ಶಿವಮೊಗ್ಗ ಜನವರಿ 21 (ಕರ್ನಾಟಕ ವಾರ್ತೆ): ಶಿವಮೊಗ್ಗ ಜಿಲ್ಲೆಯ ಗಾಜನೂರು ಜವಾಹರ್ ನವೋದಯ ವಿದ್ಯಾಲಯದ 2023-24ನೇ ಸಾಲಿಗೆ 6ನೇ ತರಗತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು www.navodaya.gov.in ಮೂಲಕ ದಿನಾಂಕ: 31/01/2023 ರೊಳಗಾಗಿ ಸಲ್ಲಿಸುವಂತೆ ನವೋದಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಜನ ಸಂಪರ್ಕ ಸಭೆ*
ಮೆಸ್ಕಾಂ ಬೆಜ್ಜುವಳ್ಳಿ ಉಪವಿಭಾಗ ಕಚೇರಿಯಲ್ಲಿ ದಿನಾಂಕ: 24-01-2023 ರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಜನ ಸಂಪರ್ಕ ಸಭೆ ನಡೆಯಲಿದ್ದು, ಮೆಸ್ಕಾಂ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಂಬಂಧಪಟ್ಟ ಪ್ರದೇಶದ ಗ್ರಾಹಕರು ತಮ್ಮ ಅಹವಾಲುಗಳಿದ್ದಲ್ಲಿ ನೀಡಿ ಈ ಸಭೆಯ ಸದುಪಯೋಗ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂ: 8277882835 ಗೆ ಸಂಪರ್ಕಿಸಬಹುದೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
*ಕೆರೆಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ*
ಪುರಲೆ ಕೆರೆಯಲ್ಲಿ ಬೋರಲಾಗಿ ತೇಲುತ್ತಿದ್ದ ಸುಮಾರು 45 ರಿಂದ 50 ವರ್ಷದ ಪುರಷನ ಮೃತ ದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯು ಸುಮಾರು 5.03 ಅಡಿ ಎತ್ತರವಿದ್ದು, ಕಂದು ಬಣ್ಣ ದುಂಡು ಮುಖ ಸಾಧಾರಣ ಮೈಕಟ್ಟು ಹೊಂದಿರುತ್ತಾನೆ. ಕಪ್ಪು ಬಿಳಿ ಕುರುಚಲು ಗಡ್ಡ ಇದ್ದು, ಬೂದು ಬಣ್ಣದ ಕೆಂಪು ನೀಲಿ ಚೆಕ್ಸ್ ಗೀರಿನ ತುಂಬು ತೋಳಿನ ಷರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು ದೇಹ ಊದಿಕೊಂಡಿರುತ್ತದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ಸಿಪಿಐ ಗ್ರಾಮಾಂತರ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 100, ದೂ.ಸಂ: 08182-261418, 261410, 261422, 9480803350 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
