Shimoga district | ಮುಂಬೈನ ಎ.ಟಿ.ಎಸ್, ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಚ್ ಶೀಟ್ ನಲ್ಲಿ ಮಲೆನಾಡು ಭಾಗ-01 JP Story

Malenadu Today

Shimoga district | 2011 ರಲ್ಲಿ ಮುಂಬೈ ಸ್ಪೋಟಿಸಿತ್ತು ಮಲೆನಾಡಿನ ಸ್ಪೋಟಕ! ಮುಂಬೈನ ಎ.ಟಿ.ಎಸ್, ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಚ್ ಶೀಟ್ ನಲ್ಲಿ ಮಲೆನಾಡು ಥಳಕು ಹಾಕಿಕೊಂಡಿದ್ದು ಹೇಗೆ ಗೊತ್ತಾ? ಭಾಗ-01 JP Story

ಶಿವಮೊಗ್ಗ (shimoga) : ಇವತ್ತು ಇಬ್ಬರು ಶಂಕಿತರನ್ನು ಬಂಧಿಸಿರುವ ಕಾರಣಕ್ಕೆ ಶಿವಮೊಗ್ಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅಲ್ಲದೆ ಶಿವಮೊಗ್ಗ ಪೊಲೀಸರ ಕಾರ್ಯಾಚರಣೆ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಇದೇ ರೀತಿಯಲ್ಲಿ ಶಿವಮೊಗ್ಗ ಪೊಲೀಸರು 2011 ರಲ್ಲಿಯು ರೋಚಕ ಕಾರ್ಯಾಚರಣೆ ನಡೆಸಿದ್ರು ಎಂಬುದು ನಿಮಗೆ ಗೊತ್ತಾ.. ಅದನ್ನೆ ಈಗ ಹೇಳಲು ಹೊರಟಿದ್ದೇನೆ. ಒಟ್ಟು ಮೂರು ಪಾರ್ಟ್​ಗಳಲ್ಲಿ

ಮಲೆನಾಡಿನೊಂದಿಗೆ ಉಗ್ರರು ಹೊಂದಿದ್ದ ನಂಟು ಗುಟ್ಟಾಗೇನು ಉಳಿದಿಲ್ಲ. ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಮೋಸ್ಟ್ ವಾಂಟೆಡ್ ಲೀಡರ್ಸ್ಗಳು  ಇಲ್ಲಿ ರಾಜಾಶ್ರಯ ಪಡೆದಿದ್ದೆ ಇದಕ್ಕೆ ಸಾಕ್ಷಿ.

ಅದು 2011

ಆದ್ರೆ 2011 ರಲ್ಲಿ ಮುಂಬೈ ನಲ್ಲಿ ನಡೆದ ಸ್ಟೋಟ ಪ್ರಕರಣ, ಅಂದು ಮಲೆನಾಡಿನತ್ತ ಬೊಟ್ಟು ಮಾಡಿ ತೋರಿಸಿದ್ದು, ಎಲ್ಲರನ್ನು ಆತಂಕ್ಕೀಡುಮಾಡಿತ್ತು. ಮುಂಬೈ ಸ್ಟೋಟಕ್ಕೆ ಭಯೋತ್ಪಾಧಕರು ಮಲೆನಾಡಿನ ಕಲ್ಲುಕ್ವಾರಿಗಳ  ಸ್ಪೋಟಕಗಳನ್ನು ಬಳಸಿಕೊಂಡಿರುವ ಆಘಾತಕಾರಿ ಅಂಶಯನ್ನು ಮಹರಾಷ್ಟ್ರದ ಎ.ಟಿ.ಎಸ್ (ಉಗ್ರ ನಿಗ್ರಹ ದಳ) ಬಹಿರಂಗಗೊಳಿಸಿತ್ತು.

