Shivamogga | ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ವಿದ್ಯಮಾನಗಳ ಸಂಕ್ಷಿಪ್ತ ವರದಿ ಇಲ್ಲಿದೆ. ಇತ್ತ ಶಿವಮೊಗ್ಗದಲ್ಲಿ ದಾರಿಯಲ್ಲಿ ಸಿಕ್ಕ ಹಣವನ್ನು ವಾರಸುದಾರರಿಗೆ ತಲುಪಿಸಿ ಯುವಕರು ಮಾನವೀಯತೆ ಮೆರೆದಿದ್ದಾರೆ. ಇನ್ನೊಂದು ಘಟನೆಯಲ್ಲಿ ಆನವಟ್ಟಿಯ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದ್ದು, ಮಹಿಳೆಯ ಪತ್ತೆಗೆ ಜನರ ಸಹಕಾರ ಕೋರಿದೆ.


ಆಯನೂರು: 10 ಸಾವಿರ ರೂಪಾಯಿ ಇದ್ದ ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಸ್ನೇಹಿತರು
ಆಯನೂರಿನ ಮೂವರು ಸ್ನೇಹಿತರು ರಸ್ತೆಯಲ್ಲಿ ಸಿಕ್ಕ ಬರೋಬ್ಬರಿ 10 ಸಾವಿರ ರೂಪಾಯಿ ಇದ್ದ ಪರ್ಸನ್ನು ಅದರ ವಾರಸುದಾರರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆಗೆ ಸಾಕ್ಷಿಯಾಗಿದ್ದಾರೆ. ಆಯನೂರಿನ ನಿವಾಸಿಗಳಾದ ದಾಮೋದರ, ನಾಗರಾಜ್ ಮತ್ತು ಸತೀಶ್ ಎಂಬುವವರು ದಿನಾಂಕ 17-01-2026 ರಂದು ಆಯನೂರು ವೃತ್ತದ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಹೋಗುತ್ತಿದ್ದಾಗ, ಅವರಿಗೆ ಅಲ್ಲಿಯೇ ಬಿದ್ದಿದ್ದ ಪರ್ಸ್ ಒಂದು ಕಾಣಿಸಿದೆ. ಅನುಮಾನಗೊಂಡು ಚೆಕ್ ಮಾಡಿದಾಗ ಅದರಲ್ಲಿ 10,000 ರೂಪಾಯಿ ಇರುವುದು ಗೊತ್ತಾಗಿದೆ. ಆನಂತರ ಕುಂಸಿ ಪೊಲೀಸ್ ಠಾಣೆಗೆ ತೆರಳಿ ಪರ್ಸ್ ಕೊಟ್ಟು ಬಂದಿದ್ದಾರೆ. ಇತ್ತ ಪೊಲೀಸರು ಪರ್ಸ್ ನಲ್ಲಿದ್ದ ಫೋನ್ ನಂಬರ್ ಹಾಗೂ ಫೋಟೋಗಳ ಮಾಹಿತಿ ಆಧರಿಸಿ, ಅದರ ವಾರಸುದಾರ ಚಿಕ್ಕಮತಲಿ ಗ್ರಾಮದ ಬಲರಾಮ್ ಅವರನ್ನು ಠಾಣೆಗೆ ಕರೆಸಿ ಹಣ ಮತ್ತು ದಾಖಲೆಗಳನ್ನು ಸುರಕ್ಷಿತವಾಗಿ ಹಿಂತಿರುಗಿಸಿದ್ದಾರೆ
ಗೃಹಿಣಿ ಕಾಣೆ, ಪತ್ತೆಗೆ ಮನವಿ
ಸೊರಬ ತಾಲೂಕಿನ ಕುಪ್ಪಗುಡ್ಡೆ ಗ್ರಾಮದ ನಿವಾಸಿ, 25 ವರ್ಷದ ಭಾಗ್ಯ ಎಂಬುವವರು ಕಳೆದ ಸೆಪ್ಟೆಂಬರ್ 2025 ರಿಂದ ಕಾಣೆಯಾಗಿದ್ದು, ಇವರ ಪತ್ತೆಗೆ ಸಹಕರಿಸುವಂತೆ ಆನವಟ್ಟಿ ಪೊಲೀಸರು ಕೋರಿದ್ದಾರೆ. ಗಾಜನೂರು ಮೊರಾರ್ಜಿ ಹಾಸ್ಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಮನೆ ಬಿಟ್ಟು ಹೋದವರು ಇದುವರೆಗೂ ವಾಪಸ್ಸಾಗಿಲ್ಲ. ಕಾಣೆಯಾದ ಮಹಿಳೆಯು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ ಹಾಗೂ ಗೋಧಿ ಮೈಬಣ್ಣ ಹೊಂದಿದ್ದಾರೆ. ಮನೆಯಿಂದ ಹೋಗುವ ಸಂದರ್ಭದಲ್ಲಿ ಇವರು ಆಕಾಶ ನೀಲಿ ಬಣ್ಣದ ಚೂಡಿದಾರ್ ಮತ್ತು ಕಪ್ಪು ಬಣ್ಣದ ಜಾಕೆಟ್ ಧರಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇವರ ಬಗ್ಗೆ ಯಾವುದೇ ಸುಳಿವು ದೊರೆತಲ್ಲಿ ಸಾರ್ವಜನಿಕರು ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಶಿವಮೊಗ್ಗ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ದೂ.ಸಂ.: 08182-261413/ 08187-222443/ 08184-272122/267135/ 9480803339/ 9480803369 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.

ಶಿವಮೊಗ್ಗ ಸುದ್ದಿ: ಆಯನೂರಿನಲ್ಲಿ ಪ್ರಾಮಾಣಿಕತೆ ಮೆರೆದ ಸ್ನೇಹಿತರು – ಮಹಿಳೆ ನಾಪತ್ತೆ ದೂರು, Shivamogga News Friends Return Lost Purse in Ayanur – Woman Missing in Soraba

