SHIVAMOGGA | MALENADUTODAY NEWS | ಮಲೆನಾಡು ಟುಡೆ Oct 29, 2024
ಚಿಕ್ಕಮಗಳೂರು | ಇಲ್ಲಿನ ಎರೆಹೊಸೂರು ಗ್ರಾಮದ ಈರುಳ್ಳಿ ಶೆಡ್ ನಿಂದ 40 ಚೀಲ ಈರುಳ್ಳಿ ಕದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬೇಧಿಸಿರುವ ಪೋಲಿಸರು ಆರೋಪಿಯನ್ನು ಬಂಧಿಸಿ ಆತನಿಂದ ₹53 ಸಾವಿರ ಜಪ್ತು ಮಾಡಿದ್ದಾರೆ. ರೈತರು ಈರುಳ್ಳಿ ಕಳು ವಾದ ಬಗ್ಗೆ ನೀಡಿದ ದೂರು ದಾಖಲಿಸಿಕೊಂಡು ಸರ್ಕಲ್ ಇನ್ ಸೆಕ್ಟರ್ ಎನ್. ವೀರೇಂದ್ರರವರ ಸೂಕ್ತ ಮಾರ್ಗದರ್ಶನದೊಂದಿಗೆ ತನಿಖೆ ಚುರುಕುಗೊಳಿಸಿದ ಇಲಾಖೆ ಸಿಬ್ಬಂದಿ ಕಳ್ಳನನ್ನು ಪತ್ತೆ ಹಚ್ಚಿದ್ದಾರೆ.
ಮನೆಗೆ ಬೆಂಕಿ
ಹೊಸನಗರ ತಾಲ್ಲೂಕಿನ ಬೈಸೆ ಗ್ರಾಮದ ಹೂಕೊಪ್ಪಲಿನಲ್ಲಿ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಅಂದಾಜು ₹ 4.5 ಲಕ್ಷ ಮೌಲ್ಯದ ವಸ್ತು ಹಾಗೂ ನಗದು ನಷ್ಟ ಉಂಟಾಗಿದೆ. ಇಲ್ಲಿನ ವಿಶಾಲಾಕ್ಷಿ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ಮನೆಯವರೆಲ್ಲಾ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ, ಮನೆಯಲ್ಲಿ ಬೆಂಕಿ ಕಾಣಿಸಿದೆ. ಮನೆಯಿಂದ ಹೊಗೆ ಬರುತ್ತಿರುವುದು ಕಂಡು ಸ್ಥಳಕ್ಕೆ ಬಂದು ಗಮನಿಸಿದಾಗ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗಿದೆ. ಆ ಬಳಿಕ ಸ್ಥಳೀಯರೆಲ್ಲಾ ಸೇರಿ ಬೆಂಕಿ ನಂದಿಸಿದ್ದಾರೆ.
ಕರೆಂಟ್ ಲೈನ್ ತುಳಿದು ಸಾವು
ಸೊರಬ ತಾಲ್ಲೂಕು ಆನವಟ್ಟಿ ಸಮೀಪದ ಲಕ್ಕವಳ್ಳಿ ಗ್ರಾಮದಲ್ಲಿ ಭತ್ತದ ಬೆಳೆಗೆ ಔಷಧ ಸಿಂಪಡಿಸಲು ಹೋಗಿದ್ದಾಗ ವಿದ್ಯುತ್ ತಂತಿ ತುಳಿದು ರೈತರೊಬ್ಬರು ಮೃತಪಟ್ಟಿದ್ದಾರೆ. ಎಂ.ಎಚ್. ಮಹೇಶ್ (27) ಮೃತ ದುರ್ಧೈವಿ. ಹೊಲಕ್ಕೆ ಔಷಧ ಸಿಂಪಡಿಸಲು ಹೋಗಿದ್ದಾಗ ತಂತಿ ತುಂಡಾಗಿ ಬಿದ್ದಿರುವುದನ್ನ ಗಮನಿಸದೆ ಅದನ್ನ ತುಳಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
SUMMARY | Ajjampura Police Station, onion theft case, Soraba taluk of Shivamogga district, Anavatti police station, death due to electrocution, Hosanagara taluk, house accidental fire,
KEYWORDS | Ajjampura Police Station, onion theft case, Soraba taluk of Shivamogga district, Anavatti police station, death due to electrocution, Hosanagara taluk, house accidental fire,