Malenadu Today

ಹೌದು 2015 ರಲ್ಲಿ ಮಹರಾಷ್ಟ್ರ ಎ.ಟಿ.ಎಸ್ ಸಂಸ್ಥೆ ಅಲ್ಲಿನ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಸ್ಪೋಟಕಗಳ ಪೂರೈಕೆಯಲ್ಲಿ ಮಲೆನಾಡನ್ನು ಉಲ್ಲೇಖಿಸಿದೆ. ಹಾಗಾದ್ರೆ ಮಲೆನಾಡಿಗೂ ಉಗ್ರರಿಗೂ ಇರುವ ನಂಟೇನು ಅಂತಿರಾ? .

ಆತಂಕಕ್ಕೆ ಶೆಲ್ಟರ್​!?

ಮಲೆನಾಡು ನಕ್ಸಲರಿಗೆ, ಭಯೋತ್ಪಾಧಕರಿಗೆ ಕೇವಲ ಶೆಲ್ಟರ್ ಕೊಟ್ಟಿಲ್ಲ. ಅವರಿಗೆ ಉಡುಗೊರೆಯಾಗಿ ಸ್ಪೋಟಕಗಳನ್ನು ನೀಡಿದೆ ಎಂಬ ಸಂಗತಿ ಅವತ್ತೆ ಬ್ರೇಕಿಂಗ್ ನ್ಯೂಸ್ ಆಗಿತ್ತು.  ದೇಶದಲ್ಲೆಲ್ಲೋ ವಿದ್ವಂಸಕ ಕೃತ್ಯ ಎಸಗಿದ ಅದೆಷ್ಟೋ ಟೆರಿರಿಸ್ಟ್ ಗಳು, ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆಶ್ರಯ ಪಡೆದಿರೋ ವಿಚಾರ ಹಳೆಯದ್ದೆ.

ಇಲ್ಲೆ ಬಹುಕಾಲವಿದ್ದು,ಇಲ್ಲಿ ತಮ್ಮ ನೆಲೆಗೆ ಕಾರ್ಯಚಟುವಟಿಕೆಗೆ ಸಿಗಬಹುದಾದ ಎಲ್ಲಾ ಸವಲತ್ತುಗಳ ಮಾಹಿತಿ ಸಂಗ್ರಹಿಸಿದ ಉಗ್ರರು, ದೇಶದಲ್ಲಿ ವಿದ್ವಂಸಕ ಕೃತ್ಯ ನಡೆಸಲು ಇಲ್ಲಿನ ಸ್ಪೋಟಕಗಳನ್ನು ಬಳಸಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಅದೆಲ್ಲಾ ಎಲ್ಲಿಂದ ಸಿಕ್ಕಿದ್ದವು ಗೊತ್ತಾ?

ಅರೇ ಇವರಿಗೆ ಸ್ಪೋಟಕಗಳು ಹೇಗೆ ಸಿಕ್ತು ಅಂತಾ ನಿಮಗೂ ಅನಿಸಿರಬಹುದು. ಮಲೆನಾಡಿನ ಸುತ್ತಮುತ್ತಲಿರುವ ಕಲ್ಲುಕ್ವಾರಿಗಳಲ್ಲಿ ಸ್ಪೋಟಕ್ಕೆ ಬಳಸುವ ರಸಾಯನಿಕ ವಸ್ತುಗಳನ್ನೇ ಭಯೋತ್ಪಾಧಕರು, ಮುಂಬೈ ಬ್ಲಾಸ್ಟ್ ಗೆ ಬಳಸಿದ್ದಾರೆಂಬ ಮಾಹಿತಿಯನ್ನು  ಮಹಾರಾಷ್ಟ್ರದ ಌಂಟಿ ಟೆರರಿಸ್ಟ್ ಸ್ಕ್ವಾರ್ಡ್ (ಎ,ಟಿ,ಎಸ್ ) ಬಹಿರಂಗಗೊಳಿಸಿತ್ತು.

