ಥೇಟ್‌ ಆಧಾರ್‌ ಕಾರ್ಡ್‌ನಂತೆ ವಿದ್ಯಾರ್ಥಿಗಳಿಗೆ ಸಿಗಲಿದೆ ಅಪಾರ್‌ ಕಾರ್ಡ್‌| ಏನಿದು?

13

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 13, 2024 

ಆಧಾರ್‌ ಕಾರ್ಡ್‌ನ ರೀತಿಯಲ್ಲಿ ಕೇಂದ್ರ ಸರ್ಕಾರ ಇದೀಗ ಪ್ರತಿಯೊಬ್ಬ ವಿದ್ಯಾರ್ಥಿಗೂ  ‘APAR’ ಕಾರ್ಡ್ ನೀಡುವ ವ್ಯವಸ್ಥೆಗೆ ಚಾಲನೆ ನೀಡಿದೆ. 

ಇಷ್ಟಕ್ಕೂ ಏನಿದು ಅಪಾರ್‌ ಕಾರ್ಡ್‌ ಅಂದರೆ, ಪ್ರಾಥಮಿಕ ಶಾಲೆಯಿಂದ ಪಿಜಿವರೆಗೆ ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುರುತಿನ ಸಂಖ್ಯೆ ನೀಡುವ ಪ್ರಕ್ರಿಯೆ. ಕ್ಯೂಆರ್ ಕೋಡ್ ಜೊತೆಗೆ 12-ಅಂಕಿಯ ಗುರುತಿನ ಸಂಖ್ಯೆಯನ್ನು ಈ ಕಾರ್ಡ್‌ನ್ನ ನೀಡಲಾಗುತ್ತದೆ. ಈ ಕಾರ್ಡ್‌ನೊಂದಿಗೆ ಎಲ್ಲಿ ಬೇಕಾದರೂ ಶಾಲೆ ಪ್ರವೇಶವನ್ನು ಪಡೆಯಬಹುದಾಗಿದೆ. 

‘ಅಪಾರ್’ ಎಂದರೆ ಸ್ವಯಂಚಾಲಿತ ಶಾಶ್ವತ ಶೈಕ್ಷಣಿಕ ಖಾತೆ ನೋಂದಣಿ (APAAR–Automatic Permanent Academic Account Registry) ಎಂದರ್ಥ  ಒನ್ ನೇಷನ್-ಒನ್ ಸ್ಟೂಡೆಂಟ್ ಘೋಷವಾಕ್ಯದ ಭಾಗವಾಗಿ ಕೇಂದ್ರ ಶಿಕ್ಷಣ ಇಲಾಖೆ ಅಪಾರ್ ಕಾರ್ಡ್‌ ನೀಡಲಾಗುತ್ತದೆ. ಇದರಲ್ಲಿ ವಿದ್ಯಾರ್ಥಿಯ ಹೆಸರು, ಹುಟ್ಟಿದ ದಿನಾಂಕ, ಲಿಂಗ, ಭಾವಚಿತ್ರ, QR ಕೋಡ್, 12 ಅಂಕಿಯ ಗುರುತಿನ ಸಂಖ್ಯೆ ಇರುತ್ತದೆ.  QR ಕೋಡ್ ಸ್ಕ್ಯಾನ್ ಮಾಡಿದರೆ, ವಿದ್ಯಾರ್ಥಿ, ವಿದ್ಯಾರ್ಥಿನಿಯ  ಹೆಸರು, ಹುಟ್ಟಿದ ದಿನಾಂಕ, ಲಿಂಗ, ಭಾವಚಿತ್ರ ಸೇರಿದಂತೆ ಬಹುತೇಕ ಸಂಗ್ರಹ ದಾಖಲೆಗಳನ್ನ ಸಿಗುತ್ತದೆ. 

ಕೇಂದ್ರ ಶಾಲಾ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಶಿಕ್ಷಣ ನೀತಿ 2020 (ಎನ್ಇಪಿ) ಯೋಜನೆ ಅಡಿ ವಿದ್ಯಾರ್ಥಿಗಳಿಗೆ ದೇಶದಾದ್ಯಂತ ಏಕರೂಪದ ಗುರುತಿನ ಚೀಟಿ ನೀಡಲಾಗುತ್ತಿದೆ.ಸದ್ಯ ಈ ಸಂಬಂಧ ಪೋಷಕರ ಒಪ್ಪಿಗೆ ಪಡೆಯುವ ಪ್ರಕ್ರಿಯೆಗಳು ನಡೆಯುತ್ತಿವೆಯಂತೆ.  

SUMMARY | ‘ಅಪಾರ್’ ಎಂದರೆ ಸ್ವಯಂಚಾಲಿತ ಶಾಶ್ವತ ಶೈಕ್ಷಣಿಕ ಖಾತೆ ನೋಂದಣಿ (APAAR–Automatic Permanent Academic Account Registry)

KEYWORDS |  ಅಪಾರ್, APAAR, Automatic Permanent Academic Account Registry,



Share This Article