ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ಇನ್ನೂ ಸಹ ನಿಕ್ಕಿಯಾಗಿಲ್ಲ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ರವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಕೆಪಿಸಿಸಿಯಲ್ಲಿ ಇವತ್ತಿಗೂ ಸ್ಪಷ್ಟಮಾತೊಂದು ಹೊರಬಿದ್ದಿಲ್ಲ. ಆದರೆ ಇದೇ ಟಿಕೆಟ್ ವಿಚಾರದಲ್ಲಿ ಗಾಳಿಸುದ್ದಿಗಳು ಮಾತ್ರ ತೀರ್ಥಹಳ್ಳಿಯ ಮನೆ ಮನೆಗಳಿಗೂ ಹರಡುತ್ತಿದೆ. ಅತ್ತ ಆರ್ಎಂ ಮಂಜುನಾಥ್ ಗೌಡರು ಅಭ್ಯರ್ಥಿ ಎಂದರೆ, ಇತ್ತ ಮಾಜಿ ಸಚಿವ ಕಿಮ್ಮನೆ ರತ್ನಾಕರ್ರವರೇ ಅಭ್ಯರ್ಥಿ ಎಂಬ ನಿಲುವಿನಲ್ಲಿ ಬಣಗಳ ಪ್ರಚಾರ ನಡೆಯುತ್ತಿದೆ. ಇಬ್ಬರು ನಾಯಕರು ಒಮ್ಮತ ಆಗಾಗ ತೋರಿ, ಒಗ್ಗಟ್ಟಿನ ಪ್ರತಿಭಟನೆಗಳನ್ನು ನಡೆಸಿದರೂ ಸಹ ಕಳೆದೊಂದು ತಿಂಗಳಿನಿಂದ ವಿರೋಧವೇ ಹೆಚ್ಚಾಗಿ ಪ್ರದರ್ಶನಗೊಂಡಿದೆ. ಪಕ್ಷದ ಮುಖಂಡರು ಕ್ಷೇತ್ರಕ್ಕೆ ಬಂದ ಸಂದರ್ಭದಲ್ಲಿ ನಡೆದ ಪ್ರತ್ಯೇಕ ಸಭೆಗಳು, ಕಾರ್ಯಕರ್ತರಲ್ಲಿ ಇರುವ ಗೊಂದಲವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿವೆ.
BIG EXCLUSIVE : Cafe Coffee Day : ಅವರ್ ಬಿಟ್, ಇವರ್ ಬಿಟ್ ತೀರ್ಥಹಳ್ಳಿ ಎಲೆಕ್ಷನ್ ಕಣಕ್ಕೆ ಬಂತು ಡಿಕೆ ಶಿವಕುಮಾರ್ ಅಳಿಯನ ಹೆಸರು
ಇದರ ನಡುವೆ ಇನ್ನೊಂದು ಸುದ್ದಿ ತೀರ್ಥಹಳ್ಳಿ ಕ್ಷೇತ್ರದ ವಿಚಾರವಾಗಿ ಹೊರಬಿದ್ದಿದೆ. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಾಯಕರ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಮೂರನೇ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ವಿಚಾರವೊಂದು ಕೆಪಿಸಿಸಿಯಲ್ಲಿ ದುತ್ತೆಂದು ಎದ್ದಿದೆ. ಆ ಆಕಾಂಕ್ಷಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಳಿಯ, ಡಿಕೆಶಿಯವರ ರಾಜಕೀಯ ಗುರು ಎಸ್ಎಂ ಕೃಷ್ಣರ ಮೊಮ್ಮಗ ಮತ್ತು ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥರ ಪುತ್ರ ಎಸ್ ಅಮಾರ್ಥ್ಯ ಹೆಗ್ದೆ
ಹೌದು, ಹೀಗೊಂದು ವಿಚಾರ ಬರುವುದಕ್ಕೂ ಕಾರಣವೂ ಸಹ ಇದೆ. ತೀರ್ಥಹಳ್ಳಿ ರಾಜಕಾರಣದ ಚಲನವಲನ ಮತ್ತು ಚಟುವಟಿಕೆಗಳನ್ನು ತಿಳಿದ ಕಫೆ ಕಾಫಿ ಡೇ ನ ತಂಡವೊಂದು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ತೀರ್ಥಹಳ್ಳಿ ಕ್ಷೇತ್ರದ ವಿಚಾರವಾಗಿ ಚರ್ಚೆ ನಡೆಸಿದೆ ಎನ್ನಲಾಗಿದೆ. ಈ ವೇಳೇ ಡಿಕೆ ಶಿವಕುಮಾರ್ರವರ ಅಳಿಯ ಅಮಾರ್ಥ್ಯ ಹೆಗ್ಡೆಯವರನ್ನ ತೀರ್ಥಹಳ್ಳಿಯಿಂದ ಕಣಕ್ಕೆ ಇಳಿಸಬಹುದು ಎಂಬ ಒಕ್ಕಣೆಯು ಅಲ್ಲಿ ಕೇಳಿಬಂದಿದೆ. ತೀರ್ಥಹಳ್ಳಿಗೆ ಹಾಗೂ ಸಿದ್ದಾರ್ಥ್ ಮತ್ತು ಎಸ್ಎಂ ಕೃಷ್ಣರ ಕುಟುಂಬಕ್ಕೆ ಅವಿನಾಭಾವ ಸಂಬಂಧವಿದೆ.