Malenadu Today

ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ವಿರುದ್ಧ ಮಹರಾಷ್ಟ್ರ ಭಯೋತ್ಪಾದನ ನಿಗ್ರಹ ದಳ,(ಎಟಿಎಸ್) 2015 ರಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿ ಈ ಅನುಮಾನ ಹುಟ್ಟುಹಾಕುವಂತೆ ಮಾಡಿತ್ತು. 

ಇಂಡಿಯನ್ ಮುಜಾಹಿದ್ದೀನ್ ಉಗ್ರ ಯಾಸಿನ್ ಭಟ್ಕಳ್,ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸಂಚರಿಸಿದ ಹಿನ್ನಲೆಯಲ್ಲಿ ತನಿಖಾ ಸಂಸ್ಥೆಗಳು ಜಿಲ್ಲೆಯತ್ತ ಕೆಂಗಣ್ಣು ಬೀರಿದ್ದವು.

ಆಮೇಲೇ ಆಮೇಲೆ?

2011 ರ ಜುಲೈ 13 ರಂದು ಮುಂಬೈ ನಲ್ಲಿ ಸಂಭವಿಸಿದ್ದ ತ್ರಿವಳಿ ಸ್ಪೋಟದಲ್ಲಿ 27 ಮಂದಿ ಸಾವನ್ನಪ್ಪಿದ್ರು,127 ಮಂದಿ ಗಾಯ ಗೊಂಡಿದ್ರು.

ಸ್ಪೋಟದ ಹಿಂದೆ ಇಂಡಿಯನ್ ಮುಜಾಯಿದ್ದೀನ್  ಸಂಘಟನೆ ಸಂಸ್ಥಾಪಕ ರಿಯಾಸ್ ಭಟ್ಕಳ್,ಆತನ ಸಹೋದರ ಯಾಸಿನ್ ಭಟ್ಕಳ್ ಪಾತ್ರವಿತ್ತು.

ಭಟ್ಕಳ್ ಸಹೋದರರ ಸಾರಥ್ಯದಲ್ಲಿ ನಡೆಯುತ್ತಿದ್ದ ಇಂಡಿಯನ್ ಮುಜಾಹಿದ್ದಿನ್ ಉಗ್ರ ಸಂಘಟನೆ ಇರುವುದನ್ನು ಪತ್ತೆ ಹಚ್ಚಿದ ಎಟಿಎಸ್ ಅಧಿಕಾರಿಗಳು ಅಂದು ಯಾಸಿನ್ ಭಟ್ಕಳ್ ಹಾಗು ಆತನ ಸಹಚರ ಅಸಾದುಲ್ಲ ಹತ್ತರ್ ನನ್ನು ಬಂಧಿಸಿದ್ರು,.

Malenadu Today

ಆದರೆ ದಾಳಿಗೆ ಸ್ಪೋಟಕ ರವಾನೆಯಾದ ಮಾಹಿತಿ ಲಭ್ಯವಾಗಿರಲಿಲ್ಲ. 2014 ರಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಇಂಡಿಯನ್ ಮುಜಾಹಿದ್ದಿನ್ ನ ಘಟಕವನ್ನು ಭೇದಿಸಿ, ಡಾಕ್ಟರ್ ಸೈಯದ್ ಇಸ್ಮಾಯಿಲ್ ಅಫಾಕ್ (34) ಮತ್ತು ಆತನ ಸಹಚರ ಸದ್ದಾಂ ಹುಸೇನ್ (35) ಬಂಧಿಸಿದ್ದರು.

ಮಹರಾಷ್ಟ್ರ ಎಟಿಎಸ್  ಅಧಿಕಾರಿಗಳು ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ,2011 ರ ಮುಂಬೈ ಸ್ಪೋಟಕ್ಕೆ ರಾಜ್ಯದಿಂದ ಸ್ಪೋಟಕ ರವಾನೆಯಾಗಿರುವುದು ಖಚಿತವಾಗಿತ್ತು.ಇದನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.

