ಬಂಧಿ ಮಿತ್ರರ ‘ಬಂಧು’ ಡಾ.ಪಿ.ರಂಗನಾಥ್! ಕೇಂದ್ರ ಕಾರಾಗೃಹದ ಆಪ್ತಮಿತ್ರ ಅಧಿಕಾರಿಗಾಗಿ ಕಣ್ಣೀರಿಟ್ಟ ಕೈದಿಗಳು!

Malenadu Today


Malenadu today story / SHIVAMOGGA 
ಈ ಹಿನ್ನೆಲೆಯಲ್ಲಿ ರಂಗನಾಥ್​ರವರಿಗೆ ಇಂದು ಜೈಲು ಸಿಬ್ಬಂದಿ ಹಾಗು ಸಜಾಬಂಧಿಗಳಿಂದ ಅದ್ಧೂರಿ ಹಾಗೂ ಭಾವನಾತ್ಮಕವಾಗಿ ಬಿಳ್ಕೊಡುಗೆ ನೀಡಿದರು. ಮೊದಲು ಜೈಲಿನ ಆವರಣದಲ್ಲಿಯೇ ನಡೆದ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಬಂಧಿ ಮಿತ್ರರು (ಸಜಾಬಂಧಿಗಳು) ರಂಗನಾಥ್​ರವರ ಬಗ್ಗೆ ಮಾತನಾಡುತ್ತಾ ಭಾವುಕರಾದರು.

 ಜೈಲಿನಲ್ಲಿ ಡಾ.ಪಿ.ರಂಗನಾಥ್  ಕೈಗೊಂಡಿದ್ದ ಕ್ರಮಗಳಿಂದಾದ ವಿಶೇಷ ಬದಲಾವಣೆ ಹಾಗೂ ಕೈದಿಗಳಲ್ಲಿ ಆದ ವೈಯಕ್ತಿಕ ಬದಲಾವಣೆಗಳನ್ನು ಮೆಲುಕುಹಾಕಿದ ಕೆಲವು ಸಜಾಬಂಧಿಗಳು ಮಾತನಾಡುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. ಇನ್ನೂ ರಂಗನಾಥ್ ರವರು ಕಾರಾಗೃಹದಿಂದ ತೆರಳುತ್ತಿರುವುದಕ್ಕೆ ದುಃಖವಾಗ್ತಿದೆಯೆಂದ ಬಂಧಿಗಳು, ಪರಪ್ಪನ ಅಗ್ರಹಾರಕ್ಕೆ ವರ್ಗಾವಣೆಗೊಂಡಿರುವ ರಂಗನಾಥ್​ನವರು ಮುಂದೆ ಐಜಿ ಹುದ್ದೆಗೆ ಏರಬೇಕು ಎಂದು ಹಾರೈಸಿದರು. ಮತ್ತೆ ಕೆಲವು ಕೈದಿಗಳು, ರಂಗನಾಥ್​ರವರ ಬಗ್ಗೆ ಹಾಡನ್ನು ಬರೆದು ವಿಶೇಷವಾಗಿ ಹಾಡಿದರು.

ಬಿಳ್ಕೊಡುಗೆಯ ದೀಪ ಹಚ್ಚಿದ ಬೆಂಕಿ ಜಗದೀಶ್​

ವಿಶೇಷ ಅಂದರೆ, ಇವತ್ತು ನಡೆದ ಬಿಳ್ಕೊಡುಗೆ ಕಾರ್ಯಕ್ರಮದ ಉದ್ಘಾಟನೆಯ ವೇಳೆ ಪಿ.ರಂಗನಾಥ್​ರವರು ದೀಪವನ್ನು ಕೈದಿಯೊಬ್ಬರಿಂದ ಬೆಳಗಿಸಿದರು. ಇದನ್ನ ಕಂಡ ಅಲ್ಲಿದ್ದ ಕೈದಿಗಳು ಜೋರಾಗಿ ಚಪ್ಪಾಳೆ ತಟ್ಟಿ, ವಿಷಲ್​ ಹೊಡೆದು ಸಂಭ್ರಮಿಸಿದರು. ಬಳಿಕ ಸಜಾಬಂಧಿಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ ದೀಪ ಬೆಳಗಿಸಿದ ಕೈದಿಯ ಬಗ್ಗೆ ಮಾತನಾಡಿದ ರಂಗನಾಥ್ ದೀಪ ಬೆಳಗಿಸಿದ ಕೈದಿಯ ಹೆಸರು ಬೆಂಕಿ ಜಗದೀಶ್ ಅಲಿಯಾಶ್​ ಫೈರ್​ ಜಗ್ಗ. ಆತ ಹುಲ್ಲಿನ ಮೆದೆಗಳಿಗೆ ಬೆಂಕಿ ಹಚ್ಚುತ್ತಿದ್ದ. ಈಗ ದೀಪ ಬೆಳಗಿಸಿದ್ದಾನೆ. ಬೆಂಕಿಯನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದು ಈಗವನಿಗೆ ಅರ್ಥವಾಗಿದೆ ಎಂದರು. ಇದನ್ನು ಕೇಳುತ್ತಲೇ ಜಗದೀಶ್​ ಹೌದು ಸರ್ ಎಂದು ಬಾವುಕರಾದರು.

