SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 20, 2024
ಶಿವಮೊಗ್ಗ| ವಕ್ಫ್ ಕಾಯ್ದೆಯನ್ನು ವಿರೋಧಿಸಿ ಇದೇ ನವೆಂಬರ್ 22ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಮ್ಮ ಭೂಮಿ ನಮ್ಮ ಹೆಮ್ಮೆ ಎಂಬ ಶೀರ್ಷಿಕೆ ಅಡಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿಡಿ ಮೇಘರಾಜ್ ತಿಳಿಸಿದರು
ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಒಡೆದು ಆಳುವ ನೀತಿ ಹಾಗೂ ತುಷ್ಟಿಕರಣದ ನೀತಿಯನ್ನು ಅನುಸರಿಸುತ್ತಿದೆ. ವಕ್ಫ್ ಎನ್ನುವುದು ಸಮಾಜದ ಶಾಂತಿಯನ್ನು ಕದಡುವ ಒಂದು ಕರಾಳ ಶಾಸನ ಆಗಿದೆ. ಬೆಳಗಾವಿ ಬಿಜಾಪುರ ದಿಂದ ಆರಂಭವಾಗಿ ಈಗ ಶಿವಮೊಗ್ಗದಲ್ಲಿ 32 ವಕ್ಫ್ ಪ್ರಕರಣಗಳು ಜಿಲ್ಲಾಧಿಕಾರಿಯ ಕಚೇರಿ ಪ್ರವೇಶಿಸಿದೆ. ಇದಕ್ಕೆ ಕಾರಣ ಜಮೀರ್ ಅಹ್ಮದ್ ಹಾಗೂ ಕಾಂಗ್ರೆಸ್ ಸರ್ಕಾರ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈವಿಜಯೇಂದ್ರ ಅವರ ಮಾರ್ಗದರ್ಶನದ ಮೇರೆಗೆ 22 ರಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದೇವೆ. ಈ ಪ್ರತಿಭಟನೆಯಲ್ಲಿ ವಿವಿಧ ಸಂಘ-ಸಂಸ್ಥೆಯ ಸದಸ್ಯರು ಮಠಾಧೀಶರು ಎಲ್ಲಾ ಭಾಗವಹಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಶುರುವಾಗುವ ಈ ಪ್ರತಿಭಟನೆ ಸಂಜೆ 5 ರ ವರೆಗೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆ ಎಂದರು.
SUMMARY | “On November 22, we will stage a protest in front of the deputy commissioner’s office under the title ‘Our land is our pride’,” meghraj said
KEY WORDS | District BJP protests, Waqf Act, shivamogga,