SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 4, 2024 | SHIMOGA DASARA | ಶಿವಮೊಗ್ಗದಲ್ಲಿ ನಾಡಹಬ್ಬ ದಸರಾದ ಎರಡನೇ ದಿನ ಕಾರ್ಯಕ್ರಮಗಳು ವಿಶೇಷವಾಗಿ ನಡೆಯುತ್ತಿವೆ. ದಸರಾ ಚಲನಚಿತ್ರೋತ್ಸವ 2024 ರ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಚಲನಚಿತ್ರ ಕಲಾವಿದರಾದ ಉಮಾಶ್ರೀ ಅವರು ಚಲನ ಚಿತ್ರೋತ್ಸವಕ್ಕೆ ಚಾಲನೆ ನೀಡಿದರು.
ಇವತ್ತಿನಿಂದ ನಾಲ್ಕು ದಿನ ನಾಲ್ಕು ಸಿನಿಮಾ
ಇವತ್ತಿನಿಂದ ನಾಲ್ಕು ದಿನಗಳ ಕಾಲ ನಗರದ ವಿವಿಧ ಚಿತ್ರಮಂದಿರಗಳಲ್ಲಿ ಪಾಲಿಕೆಯ ವತಿಯಿಂದ ಉಚಿತವಾಗಿ ಚಲನಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ದಸರಾ ಚಲನಚಿತ್ರೋತ್ಸವದಲ್ಲಿ ಇವತ್ತು ಶಾಖಾಹಾರಿ ಸಿನಿಮಾ ಪ್ರದರ್ಶನ ಮಾಡಲಾಯ್ತು, ನಾಳೆ ಅಂದರೆ ಅಕ್ಟೋಬರ್ 5 ರಂದು ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಟಗರುಪಲ್ಯ ಸಿನಿಮಾ ತೆರೆಕಾಣಲಿದದೆ. ಇನ್ನೊಂದಡೆ ಅಕ್ಟೋಬರ್ ಆರರಂದು ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಕಂಬ್ಳಿಹುಳ ಸಿನಿಮಾ ಅಕ್ಟೋಬರ್ ಏಳರಂದು ಶಿವಮೊಗ್ಗದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಕಾಲಾಪತ್ತರ್ ಸಿನಿಮಾ ತೆರೆ ಕಾಣಲಿದೆ.
ಭೀಮಾ ಸಿನಿಮಾದ ಗಿರಿಜಾ
ಇನ್ನೂ ಇವತ್ತಿನ ಚಲನಚಿತ್ರೋತ್ಸವದ ಸಮಾರಂಭದಲ್ಲಿ ಭೀಮಾ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದ Priya Shatamarshan ಪ್ರಿಯಾ ಶತಮರ್ಶನ್ ರವರೇ ಬಹುಮುಖ್ಯ ಅಟ್ರಾಕ್ಷನ್ ಆಗಿದ್ದರು. ಅವರನ್ನ ನೋಡಲೆಂದೆ ಹಲವರು ಬಂದಿದ್ದರು. ತುಂಬಿದ ನಗುವಿನೊಂದಿಗೆ ಇಡೀ ಕಾರ್ಯಕ್ರಮದಲ್ಲಿ ಪ್ರಿಯಾ ಪಾಲ್ಗೊಂಡರು. ಇವರಷ್ಟೆ ಅಲ್ಲದೆ ನಾಯಕ ನಟ, ರಂಗಭೂಮಿ ಕಲಾವಿದ ಅವಿನಾಶ್ ಶತಮರ್ಷಣ್, ಚಲನಚಿತ್ರ ಸಾಹಿತಿ ಡಾ. ವಿ.ನಾಗೇಂದ್ರ ಪ್ರಸಾದ್ ಅವರು ಸಹ ಶಿವಮೊಗ್ಗ ದಸರಾಕ್ಕೆ ಹೊಸ ರಂಗು ನೀಡಿದರು.
ಅಸಮಾಧಾನ ಹೊರಹಾಕಿದ ಉಮಾಶ್ರೀ
ಇನ್ನೂ ಚಲನಚಿತ್ರೋತ್ಸವವನ್ನು ಉದ್ಘಾಟಿಸಿದ ನಟಿ ಉಮಾಶ್ರೀ ಉಚಿತ ಸಿನಿಮಾ ಪ್ರದರ್ಶನದ ಸಮಯದ ವಿಚಾರಕ್ಕೆ ಅಸಮಾಧಾನ ಹೊರಹಾಕಿದರು. ಈ ಬಗ್ಗೆ ಮಾತನಾಡಿದ ಅವರು, ಬೆಳಗ್ಗೆ 9 ಗಂಟೆಗೆ ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಆದರೆ ಈ ಸಮಯಕ್ಕೆ ಜನರು ಚಿತ್ರಮಂದಿರಕ್ಕೆ ಬರುವುದಿಲ್ಲ. ಮಕ್ಕಳಿಗೆ ಉತ್ತಮ ಸಿನಿಮಾ ತೋರಿಸಬೇಕು, ಅದಕ್ಕಾಗಿ ಸಿನಿಮಾ ಪ್ರದರ್ಶನದ ಸಮಯ ರಾತ್ರಿ ಆದರೆ ಒಳ್ಳೆಯದು. ರಾತ್ರಿ ವೇಳೆ ಸಿನಿಮಾ ಪ್ರದರ್ಶನ ಮಾಡಿದರೇ ಹಲವರಿಗೆ ಸಿನಿಮಾ ತಲುಪಲಿದೆ ಎಂದರು.