ಇನ್ನೂ ತಮ್ಮ ಮಾತಿನ ವೇಳೆ, ಜೈಲಿನಲ್ಲಿದ್ದು ಮನಪರಿವರ್ತನೆ ಮಾಡಿಕೊಂಡವರ ಬಗ್ಗೆ ವಿಶೇಷವಾಗಿ ಅಭಿಪ್ರಾಯವನ್ನು ಹಂಚಿಕೊಂಡರು. ತಪ್ಪು ಕೆಲಸ ಮಾಡಿ ಜೈಲಿಗೆ ಬಂದಿದ್ದ ಅಬು ಸಲೇಹಾ ಈಗ ಲೈಬ್ರರಿಯ ಹುಳವಾಗಿದ್ದಾನೆ. ತನ್ನನ್ನ ಓದುವಿಕೆಯಲ್ಲಿ ತೊಡಗಿಸಿಕೊಂಡ ಆತ, ಸುಮಾರು ಐವತ್ತಕ್ಕೂ ಹೆಚ್ಚು ಹಾಡುಗಳನ್ನ ಬರೆದಿದ್ದಾನೆ. ಹಲವರ ಬಗ್ಗೆ ಹಾಗೂ ಹಲವು ವಿಷಯಗಳ ಬಗ್ಗೆ ಹಾಡು ಬರೆಯುತ್ತಾ ಬದಲಾಗಿರುವ ಈ ಕೈದಿಯ ಮನಪರಿವರ್ತನೆಯಾಗಿದ್ದು, ಕೇವಲ 2 ನಿಮಿಷದ ಸಮಾಧಾ

Malenadu Today

ನದ ಮಾತಿನಲ್ಲಿ ಎಂದಾಗ, ಅಲ್ಲಿದ್ದವರೆಲ್ಲಾ ಭಾವುಕರಾದರು.

ಈ ಹಿಂದೆ ಶಿವಮೊಗ್ಗ ಜೈಲು ಎಂದರೆ ಅಲ್ಲಿ ದೊಂಬಿ ಗಲಾಟೆಗಳು ನಡೆಯುತ್ತಿತ್ತು. ಗಾಂಜಾ ಹೆಚ್ಚು ಸದ್ದು ಮಾಡಿತ್ತು. ಮೇಲಾಗಿ ಜೈಲು ಹೊಸದು ಎನ್ನುವುದನ್ನ ಹೊರತುಪಡಿಸಿದರೆ, ಸೂಕ್ತ ವ್ಯವಸ್ಥೆಗಳಿರಲಿಲ್ಲ. ಆದರೆ ರಂಗನಾಥ್ ಬಂದ ನಂತರ ಜೈಲಿನಲ್ಲಿ ಕೈದಿಗಳ ಮನಪರಿರರ್ತನೆಗೆ ಹೆಚ್ಚು ಒತ್ತು ನೀಡಿದರು. ಕೈದಿಗಳಿಗಾಗಿ ವಿಶೇಷ ಕಾರ್ಯಕ್ರಮ ಕಾರ್ಯಗಾರ,ಮನೋವಿಕಾಸಕ್ಕಾಗಿ ಹಾಗು ಅರೋಗ್ಯ ರಕ್ಷಣೆಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದರು. ಕೈದಿಗಳಿಗೆ ಗ್ರಂಥಾಲಯದಲ್ಲಿ ಓದುವ ಅಭ್ಯಾಸ ಬೆಳೆಸಿದರು.ಕೈದಿಗಳ ಮನರಂಜನೆಗಾಗಿ ಹತ್ತು ಹಲವು ಕಾರ್ಯಕ್ರಮ ರೂಪಿಸಿದರು.ಇದರಿಂದ ನಮ್ಮಲ್ಲಿ ಮನಪರಿರ್ತನೆಯ ಗಾಳಿ ಬೀಸಿತು. ಅವರ ವರ್ಗಾವಣೆ ಅತ್ಯಂತ ನೋವು ತಂದಿದೆ. 500 ಕೈದಿಗಳಿಗೆ ಇಂತಹ ಮನಪರಿವರ್ತನೆಯ ಭಾಗ್ಯ ಸಿಕ್ಕಿರುವಾಗ ಅದು ಬೆಂಗಳೂರಿನಲ್ಲಿರುವ 5000 ಕೈದಿಗಳಿಗೂ ಆ ಭಾಗ್ಯ ದೊರಕಲಿ ಎಂದು ಕೈದಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ,ಭಾವುಕರಾದರು.

