ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತ್ಯಾಗರ್ತಿಯಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದೆ. ಕಳೆದ ಕೆಲವೇ ದಿನಗಳಲ್ಲಿ ಪದೇ ಪದೇ ಚಿರತೆ ಕಾಣಿಸಿಕೊಳ್ತಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡುವಂತೆ ಮಾಡಿದೆ. ಇತ್ತೀಚೆಗೆ ಈ ಸಂಬಂಧ ಅರಣ್ಯ ಇಲಾಖೆ ಸ್ಥಳಕ್ಕೆ ಬಂದು ಚಿರತೆ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಏನಾಯ್ತು?
ಸಾಗರ ತಾಲ್ಲೂಕಿನ ತ್ಯಾಗರ್ತಿಯಲ್ಲಿನ ಬಸವರಾಜ್ ಎಂಬವರ ತೋಟದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಆನಂತರ ಚಿರತೆ ಸ್ಥಳೀಯರ ತೋಟಗಳಲ್ಲಿ ಓಡಾಡ್ತಿರುವುದು ಕಾಣಿಸಿದೆ. ಚಿರತೆ ಕಾಣಿಸುವುದು ಹೊಸ ವಿಷಯವೇನಲ್ಲವಾದರೂ, ಅದರು ಜನ ಜಾನುವಾರು ಓಡಾಡುವ ಸ್ಥಳಗಳಲ್ಲಿ ತಿರುಗಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಇದನ್ನು ಸಹ ಓದಿ : ಶಿವಮೊಗ್ಗಕ್ಕೆ ಭ್ರಷ್ಟರು ಎಸಿ ಆಗುವುದು ಬೇಡ/ ರಾಜ್ಯ ಸರ್ಕಾರಕ್ಕೆ ಒತ್ತಾಯ/ ಏನಿದು ಬೇಡಿಕೆ ವಿವರ ಇಲ್ಲಿದೆ ಓದಿ
ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಬಂದಿರುವ ಅರಣ್ಯ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿಯಲು ಮುಂದಾಗಿದ್ದಾರೆ. ಈ ಸಂಬಂಧ ಬೋನನ್ನ ಇಡಲಾಗಿದೆ.
ನಮ್ಮ ಸೋಶಿಯಲ್ ಮೀಡಿಯಾ : ಟ್ವಿಟ್ಟರ್ : ಫೇಸ್ಬಕ್ : ಇನ್ಸ್ಟಾಗ್ರಾಮ್ : ಟೆಲಿಗ್ರಾಂ : ವಾಟ್ಸ್ಯಾಪ್
