ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯ ಸಾವಿರಾರು ಭಕ್ತರು ಪೂಜೆಯಲ್ಲಿ ಭಾಗವಹಿಸಿದ್ದರು. ಪೂಜೆಯ ನಂತರ ಕ್ರಿಸ್ತ ರಾಜರ ರಾಜಭೀದಿ ಉತ್ಸವದ ಮೆರವಣಿಗೆಯನ್ನು ಶಿವಮೊಗ್ಗ ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಭಕ್ತರು ಭಕ್ತಿ ಭಾವನೆಯಿಂದ,ಭಜನೆ, ಪ್ರಾರ್ಥನೆ,ಹಾಡುಗಳನ್ನು ಹಾಡುತಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸೇಕ್ರೆಡ್ ಹಾರ್ಟ್ ದೇವಾಲಯವು ದೀಪಾಲಂಕಾರದಿಂದ ಕಂಗೊಳಿಸಿತು.
ಈ ಕ್ರಿಸ್ತ ರಾಜರ ಹಬ್ಬವು ಕ್ರಿಸ್ಮಸ್ ಹಬ್ಬಕ್ಕೆ ಪೂರ್ವ ತಯಾರಿಯಾಗಿರುತ್ತದೆ. ನವಂಬರ್ 24 ರಿಂದ ಡಿಸೆಂಬರ್ 24ರ ವರೆಗೆ ಆಗಮನ ಕಾಲವೆಂದು ಕರೆಯಲಾಗುತ್ತದೆ. ಇಂದಿನಿಂದ ಕ್ರಿಸ್ಮಸ್ ಹಬ್ಬಕ್ಕೆ ಪೂರ್ವ ತಯಾರಿಯನ್ನು ಮಾಡಲಾಗುತ್ತದೆ. ದೇವಾಲಯಗಳಲ್ಲಿ ಮನೆ-ಮನೆಗಳಲ್ಲಿ ಕ್ರಿಸ್ಮಸ್ ಹಬ್ಬದ ಗೀತೆ ಗಾಯನಗಳನ್ನು ಆರಂಭಿಸಲಾಗುತ್ತದೆ.
ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಪೂಜೆಯ ಕೊನೆಗೆ ಆಗಮಿಸಿದ ಭಕ್ತರಿಗೆ ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮ ಅಧ್ಯಕ್ಷರಾದ ಡಾ. ಫ್ರಾನ್ಸಿಸ್ ಸೆರವೊ,ಭದ್ರಾವತಿ ಧರ್ಮ ಕ್ಷೇತ್ರದ ಧರ್ಮಧ್ಯಕ್ಷ ಡಾ. ಜೋಸೆಫ್ ಅರುಮಚಡತ್,ಪುತ್ತೂರು ಧರ್ಮ ಕ್ಷೇತ್ರ ಧರ್ಮಧ್ಯಕ್ಷ ರವರು ಆಶೀರ್ವದಿಸಿದರು.
ಸೇಕ್ರೆಡ್ ಹಾರ್ಟ್ ದೇವಾಲಯದ ಪ್ರಧಾನ ಗುರು ವಿಕಾರ್ ಜನರಲ್ ಫಾದರ್ ಸ್ಟ್ಯಾನಿ ಡಿಸೋಜರವರು ಧನ್ಯವಾದಗಳನ್ನು ಅರ್ಪಿಸಿದರು.
SUMMRY| The festival of Christ kings was celebrated at the Sacred Heart Church in Shivamogga on Sunday, November 24.
KEYWORDS| The festival of Christ kings, Sacred Heart Church in Shivamogga, kannadanews,