ಇನ್ನು ಶಿವಮೊಗ್ಗ ಜೈಲಿನಲ್ಲಿ ಆಗಬೇಕಿದ್ದ ಕೆಲಸಗಳನ್ನು ಪೂರ್ತಿಗೊಳಿಸಿದ ರಂಗನಾಥ್ ಸಜಾಬಂಧಿಗೆ ಸಿಗಬೇಕಿದ್ದ ಸೌಲಭ್ಯಗಳನ್ನು ನೀಡುವಲ್ಲಿ ಆಸರೆಯಾದರು. ಜೈಲು ಬಂಧಿಗಳು ಮನೆಯವರ ಜೊತೆ ಮಾತನಾಡಲಿ ಎಂದು ಇನ್​ಕಮ್ಮಿಂಗ್​ ಕಾಲ್​ಷ್ಟೆ ವ್ಯವಸ್ಥೆಯಿರುವ ಮೊಬೈಲ್​ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಅಧಿಕಾರಿಯೊಬ್ಬರು ಏನೂ ಸಹ ಮಾಡಬಹುದು ಎಂದು ರಂಗನಾಥ್ ತೋರಿಸಿಕೊಟ್ಟಿದ್ದಾರೆ. ಅದಕ್ಕೆ ನಾವುಗಳೆ ಸಾಕ್ಷಿ ಅಂತಾ ಅಭಿಪ್ರಾಯ ಹಂಚಿಕೊಂಡ ಕೈದಿಗಳು ವರ್ಣಿಸಿದರು.

ಕೇವಲ ಕೈದಿಗಳಷ್ಟೆ ಅಲ್ಲದೆ, ಅದೀನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಕೂಡ ರಂಗನಾಥ್​ರವರ ಕಾರ್ಯವೈಖರಿಗೆ ಫಿದಾ ಆಗಿದ್ದಾರೆ. ಪರಪ್ಪನ ಅಗ್ರಹಾರಕ್ಕೆ ಹೊರಟು ನಿಂತಿದ್ದನ್ನ ನೋಡಿ ಭಾವುಕರಾದ ಸಿಬ್ಬಂದಿ, ಗುಲಾಬಿ ಹೂವುಗಳನ್ನ ನೀಡಿ ಬಿಳ್ಗೊಟ್ಟರು. ಮತ್ತೆ ಕೆಲವರು ಗುಲಾಬಿ ಹೂಗಳನ್ನು ಸುರಿದು, ಗೌರವ ಸಲ್ಲಿಸಿದರು.

  • ಜೈಲಿನಲ್ಲಿ ಶೇಕಡಾ 60 ರಷ್ಟು ಕೈದಿಗಳು ಪೋಕ್ಸೋ ಮತ್ತು ಗಾಂಜಾ ಕೇಸಿನಲ್ಲಿ ಇರುವವರೇ ಆಗಿದ್ದಾರೆ. ಇವರನ್ನು ಹೊಡೆದು ಬಡಿದು ಬುದ್ದಿಕಲಿಸಲು ಸಾಧ್ಯವಿಲ್ಲ. ಅವರ ಮನಪರಿರ್ತನೆಗೆ ಬೇಕಾದ ಹಲವು ಕಾರ್ಯಕ್ರಮಗಳನ್ನು ಕಾರ್ಯಗಾರಗಳನ್ನು ರೂಪಿಸಿದೆವು. ಇದಕ್ಕೆ ಸಿಬ್ಬಂದಿಗಳು ಸಹಕಾರ ನೀಡಿದ್ದಾರೆ. ಈಗ ಬಹಳಷ್ಟು ಮಂದಿ ಸಜಾಬಂಧಿಗಳ ಮನ ಮರಿವರ್ತನೆಯಾಗಿದೆ. ಜೀವನದಲ್ಲಿ ಎಲ್ಲಾ ದಾನಕ್ಕಿಂತಲೂ ದೊಡ್ಡ ದಾನ ಸಮಾಧಾನ ತಾಳ್ಮೆ..ಇದನ್ನು ಮನುಷ್ಯ ಕಳೆದುಕೊಳ್ಳದಿದ್ದರೇ ಅಪರಾಧ ಪ್ರಕರಣಗಳೇ ನಡೆಯುವುದಿಲ್ಲ.ಶಿವಮೊಗ್ಗದ ಕೇಂದ್ರ ಕಾರಾಗೃಹ ಉತ್ತಮ ಅನುಭವ ನೀಡಿದೆ

ಡಾ.ಪಿ.ರಂಗನಾಥ್, ನಿರ್ಗಮಿತ ಮುಖ್ಯ ಅಧೀಕ್ಷಕರು, ಕೇಂದ್ರ ಕಾರಾಗೃಹ ಶಿವಮೊಗ್ಗ

Share This Article