ಶಿವಮೊಗ್ಗ ಚಿಕ್ಕಮಗಳೂರಿನಲ್ಲಿಯೇ ಇದ್ದ ಆತ

2006 ರಿಂದ 2011 ರವರೆಗೆ ದೇಶಾದ್ಯಂತ ಸಂಭವಿಸಿರುವ ವಿವಿಧ ಸ್ಪೋಟಗಳಿಗೆ, ಸ್ಪೋಟಕಗಳು ರವಾನೆಯಾಗಿರುವುದು ಕರ್ನಾಟಕದಿಂದಲೇ ಎಂಬ ಅನುಮಾನವನ್ನು ಈ ಹಿಂದೆ ತನಿಖಾ ಸಂಸ್ಥೆಗಳು ವ್ಯಕ್ತಪಡಿಸಿದ್ದವು.

2008 ರಲ್ಲಿ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸಾರಥ್ಯ ವಹಿಸಿಕೊಂಡಿದ್ದ ಯಾಸಿನ್ ಭಟ್ಕಳ್ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ವಿವಿಧೆಡೆ ಸಂಚರಿಸಿದ್ದ. ಹಣಗೆರೆ ಕಟ್ಟೆಗೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದ ಎಂದು ಹೇಳಲಾಗುತ್ತಿದೆ.

2015 ರಲ್ಲಿ ಯಾಸಿನ್ ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಸಭೆ ನಡೆಸುವಾಗ ಶಿವಮೊಗ್ಗ ಪೊಲಿಸರು ದಾಳಿ ನಡೆಸಿದ್ದರು. ಆದರೆ ದಾಳಿಗೆ ಕೆಲವೇ ನಿಮಿಷಗಳ ಮುಂಚೆ ಯಾಸಿನ್ ಅಭಯಾರಣ್ಯದಿಂದ ಕಾಲ್ಕಿತ್ತಿದ್ದ.

Malenadu Today

ಅಕ್ರಮ ಕಲ್ಲುಕ್ವಾರಿಗಳಲ್ಲಿ

ಭಟ್ಕಳ ಮೂಲದವನಾದ್ದರಿಂದ ಯಾಸಿನ್ ಗೆ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಅಕ್ರಮ ಕಲ್ಲುಕ್ವಾರಿಗಳ ಅರಿವಿತ್ತು. ಈ ಕ್ವಾರಿಗಳಿಂದ ಅಮೋನಿಯಮ್ ನೈಟ್ರೇಟ್ ಮತ್ತು ಜಿಲೆಟಿನ್ ಕಡ್ಡಿಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂಬುದು ಅವನಿಗೆ ಗೊತ್ತಿತ್ತು.

ಅದ್ದರಿಂದಲೇ ಆತ ಮಲೆನಾಡಿನ ಈ ಎರಡು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದ ಎಂದು ತನಿಖಾ ಸಂಸ್ಥೆಗಳು ಅನುಮಾನ ವ್ಯಕ್ತಪಡಿಸಿದ್ದವು. 

Shimoga district | 2011 ರಲ್ಲಿ ಮುಂಬೈ ಸ್ಪೋಟಿಸಿತ್ತು ಮಲೆನಾಡಿನ ಸ್ಪೋಟಕ! ಮುಂಬೈನ ಎ.ಟಿ.ಎಸ್, ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಚ್ ಶೀಟ್ ನಲ್ಲಿ ಮಲೆನಾಡು ಥಳಕು ಹಾಕಿಕೊಂಡಿದ್ದು ಹೇಗೆ ಗೊತ್ತಾ? ಭಾಗ-01 JP Story

2010 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಸ್ಪೋಟದ ಹಿಂದೆಯೂ ಮಲೆನಾಡಿನ ಕ್ವಾರಿಗಳಿಂದ ರವಾನೆಯಾದ ಅಮೋನಿಯಂ ನೈಟ್ರೇಟ್ ಬಳಕೆಯಾಗಿತ್ತು ಎಂದು ಯಾಸಿನ್ ವಿಚಾರಣೆ ವೇಳೆ,ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದ.ಹಾಗಾದ್ರೆ

Share This Article