KARNATAKA NEWS/ ONLINE / Malenadu today/ Jun 21, 2023 SHIVAMOGGA NEWS
ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲ್ಲೂಕಿನ ಕಟ್ಟೆಹೊಳೆ ಗೇಟ್ ಬಳಿ ವಿಚಿತ್ರವಾದ ದುರ್ಘಟನೆಯೊಂದು ಸಂಭವಿಸಿದೆ. ಇಬ್ಬರು ಅಪರಿಚಿತ ಯುವಕ, ಯುವತಿಯರು ಬೈಕ್ ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ್ಧಾರೆ.
ಈ ಪೈಕಿ ಒಬ್ಬರು ಶಿವಮೊಗ್ಗಕ್ಕೆ ಬರಬೇಕು ಎಂದು ಬಂದವರು, ಇನ್ನೊಬ್ಬರು ಸ್ನೇಹಿತನ ಫ್ರೆಂಡ್ ಎಂಬ ಕಾರಣಕ್ಕೆ ಅವರಿಗೆ ಡ್ರಾಪ್ ಕೊಡಲು ಬಂದವರು. ಇಬ್ಬರು ಸಾಗುತ್ತಿದ್ದಾಗ, ಬೈಕ್ಗೆ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಏನಿದು ಘಟನೆ?
ಚಾಮರಾಜನಗರ ಜಿಲ್ಲೆ ತರೀಕೆರೆ ತಾಲ್ಲೂಕು ಬೇಲೇನಹಳ್ಳಿ ನಿವಾಸಿ ದೀಪಿಕಾ ಎಂಬವರು ತಮ್ಮ ಗಳತಿಯ ಜೊತೆ ಶಿವಮೊಗ್ಗದಲ್ಲಿ ವೃತ್ತಿಪರ ಕೆಲಸಕ್ಕಾಗಿ ಹೊರಟಿದ್ದರು. ಈ ಮಧ್ಯೆ ತರಿಕೆರೆಯಲ್ಲಿ ಕಾರ್ತಿಕ್ ಎಂಬ ಸ್ನೇಹಿತನ ಭೇಟಿಗೆ ಹೊರಟಿದ್ದರು. ತರಿಕೆರೆಯಿಂದ ಬೇಲನಹಳ್ಳಿಯಲ್ಲಿರುವ ನಿವಾಸಕ್ಕೆ, ಅವರನ್ನ ಕರೆದುಕೊಂಡು ಬರಲು ಕಾರ್ತಿಕ್ ತನ್ನ ಸ್ನೇಹಿತ ವಿಶ್ವಾಸ್ನನ್ನ ಸಹ ಕರೆದುಕೊಂಡು ಹೋಗಿದ್ದ. ಹೀಗೆ ಎರಡು ಬೈಕ್ನಲ್ಲಿ ಹೋಗಿದ್ದವರು ಇಬ್ಬರನ್ನ ಕೂರಿಸುಕೊಂಡು ವಾಪಸ್ ಬರುವಾಗ ಆಕ್ಸಿಡೆಂಟ್ ಆಗಿದೆ. ಬೈಕ್ಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ವಿಶ್ವಾಸ್ ಹಾಗೂ ದೀಪಿಕಾ ಸಾವನ್ನಪ್ಪಿದ್ದಾರೆ. ಈ ಸಂಬಂಧ ತರಿಕೆರೆ ಪೊಲೀಸ್ ಸ್ಟೆಷನ್ನಲ್ಲಿ ಕಂಪ್ಲೆಂಟ್ ಆಗಿದ್ದು ಕೇಸ್ ದಾಖಲಾಗಿದೆ.
