BREAKING NEWS : ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಗೆ ​ ಶೀಘ್ರದಲ್ಲಿಯೇ ಹೊಸ ಅಧ್ಯಕ್ಷ? ಯಾರಾಗ್ತಾರೆ ಡಿಸ್ಟ್ರಿಕ್ಟ್​ ಪ್ರೆಸಿಡೆಂಟ್ ಇಲ್ಲಿದೆ ವರದಿ

Malenadu Today

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ ಸಮಿತಿಗೆ ಹೊಸ ಅಧ್ಯಕ್ಷರು ಆಯ್ಕೆಯಾಗುತ್ತಾರಾ? ಹೀಗೊಂದು ಚರ್ಚೆಯು ಕಾಂಗ್ರೆಸ್​ ಪಾಳಯದಲ್ಲಿ ಕೇಳಿ ಬರುತ್ತಲೇ ಮಲೆನಾಡು ಟುಡೆ. ಕಾಂ ಅದರ ಬೆನ್ನು ಹಿಡಿದು ಪರಿಶೀಲನೆ ಆರಂಭಿಸಿತು.  

ಈ ಸಂದರ್ಭದಲ್ಲಿ ಕಾಂಗ್ರೆಸ್​ ಜಿಲ್ಲಾ ಅಧ್ಯಕ್ಷ ಸ್ಥಾನದ ಬದಲಾವಣೆಗೆ ರಾಜ್ಯ ಕಾಂಗ್ರೆಸ್​ ನಾಯಕರು ಮುಂದಾಗಿರುವುದು ನಿಜ ಎನ್ನುವುದು ಗೊತ್ತಾಗಿದೆ. ಇಷ್ಟೆ ಅಲ್ಲದೆ ಈಗಾಗಲೇ ಐದು ಜಿಲ್ಲೆಗಳ ಅಧ್ಯಕ್ಷ ಸ್ಥಾನ ಬದಲಾವಣೆಯನ್ನು ಮಾಡಿದ್ದ ರಾಜ್ಯ ಕಾಂಗ್ರೆಸ್​ ನಾಯಕರ ಮನಸ್ಸಿನಲ್ಲಿ ಆ ಸಂದರ್ಭದಲ್ಲಿಯೇ ಶಿವಮೊಗ್ಗ ಜಿಲ್ಲಾಧ್ಯಕ್ಷ ಸ್ಥಾನವನ್ನು ಬದಲಾವಣೆ ಮಾಡುವ ಇಂಗಿತ ವ್ಯಕ್ತವಾಗಿತ್ತು. 

ಗುಡ್ ನ್ಯೂಸ್​ : ಕಾಶಿಪುರ ರೈಲ್ವೆ ಅಂಡರ್​ ಪಾಸ್​ ಕಾಮಗಾರಿ ಮುಕ್ತಾಯ ಹಂತಕ್ಕೆ

ಈ ನಡುವೆ ಶಿವಮೊಗ್ಗದಲ್ಲಿ ನಡೆದ ಸಮಾವೇಶ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಮುಂದಕ್ಕೆ ಹೋಗಿತ್ತು ಎನ್ನಲಾಗಿದೆ. ಇನ್ನೂ ಮೂಲಗಳ ಪ್ರಕಾರ, ಇನ್ನೊಂದು ವಾರ ಅಥವಾ ಹದಿನೈದು ದಿನಗಳ ಒಳಗಾಗಿ ಅಧ್ಯಕ್ಷ ಸ್ಥಾನದ ಬಗ್ಗೆ ಒಂದು ನಿರ್ಧಾರ ಹೊರಬೀಳಲಿದೆ. 

ಯಾರ್ಯಾರು ಆಕಾಂಕ್ಷಿಗಳು?

ಈ ಮಧ್ಯೆ ಬದಲಾಗಬಹುದಾದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಯಾರ್ಯಾರು ಎನ್ನುವ ಸುದ್ದಿಯನ್ನು ಅರಸಿದಾಗ ಸಿಕ್ಕಂತ ಹೆಸರುಗಳು ಸಾಕಷ್ಟು ಕುತೂಹಲ ಮೂಡಿಸಿದೆ. ಮುಖ್ಯವಾಗಿ ಜಿಲ್ಲಾಧ್ಯಕ್ಷ ಸ್ಥಾನದ ರೇಸ್​ನಲ್ಲಿ ಆರ್​.ಎಂ ಮಂಜುನಾಥ್​ ಗೌಡರ ಹೆಸರು ಕೇಳಿಬಂದಿದೆ. ಇವರಷ್ಟೆ ಅಲ್ಲದೆ ಕಾಂಗ್ರೆಸ್​ನ ಎಸ್​ಪಿ ದಿನೇಶ್​ರವರ ಹೆಸರು ಪ್ರಬಲವಾಗಿ ಕೇಳಿಬಂದಿದ್ದು, ಮುಂಚೂಣಿಯಲ್ಲಿದೆ. ಇವರಿಬ್ಬರು ಮುಖಂಡರಲ್ಲದೆ, ಆರ್ ಪ್ರಸನ್ನಕುಮಾರ್ ಹಾಗೂ ರಮೇಶ್​ ಹೆಗ್ಡೆಯವರ ಹೆಸರು ಸಹ ಅಧ್ಯಕ್ಷ ಸ್ಥಾನದ ಗಾದಿಗೆ ಕೇಳಿಬರುತ್ತಿದೆ. 

ಇದನ್ನು ಸಹ ಓದಿ : BREAKING NEWS : ಚುನಾವಣಾ ಕಣದಿಂದ ಹಿಂದೇ ಸರಿದರಾ ಡಾ.ಧನಂಜಯ್​ ಸರ್ಜಿ/ ಸದ್ಯದಲ್ಲಿಯೇ ಬಿಜೆಪಿಗೆ

ಈ ಬಗ್ಗೆ ಇದುವರೆಗೂ ಯಾವುದೇ ಅಂತಿಮ ನಿರ್ಣಯಗಳು ಆಗಿಲ್ಲ, ಆದಾಗ್ಯು ಜಿಲ್ಲಾ ಮುಖಂಡರ ಸಹಮತ ಮತ್ತು ಮುಂದಿನ ಚುನಾವಣೆ ದೃಷ್ಟಿಯಿಂದ ಅಧ್ಯಕ್ಷ ಸ್ಥಾನಕ್ಕೆ ನಾಯಕನ ಆಯ್ಕೆ ಮಾಡುವ ಸಾಧ್ಯತೆ ಇದೆ. ಇನ್ನೂ ಹಾಲಿ ಅಧ್ಯಕ್ಷ ಹೆಚ್​.ಎಸ್​ ಸುಂದರೇಶ್​ರವರು ಸಹ  ಅಧ್ಯಕ್ಷರಾಗಿ ಮುಂದುವರಿಯುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ. 

ದಿವಂಗತ ಸಾರೆಕೊಪ್ಪ ಬಂಗಾರಪ್ಪರವರ ಅಪರೂಪದ ವಿಡಿಯೋ ನೋಡಿ

ಒಟ್ಟಾರೆ, ಆಯ್ಕೆ ಪ್ರಕ್ರಿಯೆ ಅಂಗಳದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದ್ದು ಅಂತಿಮ ನಿರ್ಣಯ ರಾಜ್ಯ ಕಾಂಗ್ರೆಸ್​ ನಾಯಕರು  ಕೈಗೊಳ್ಳಲಿದ್ದಾರೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ವರದಿ : ಅಜ್ಜಿಮ‌ನೆ

Share This Article