BIG EXCLUSIVE : Cafe Coffee Day : ಅವರ್ ಬಿಟ್, ಇವರ್ ಬಿಟ್ ತೀರ್ಥಹಳ್ಳಿ ಎಲೆಕ್ಷನ್ ಕಣಕ್ಕೆ ಬಂತು ಡಿಕೆ ಶಿವಕುಮಾರ್ ಅಳಿಯನ ಹೆಸರು
ತೀರ್ಥಹಳ್ಳಿಯಲ್ಲಿ ತಮ್ಮದೆ ಆದ ಬಂಧು ಬಳಗವನ್ನು ಹೊಂದಿರುವ ಈ ಕುಟುಂಬದ ಸಂಬಂಧದ ನಂಟಿನ ಜೊತೆಗೆ ಕ್ಷೇತ್ರ ಮತದಾರರ ನಂಟನ್ನು ಹೊಂದಬಹುದು ಎಂಬ ನಿರೀಕ್ಷೆಯಿದೆ. ತಮ್ಮ ಸಂಸ್ಥೆಯಡಿಯಲ್ಲಿ ಸಿದ್ದಾರ್ಥ ಇದೇ ತೀರ್ಥಹಳ್ಳಿಯ ಹಲವಾರು ಕುಟುಂಬಗಳಿಗೆ ಉದ್ಯೋಗ ಕಲ್ಪಿಸಿದ್ದಾರೆ, ಇದರ ಪ್ರತಿಫಲವೂ ಸಹ ಕ್ಷೇತ್ರದಲ್ಲಿ ಕೆಲಸ ಮಾಡಬಹುದು. ಸದ್ಯ ಇದೇ ವಿಚಾರದಡಿಯಲ್ಲಿ ಮುಂದುವರಿದ ಸಮಾಲೋಚನೆಗಳು ನಡೆಯುತ್ತಿವೆ. ಆದಾಗ್ಯು ಈ ಭೇಟಿಯ ಬಗ್ಗೆ ಕೆಪಿಸಿಸಿಯಿಂದ ಹೊರಗಡೆ ಅಧಿಕೃತ ಮಾಹಿತಿ ದೊರೆಯುತ್ತಿಲ್ಲ. ಮೇಲಾಗಿ ಈ ಹಿಂದೇ ತೀರ್ಥಹಳ್ಳಿ ಕ್ಷೇತ್ರದಲ್ಲಿ ಹರಿದಾಡಿದ ಸುದ್ದಿಗಳಂತೆ ಇದು ಸಹ ವದಂತಿಯೇ ಎಂಬ ಅಭಿಪ್ರಾಯವೂ ಸಹ ಇದೆ. ಚುನಾವಣಾ ಕಾಲ ಇನ್ನಷ್ಟು ಸಮೀಪಸಿದಂತೆ ಏನೂ ಸಹ ಆಗಬಹುದಾದರೂ ಇವತ್ತಿಗೆ ಈ ಸುದ್ದಿ ಹೊರಬಿದ್ದಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೆ ಸ್ಪಷ್ಟವಾಗಬೇಕಿದೆ .
ಇನ್ನೂ ರಾಜಕಾರಣದಲ್ಲಿ ಅಮಾರ್ಥ್ಯ ಹೆಗ್ಡೆಯ ಹೆಸರು ಕೇಳಿಬರುತ್ತಿರುವುದು ಇದೇ ಮೊದಲಲ್ಲ ಈ ಹಿಂದೆ ಚಿಕ್ಕಮಗಳೂರು ಕ್ಷೇತ್ರದಲ್ಲಿಯು ಅಮಾರ್ಥ್ಯರ ಹೆಸರು ತೇಲಾಡಿತ್ತು, ಸ್ಥಳೀಯ ಚುನಾವಣೆ ಮೂಲಕ, ಸಿಟಿ ರವಿಯವರನ್ನ ಎದುರು ಪ್ರಬಲ ಅಭ್ಯರ್ಥಿಯನ್ನಾಗಿಸುವ ಚರ್ಚೆಗಳು ನಡೆದಿದ್ದವು. ವರ್ಷಗಳ ಹಿಂದೆ ನಡೆದಿದ್ದ ಈ ಚರ್ಚೆ ಹಾಗೆಯೇ ಮೌನಕ್ಕೆ ಶರಣಾಗಿತ್ತು. ಇದೀಗ ಮತ್ತೆ ಅಮಾರ್ಥ್ಯ ಹೆಗ್ಡೆ ತೇಲಿಬಂದಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
