ನಟ ದರ್ಶನ್‌ ನಟನೆಯ ಸಂಗೊಳ್ಳಿ ರಾಯಣ್ಣ ಚಿತ್ರ ರೀ ರಿಲೀಸ್‌

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 19, 2024

ಸದ್ಯ ನಟ ದರ್ಶನ್‌ರ ಸಿನಿಮಾಗಳು ಬ್ಯಾಕ್‌ ಟು ಬ್ಯಾಕ್‌ ರಿರಿಲೀಸ್‌ ಆಗುತ್ತಿದೆ. ಇದೀಗ ಅದರ ಸಾಲಿಗೆ ಸಂಗೊಳ್ಳಿ ರಾಯಣ್ಣ ಸಿನಿಮಾ ಕೂಡ ಸೇರಿಕೊಂಡಿದೆ. 

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ನವಗ್ರಹ ಸಿನಿಮಾ ಕಳೆದ  ನವಂಬರ್‌ 8 ರಂದು ರೀರಿಲೀಸ್‌ ಆಗಿತ್ತು. ಇದೀಗ ದರ್ಶನ್‌ ನಟನೆಯ ಐತಿಹಾಸಿಕ ಚಿತ್ರವಾದ ಸಂಗೊಳ್ಳಿ ರಾಯಣ್ಣ ಚಿತ್ರ ನವೆಂಬರ್‌ 22 ರೀರೀಲೀಸ್‌ ಆಗಲಿದೆ.

12 ವರ್ಷಗಳ ಹಿಂದೆ ಸಂಗೊಳ್ಳಿ ರಾಯಣ್ಣ ಸಿನಿಮಾ ರಿಲೀಸ್ ಆಗಿತ್ತು, ಈ ಚಿತ್ರದಲ್ಲಿ ನಟ ದರ್ಶನ್‌ ಸಂಗೊಳ್ಳಿ ರಾಯಣ್ಣನಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. 

ಬಹುಕೋಟಿ ವೆಚ್ಚದ ಈ ಚಿತ್ರಕ್ಕೆ ಆನಂದ್‌ ಅಪ್ಪುಗೋಳ್ ಬಂಡವಾಳ ಹಾಕಿದ್ದರು.ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ಧರು. ಅಂದಿನ ಕಾಲಕ್ಕೆ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ 30 ಕೋಟಿ ರೂ ಹಣವನ್ನು ಕಲೆಕ್ಷನ್‌ ಮಾಡಿತ್ತು

ಸದ್ಯ ಈ ಚಿತ್ರವನ್ನು ಎಸ್.ಜಿ.ಕೆ. ಫಿಲಂಸ್ ಮೂಲಕ ಕೆ.ಬಸವರಾಜ್  ಮತ್ತೆ ರೀರಿಲೀಸ್ ಮಾಡುತ್ತಿದ್ದಾರೆ.  ನವಂಬರ್‌ 22 ರಂದು ಈ ಚಿತ್ರ  ರಾಜ್ಯದಾದ್ಯಂತ ರಿಲೀಸ್‌ ಆಗಲಿದ್ದು,  ಈ ಚಿತ್ರದ ಮರು ಬಿಡುಗಡೆ ದರ್ಶನ್‌ ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದೆ,

SUMMARY| Darshan’s historical film Sangolli Rayanna will be re-released on 22 November.

KEYWORDS| Darshan, dboss, sangolirayanna, kannadamovies,

Share This Article