24 ಗಂಟೆಯಲ್ಲಿ ಕಿಡ್ನ್ಯಾಪ್​ ಕೇಸ್​ ಕ್ಲೋಸ್​/ ಭದ್ರಾವತಿಯಲ್ಲಿ ಅಪಹರಣ/ ಸಾಗರದಲ್ಲಿ ಆರೋಪಿಗಳು/ ಇಂಟರ್​ಸ್ಟಿಂಗ್ ಸ್ಟೋರಿ

Malenadu Today

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಪೊಲೀಸರು ಅಪ್ತಾಪ್ತ ಬಾಲಕನ ಕಿಡ್ನ್ಯಾಪ್​ ಪ್ರಕರಣವೊಂದನ್ನ ಕೇವಲ 24 ಗಂಟೆಯಲ್ಲಿ ಭೇದಿಸಿದ್ದಾರೆ. ಇದು ಶಿವಮೊಗ್ಗ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾಕ್ಷಿಯಾಗಿದೆ. ಭದ್ರಾವತಿಯಲ್ಲಿ ಕಳೆದ 22 ನೇ ತಾರೀನಿನಂದು ಬಾಲಕನ ಕಿಡ್ನ್ಯಾಪ್​ ವೊಂದು ನಡೆದಿತ್ತು.

ಸಾರ್ವಜನಿಕರ ಗಮನಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ/ ಈ ಎರಡು ದಿನ ಮೈಸೂರು-ತಾಳಗಪ್ಪ ಟ್ರೈನ್​ನಲ್ಲಿ ಈ ವ್ಯವಸ್ಥೆಯಿದೆ/ ವಿವರ ಇಲ್ಲಿದೆ

ಅಂದಿನ ರಾತ್ರಿ ಇಟಿಯೋಸ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಭದ್ರಾತಿ  ನಗರದ (bhadravati) ಅಂಡರ್ಬ್ರಿಡ್ಜ್ ಬಳಿ   ಕೃತ್ಯವನ್ನ ಎಸೆಗಿದ್ದರು, ಅಲ್ಲಿ ಎಳನೀರು ಮಾರಾಟ ಮಾಡುತ್ತಿದ್ದ ಅಪ್ರಾಪ್ತ ಬಾಲಕನ ಬಳಿ ಬಂದ ಅಪರಿಚತನೋರ್ವ ನಾಲ್ಕು ಎಳನೀರು ಖರೀದಿಸಿದ್ದ. ಬಳಿಕ  ಹಣವನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಲಾಗಿದ್ದ ವಾಹನದ ಬಳಿ ಹೋಗಿ ಕೇಳು, ಎಂದು ಸೂಚಿಸಿದ್ದ.  ಹಣ ಪಡೆಯಲು ಕಾರಿನ ಬಳಿಗೆ ಹೋಗಿದ್ದ ಸಂದರ್ಭದಲ್ಲಿ ಬಾಲಕನನ್ನು ಏಕಾಏಕಿ ಅಪಹರಿಸಲಾಗಿತ್ತು (kidnap)

ಮಲೆನಾಡು ಟುಡೆ ಮಾಹಿತಿ : ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಗುಡ್​ ನ್ಯೂಸ್ / ದಾವಣಗೆರೆಆನವೇರಿಮಲೆಬೆನ್ನೂರುಹರಿಹರ ಕೃಷಿಕರಿಗೆ ಅನುಕೂಲ

ಸಂಬಂಧ  ಭದ್ರಾವತಿ ನ್ಯೂಟೌನ್ ಪೊಲೀಸ್ ಸ್ಟೇಷನ್​ನಲ್ಲಿ (new town police station)ಬಾಲಕನ ತಂದೆ  ನೀಡಿದ್ದ ದೂರಿನ ಅನ್ವಯ ಐಪಿಸಿ 364()ಸಹಿತ 34 ಐಪಿಸಿ ಅಡಿಯಲ್ಲಿ ಕೇಸ್​ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರು ಕೇವಲ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. 

 ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತುಹೇಗಾಯ್ತುವಿವರ ಓದಿ

ಅಪಹರಣದ ಬಳಿಕ ಬಾಲಕನ ತಂದೆಗೆ ಫೋನ್​ ಮಾಡಿದ್ದ ಆರೋಪಿಗಳು 10 ಲಕ್ಷ ರೂಪಾಯಿ ಕೊಡಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದರು, ಆರೋಪಿಯೊಬ್ಬರ ಹೆಸರನ್ನು ಹೇಳಿದ್ದರುಇದು ಪ್ರಕರಣದಲ್ಲಿ ಟ್ವಿಸ್ಟ್ ನೀಡಿತ್ತು, ಆರೋಪಿಗಳ ಹೇಳಿದ ಹೆಸರು ಹಾಗೂ ಕುಟುಂಬವೊಂದರ ಜೊತೆಗೆ ಕಿಡ್ನ್ಯಾಪ್​ ಆದ ಬಾಲಕ ಕುಟುಂಬದ ಜೊತೆ ಹಣಕಾಸಿನ ವಿಚಾರದಲ್ಲಿ ಗಲಾಟೆಯಾಗಿತ್ತು. ಹಿನ್ನೆಲೆಯನ್ನು ಹಿಂಬಾಲಿಸಿ ಪ್ರಕರಣದ ಬೆನ್ನಟ್ಟಿದ ಪೊಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದಿ್ದಾರೆ. 

 ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತುಹೇಗಾಯ್ತುವಿವರ ಓದಿ

ಪೊಲೀಸ್ ಪ್ರಕಟಣೆಯಲ್ಲಿಯೇ ತಿಳಿಸಿರುವ ಮಾಹಿತಿ ಪ್ರಕಾರ, ದಿನಾಂಕಃ 23-12-2022 ರಂದು ಅಪಹರಣಕ್ಕೊಳಗಾದ ಬಾಲಕನ್ನು ಪತ್ತೆ ಮಾಡಿದ ಪೊಲೀಸರು ಆರೋಪಿಗಳಾದ 1) ಮುಭಾರಕ್ @ ಡಿಚ್ಚಿ, 24 ವರ್ಷ, ವೆಲ್ಲಿಂಗ್ ಕೆಲಸ, ನೆಹರೂನಗರ, ಭದ್ರಾವತಿ, 2) ಜಾಬೀರ್ ಭಾಷಾ @ ರಾಬರ್ಟ್ 22 ವರ್ಷಚಾಲಕ ವೃತ್ತಿ, ಹಾನಂಭಿ ಏರಿಯಾ ಸಾಗರ, 3) ಮುಸ್ತಫಾ, 26 ವರ್ಷ, ಟೈಲ್ಸ್  ಕೆಲಸ, ಟಿಪ್ಪುನಗರ, ಶಿವಮೊಗ್ಗ. 4) ಅಬ್ದುಲ್ ಸಲಾಂ, 26 ವರ್ಷ, ಅಡಿಕೆ ವ್ಯಾಪಾರಿ, ನೂರುಲ್ ಹುದಾ ಮಸೀದಿ ಪಕ್ಕ ಕೆಳದಿ ರಸ್ತೆ ಸಾಗರ 5) ಇರ್ಫಾನ್, 31 ವರ್ಷಚಾಲಕ ವೃತ್ತಿ ವಾಸ ಅಣಲೆಕೊಪ್ಪಸಾಗರ ರವರನ್ನು ಬಂಧಿಸಿದ್ದಾರೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Share This Article