ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸೂರನಗದ್ದೆ ಮಾರ್ಗದ ಬಳಿಯಲ್ಲಿ ಇವತ್ತು ಆಕ್ಸಿಡೆಂಟ್ ಆಗಿತ್ತು ಬೈಕ್ ಸವಾರ, ನಿಯಂತ್ರಣ ತಪ್ಪಿ ಬಿದ್ದಿದ್ದರು. ಈ ವೇಳೆ ಅಲ್ಲಿಯೇ ಕಾರಿನಲ್ಲಿ ಬರುತ್ತಿದ್ದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರವರು, ಘಟನೆ ನೋಡಿ ಕೆಳಕ್ಕೆ ಇಳಿದು ಬಂದಿದ್ದಾರೆ.
ಘಟನೆಯಲ್ಲಿ ಬಿದ್ದು ಪೆಟ್ಟಾಗಿದ್ದ ಗಾಯಾಳುವನ್ನು ಉಪಚರಿಸಿದ ಅವರು, ಬಳಿಕ, ಆಟೋ ಸಿಗುತ್ತಾ ವಿಚಾರಿಸಿದರು, ಬಳಿಕ ಆಟೋ ಬರುವುದು ತಡವಾಗಬಹುದು ಎಂದು ತಮ್ಮ ಕಾರಿನಲ್ಲಿಯೇ ಗಾಯಗೊಂಡವರನ್ನು ಆಸ್ಪತ್ರೆಗೆ ಕರದೊಯ್ದು ಚಿಕಿತ್ಸೆ ವ್ಯವಸ್ಥೆ ಮಾಡಿದರು.
ನಮ್ಮ ಸೋಶಿಯಲ್ ಮೀಡಿಯಾ : ಟ್ವಿಟ್ಟರ್ : ಫೇಸ್ಬಕ್ : ಇನ್ಸ್ಟಾಗ್ರಾಮ್ : ಟೆಲಿಗ್ರಾಂ : ವಾಟ್ಸ್ಯಾಪ್
