ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿ ಸಮೀಪ ಸಿಗುವ ಈರಗಲ್ಲು ಎಂಬುವಲ್ಲಿ ಇವತ್ತು ಆಕ್ಸಿಡೆಂಟ್ ಆಗಿದೆ. ಇಲ್ಲಿನ ಕ್ರಾಸ್ನಲ್ಲಿ ಬೈಕ್ ಹಾಗೂ ಲಗೇಜ್ ಆಟೋ ನಡುವೆ ಡಿಕ್ಕಿಯಾಗಿ, ಅಪಘಾತವಾಗಿದೆ. ಗಟನೆಯಲ್ಲಿ ಬೈಕ್ ಸವಾರ 52 ವರ್ಷ ತಿಮ್ಮಪ್ಪ ಎಂಬವರು ಸಾವನ್ನಪ್ಪಿದ್ದಾರೆ.
ಬೈಕ್ನಲ್ಲಿ ತಿಮ್ಮಪ್ಪ ಹಾಗೂ ಮಂಜಪ್ಪ ಬೆಳ್ಳೋಡಿ ಎಂಬವರು ಬರುತ್ತಿದ್ದರು. ಈ ವೇಳೆ ತಿರುವಿನಲ್ಲಿ ಬೈಕ್ ಮತ್ತು ಲಗೇಜ್ ಆಟೋ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ತಿಮ್ಮಪ್ಪರವರನ್ನ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಅವರು ಅಸು ನೀಗಿದ್ದಾರೆ. ಇನ್ನೂ ಹಿಂಬದಿ ಕುಳಿತಿದ್ದ ಮಂಜಪ್ಪರವರಿಗೂ ಘಟನೆಯಲ್ಲಿ ತೀವ್ರ ಗಾಯಗಳಾಗಿದೆ. ಸ್ಥಳಕ್ಕೆ ಕಾರ್ಗಲ್ ಪೊಲೀಸರು ಬಂದಿದ್ದು ಘಟನೆ ಸಂಬಂಧ ಪರಿಶೀಲನೆ ನಡೆಸ್ತಿದ್ದಾರೆ.
ನಮ್ಮ ಸೋಶಿಯಲ್ ಮೀಡಿಯಾ : ಟ್ವಿಟ್ಟರ್ : ಫೇಸ್ಬಕ್ : ಇನ್ಸ್ಟಾಗ್ರಾಮ್ : ಟೆಲಿಗ್ರಾಂ : ವಾಟ್ಸ್ಯಾಪ್
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
