ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಅರೆಬಿಳಸಿ ಕ್ಯಾಂಪನ ನಿವಾಸಿ ನಾಗರಾಜ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್ನಲಾದ, ಸ್ಥಳೀಯ ತೋಟದ ಮಾಲೀಕನನ್ನ ಪೊಲೀಸರು ಬಂಧಿಸಿದ್ದಾರೆ.
ಇದನ್ನು ಸಹ ಓದಿ : ಹರತಾಳು ಹಾಲಪ್ಪರವರು ಶರಾವತಿ ಸಂತ್ರಸ್ತರಿಗಾಗಿ ಧರ್ಮಸ್ಥಳದಲ್ಲಿ ನ್ಯಾಯ ಕೇಳಲು ಹೋಗಿದ್ದಕ್ಕೆ ಕಾಂತಾರ ಮಹಿಮೆ ಕಾರಣ
ನಡೆದಿದ್ದು ಏನು?
33 ವರ್ಷದ ನಾಗರಾಜ್ ಎಂಬವರು, ಮಧುಸೂದನ್ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿದ್ದ. ಈತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ತೋಟದ ಮಾಲೀಕ ಮಧುಸೂದನ್ ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂಬುದು ಆರೋಪ, ಈ ಮಧ್ಯೆ ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ನಾಗರಾಜ್ನ ಪತ್ನಿ ಆ ನಂತರ ಸಾಂತ್ವನ ಕೇಂದ್ರದಲ್ಲಿ ಪತ್ತೆಯಾಗಿದ್ದರಂತೆ, ಆನಂತರ ಆಕೆಯ ಕುಟುಂಬಸ್ಥರು , ನಾಗರಾಜ್ನ ಪತ್ನಿಯನ್ನ ತವರಿಗೆ ಕರೆದುಕೊಂಡು ಹೋಗಿದ್ದಾರೆ.
ಈ ಮಧ್ಯೆ ನಾಗರಾಜ್ ತನ್ನ ಪತ್ನಿ ಜೊತೆ ಮಧುಸೂದನ್ಗೆ ಸಂಬಂಧ ಇದೆ ಎಂದು ಪದೇ ಪದೇ ಜಗಳವಾಡುತ್ತಿದ್ದನಂತೆ. ಅಲ್ಲದೆ ಈ ಸಂಬಂಧ ಹಲವು ಸಹ ರಾಜಿ ಪಂಚಾಯಿತಿಗಳು ನಡೆದಿದ್ದು, ಅದರ ನಡುವೆ ಮಧುಸೂದನ್ ನಿಂದಿಸಿದ್ದಾರೆ ಎಂದು ದೂರಲಾಗಿದೆ.
ಇದನ್ನು ಸಹ ಓದಿ : ಶಿವಮೊಗ್ಗಕ್ಕೆ ಭ್ರಷ್ಟರು ಎಸಿ ಆಗುವುದು ಬೇಡ/ ರಾಜ್ಯ ಸರ್ಕಾರಕ್ಕೆ ಒತ್ತಾಯ/ ಏನಿದು ಬೇಡಿಕೆ ವಿವರ ಇಲ್ಲಿದೆ ಓದಿ
ಇದರ ನಡುವೆ ಕಳೆದ ಸೋಮವಾರ ನಾಗರಾಜ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡು ಮಹಜರ್ ನಡೆಸಿದ ಪೊಲೀಸರಿಗೆ ನಾಗರಾಜ್ನದ್ದು ಎನ್ನಲಾದ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ಪತ್ನಿ ಮಕ್ಕಳನ್ನು ದೂರ ಮಾಡಿರುವ ಮಧುಸೂದನ್ ತನ್ನ ಸಾವಿಗೆ ನೇರ ಕಾರಣ ಎಂದು ಬರೆಯಲಾಗಿದೆ ಎಂಬುದು ಗೊತ್ತಾಗಿದೆ. ‘
ನಮ್ಮ ಸೋಶಿಯಲ್ ಮೀಡಿಯಾ : ಟ್ವಿಟ್ಟರ್ : ಫೇಸ್ಬಕ್ : ಇನ್ಸ್ಟಾಗ್ರಾಮ್ : ಟೆಲಿಗ್ರಾಂ : ವಾಟ್ಸ್ಯಾಪ್
ಸದ್ಯ ಪ್ರಕರಣ ಸಂಬಂಧ ಹೊಳೆಹೊನ್ನೂರು ಠಾಣೆ ಪೊಲೀಸರು (hole honnur police station) ಮಧುಸೂದನ್ರನ್ನ ಬಂಧಿಸಿದ್ದು, ಪತ್ರಿಕೆಯೊಂದರ ಪ್ರಕಾರ, ಮಧುಸೂದನ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಲಾಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
