BIG CRIME INVESTIGATION : Malenadu today story / SHIVAMOGGA ತೀರ್ಥಹಳ್ಳಿ ಕಾಡಲ್ಲಿ ಸಿಕ್ಕ ಸುಟ್ಟಕಾರಿನ ಕೊಲೆಯ ರಹಸ್ಯ ಬಯಲು? ಕೊಂದವರು ಯಾರು ಗೊತ್ತಾ? ಬಗಲಲ್ಲೇ ಇದ್ದಳಾ ಕೊಲೆಗಾತಿ?
ಕಳೆದ ಕೆಲ ದಿನಗಳ ಹಿಂದೆ ತೀರ್ಥಹಳ್ಳಿಯ ಮಿಟ್ಲಗೋಡು ಸಮೀಪದ ಕಾಡಿನಲ್ಲಿ ಸಿಫ್ಟ್ ಡಿಸೈರ್ ಕಾರೊಂದು ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಲ್ಲದೆ ಕಾರಿನಲ್ಲಿ ಸುಟ್ಟ ಮೃತದೇಹದ ಕಳೆಬರಹ ಸಹ ಕಾಣಿಸಿತ್ತು. ಹೇಳಿಕೇಳಿ ಆ ಜಾಗ ರಸ್ತೆಯಾಗಿರಲಿಲ್ಲ. ಜನವಸತಿಯ ಪ್ರದೇಶವೂ ಆಗಿರಲಿಲ್ಲ. ದಟ್ಟ ಕಾಡಿನ ನಡುವೆ ಕಾರನ್ನು ತಂದು ಬೆಂಕಿ ಹಚ್ಚಿ ಹೋಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು.
ಸಣ್ಣ ಮಕ್ಕಳಿಗೂ ಸ್ಪಷ್ಟವಾಗಿ ಗೊತ್ತಾಗುತ್ತಿದ್ದ ಈ ಕ್ರೈಂ ಸೀಕ್ವೆಲ್ನ್ನ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಶುಂಠಿ, ಅಡಕೆ ಮಾರಾಟದ ವಿಷಯದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಕೊಲೆಗಳು ನಡೆದು ಹೋಗಿವೆ. ಇದು ಕೂಡ ಅದೇ ಮಾದರಿಯ ಕೊಲೆ ಎನ್ನುವ ಪೊಲೀಸರದ್ದಾಗಿತ್ತು. ಹಾಗೊಂದು ವೇಳೆ ಆತ್ಮಹತ್ಯೆ ಮಾಡಿಕೊಳ್ಳಲೆಂದು ಕಾರು ತಂದು ಕಾಡಿನ ಮಧ್ಯೆ ನಿಲ್ಲಿಸಿಕೊಂಡು, ಆತ ಬೆಂಕಿಕೊಟ್ಟುಕೊಂಡಿರಬಹುದೇ ಎನ್ನುವ ಊಹೆಯು ಸಹ ಖಾಕಿಯ ಮನಸ್ಸಲ್ಲಿತ್ತು.
ಇನ್ನೂ ಈ ಮಧ್ಯೆ 2 ದಿನಗಳ ಹಿಂದಷ್ಟೆ ಮೃತರು ಯಾರು ಅನ್ನೋದು ಕಾರಿನ ರಿಜಿಸ್ಟ್ರೇಷನ್ ನಂಬರ್ನಿಂದ ಬಹುತೇಕ ಗೊತ್ತಾಗಿದೆ. ಆನಂದಪುರದ ವಿನೋದ್ ಕುಮಾರ್ರವರದ್ದೇ ಮೃತದೇಹ ಇರಬಹುದು ಎನ್ನುವುದು ಬಹುತೇಕ ಗೊತ್ತಾಗಿದೆ. ಆದಾಗ್ಯು ವೈಜ್ಞಾನಿಕವಾಗಿ ಸಾಬೀತು ಮಾಡಲು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಕ್ರೈಂ ಕಂಡು ಬಂದ ವಾರದಲ್ಲಿಯೇ ಸಿಕ್ಕಿಬಿದ್ದಳಾ ಕೊಲೆಗಾತಿ?
ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ ಕ್ರೈಂಗಳು ಅದು ನಡೆದಷ್ಟೆ ವೇಗವಾಗಿ ಅದರ ರಹಸ್ಯಗಳು ಬಯಲಾಗುತ್ತವೆ. ಆದಾಗ್ಯು ಮಿಟ್ಲಗೋಡುವಿನ ರಹಸ್ಯ ಈ ಕ್ಷಣದವರೆಗೂ ಹೊರಕ್ಕೆ ಬಿದ್ದಿರಲಿಲ್ಲ. ಮಲೆನಾಡು ಟುಡೇ ಈ ಸಂಬಂಧ ಬಲ್ಲ ಮೂಲಗಳ ಮಾಹಿತಿಯನ್ನ ಸ್ಪಷ್ಟವಾಗಿ ಕಲೆಹಾಕಿ ಓದುಗರಿಗೆ ನೀಡುತ್ತಿದೆ.
ಮಿಟ್ಲಗೋಡುವಿನಲ್ಲಿ ಸುಟ್ಟಕಾರಿನಲ್ಲಿ ಸಿಕ್ಕ ವಿನೋದ್ಕುಮಾರ್ರನ್ನ ಆನಂದಪುರದಲ್ಲಿಯೇ ಕೊಲೆಮಾಡಲಾಗಿದೆ ಎನ್ನುವ ಮಾಹಿತಿ ಮೊದಲಾಗಿ ಸಿಕ್ಕಿದ್ದು, ಅಲ್ಲಿಂದ ಶವವನ್ನು ತಂದು ತೀರ್ಥಹಳ್ಳಿಯ ಕಾಡಿನಲ್ಲಿ ಕಾರಿನ ಸಮೇತ ಬೆಂಕಿ ಹಚ್ಚಲಾಗಿದೆಯಂತೆ.
2ನೇ ವಿಷಯ ಎಂದರೆ, ವಿನೋದ್ ಕುಮಾರ್ರ ಸಾವಿನ ಹಿಂದೆ ಅನೈತಿಕ ಸಂಬಂಧ ಕಾರಣವಾಗಿದೆ ಎನ್ನುವುದು ಪ್ರಾಥಮಿಕ ಹಂತದಲ್ಲಿ ತಿಳಿದುಬಂದಿದೆ. ವಿನೋದ್ರ ಅನೈತಿಕ ಸಂಬಂಧವನ್ನು ಸಹಿಸಲಾಗದೇ ಆತನನ್ನ ತೀರಾ ಹತ್ತಿರದ ಸಂಬಂಧಿಕರೇ ಮುಗಿಸಿದ್ದಾರೆ ಎನ್ನುವುದು ತನಿಖೆಯಲ್ಲಿ ತಿಳಿದುಬರುತ್ತಿದೆ. ಹತ್ತಿರದ ಸಂಬಂಧಿಕರಲ್ಲಿ ಓರ್ವ ಮಹಿಳೆಯು ಇದ್ದಾಳೆ ಎನ್ನುವುದು ಸ್ಪಷ್ಟಮೂಲಗಳ ಮಾಹಿತಿ. ಈಕೆ ಸಂಬಂಧಿಕ ಈ ಕೃತ್ಯ ಎಸೆಗಿದ್ದಾನೆ ಎನ್ನುವ ಸುಳಿವು ಪೊಲೀಸರ ಬಳಿಯಲ್ಲಿದೆ.
ಬಹುತೇಕ ತನಿಖಾ ಹಂತದಲ್ಲಿ ಎಲ್ಲವನ್ನು ಹೇಳಲಾಗದು. ಏಕೆಂದರೆ ತನಿಖೆಯ ದಿಕ್ಕು ತಪ್ಪುವ ಸಾಧ್ಯತೆ ಇರುತ್ತದೆ. ಸದ್ಯ ಮಿಟ್ಲಗೋಡುವಿನ ಕೇಸ್ನಲ್ಲಿ ಪೊಲೀಸರು ತನಿಖೆಗೆ ತಕ್ಕ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಹಾಗಾಗಿ ಈ ವರದಿಯಲ್ಲಿ ಆರೋಪಿಗಳು ಯಾರು ಎನ್ನುವ ಹೆಸರನ್ನು ಹೇಳಲಾಗಿಲ್ಲ. ಒಮ್ಮೆ ಪೊಲೀಸರು ಸಾಕ್ಷ್ಯಗಳು ಹಾಗೂ ಸಂಬಂಧಪಟ್ಟ ವಿವರಗಳು ಪೂ