SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 6, 2024 ಕಳೆದ ದಿನಾಂಕ:-08-09-2024 ರಂದು ವಿ.ಐ.ಎಸ್.ಎಲ್ ಫ್ಯಾಕ್ಟರಿ ಒಳಗಡೆ ಸೆಂಟ್ರಲ್ ಎಲೆಕ್ಟಿಕಲ್ ವರ್ಕ್ ಶಾಪ್ ರಿಪೇರಿ ಮಾಡಲು ತಂದಿದ್ದ ವೇಲ್ಡಿಂಗ್ ಮಷಿನ್ ನಲ್ಲಿ ಇದ್ದ 35,000/-ರೂ ಬೆಲೆ ಬಾಳುವ 50 ಕೆ ಜಿ ತೂಕದ ತಾಮ್ರದ ವೈಂಡಿಂಗ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಪ್ರಕರಣ ಕುತೂಹಲ ಮೂಡಿಸಿತ್ತು.
ಸದ್ಯ ಪ್ರಕರಣದ ಸಂಬಂಧ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ಪೊಲೀಸರು ಆರೋಪಿಗಳನ್ನ ಪತ್ತೆ ಮಾಡಿದ್ದಾರೆ.
ಆರೋಪಿಗಳಾದ
1) ವೆಂಕಟೇಶ @ ಬುಡ್ಡಾ, 29 ವರ್ಷ, ಹೊಸ ಕೋಡಿಹಳ್ಳಿ ಗ್ರಾಮ ದೇವನರಸೀಪುರ, ಭದ್ರಾವತಿ,
2) ಮುನೀರ್ ಜಾನ್ @ ತಿಕಲ, ಎಕಿನ್ಸಾ ಕಾಲೋನಿ ಭದ್ರಾವತಿ ರವರನ್ನು ದಸ್ತಗಿರಿ ಮಾಡಲಾಗಿದೆ.
ಇವರಿಂದ ಅಂದಾಜು ಮೌಲ್ಯ 36,500/- ರೂಗಳ ಬೆಲೆಯ 37 ಕೆಜಿ ತೂಕದ ತಾಮ್ರದ ತಂತಿ ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 50,000/- ರೂಗಳ ದ್ವಿಚಕ್ರವಾಹನ ಮತ್ತು ಅಂದಾಜು ಮೌಲ್ಯ 50,000/- ರೂಗಳ ಪ್ಯಾಸೆಂಜರ್ ಆಟೋ ಸೇರಿ ಒಟ್ಟು 1,36,500/- ರೂಗಳ ಮಾಲನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.