SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 18, 2024
ಶ್ರೀರಂಗಪಟ್ಟಣ | ಶ್ರೀರಂಗಪಟ್ಟಣ ಕೆಆರ್‌ಎಸ್ ಹೆದ್ದಾರಿಯಲ್ಲಿ ಬಸ್ ಹಾಗೂ ಕಾರು ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಬಾಲನಟ ಮಾಸ್ಟರ್ ಲೋಹಿತ್ ಸೇರಿದಂತೆ ಹಲವಾರು ಗಾಯಗೊಂಡಿದ್ದಾರೆ.
ಹೊಸಹಳ್ಳಿ ಗೇಟ್‌ನ ಶ್ರೀರಂಗಪಟ್ಟಣ ಕೆಆರ್‌ಎಸ್ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಬಸ್ ಗುದ್ದಿದ ರಭಸಕ್ಕೆ ಮಾಸ್ಟರ್ ಲೋಹಿತ್ ಇದ್ದ ಕಾರು ಸಂಪೂರ್ಣ ಜಖಂಗೊಂಡಿದೆ. ಈ ಅಪಘಾತದಲ್ಲಿ ಮಾಸ್ಟರ್ ಲೋಹಿತ್ ಗೆ ಗಂಭೀರ ಗಾಯಗಳಾಗಿದೆ ಎನ್ನಲಾಗಿದೆ. ಗಾಯಾಳುಗಳನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಸ್ಟರ್ ಲೋಹಿತ್ ಕಾಟೇರ ಚಿತ್ರ ಸೇರಿದಂತೆ ಅನೇಕ ಚಿತ್ರದಲ್ಲಿ ನಟಿಸಿದ್ದರು. ಈ ಬಾಲ ನಟನ ನಟನೆಗೆ ರಾಷ್ಟ್ರ ಪ್ರಶಸ್ತಿ ಸಹ ಲಭಿಸಿತ್ತು.
SUMMARY|.Srirangapatna KRS Highway. Several people, including child actor Master Lohith, were injured in the accident between the bus and the car.
KEYWORDS| Srirangapatna KRS Highway, actor Master Lohith, accident