ಶಿವಮೊಗ್ಗ: ಆಹಾರ ದಾಸ್ತಾನು ಮಳಿಗೆ ಮೇಲೆ ಎಡಿಸಿ ದಾಳಿ, ರಾಶಿ ರಾಶಿ ತಿಂಡಿ ಜಪ್ತಿ, ಕಾರಣವೇನು

ಶಿವಮೊಗ್ಗ: ನಗರದ ವಿದ್ಯಾನಗರದಲ್ಲಿರುವ ಆಹಾರ ಪದಾರ್ಥಗಳ ದಾಸ್ತಾನು ಗೋಡೌನ್ ಮೇಲೆ ಅಧಿಕಾರಿಗಳ ತಂಡ ಇಂದು ದಿಡೀರ್ ದಾಳಿ ನಡೆಸಿದ್ದು, ಅವಧಿ ಮೀರಿದ ತಿಂಡಿ-ತಿನಿಸುಗಳನ್ನು ಕಂಡು ದಂಗಾಗಿದ್ದಾರೆ. 

ಅಪರ ಜಿಲ್ಲಾಧಿಕಾರಿ ಅಭಿಷೇಕ್ ಅವರ ನೇತೃತ್ವದಲ್ಲಿ ಉಪ ವಿಭಾಗಾಧಿಕಾರಿಗಳು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿತು. ಗೋಡೌನ್ ಪ್ರವೇಶಿಸಿದ ಅಧಿಕಾರಿಗಳಿಗೆ ರಾಶಿ ರಾಶಿಯಾಗಿ ಬಿದ್ದಿದ್ದ ಎಕ್ಸ್‌ಪೈರಿ ದಿನಾಂಕ ಮುಗಿದ ಆಹಾರದ ಪ್ಯಾಕೆಟ್‌ಗಳು ಕಂಡುಬಂದವು. 

ಮೂಲಗಳ ಪ್ರಕಾರ, ಈ ವ್ಯಾಪಾರಸ್ಥರು ಬೆಂಗಳೂರಿನಿಂದ ವಿವಿಧ ಬಗೆಯ ತಿಂಡಿ ಮತ್ತು ಆಹಾರ ಪದಾರ್ಥಗಳನ್ನು ಕಡಿಮೆ ದರಕ್ಕೆ ತಂದು ಶಿವಮೊಗ್ಗದಾದ್ಯಂತ ಮಾರಾಟ ಮಾಡುತ್ತಿದ್ದರು. ದಾಳಿ ವೇಳೆ ಪತ್ತೆಯಾದ ಬಹುತೇಕ ಪದಾರ್ಥಗಳು ತಿನ್ನಲು ಯೋಗ್ಯವಲ್ಲದ ಸ್ಥಿತಿಯಲ್ಲಿದ್ದವು ಎಂಬುದು ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. 

ದಾಳಿ ನಡೆಸಿದ ತಂಡವು ಸ್ಥಳದಲ್ಲಿದ್ದ ಎಲ್ಲಾ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದಿದೆ. ನಿಯಮಗಳನ್ನು ಗಾಳಿಗೆ ತೂರಿ ಅವಧಿ ಮುಗಿದ ಪದಾರ್ಥಗಳನ್ನು ದಾಸ್ತಾನು ಮಾಡಿದ್ದ ಗೋಡೌನ್ ಮಾಲೀಕನ ವಿರುದ್ಧ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೂಡಲೇ ನೋಟಿಸ್ ಜಾರಿ ಮಾಡಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ. 

Shimoga Food Raid Seizes Expired Food Stock
Shimoga Food Raid Seizes Expired Food Stock

Shimoga Food Raid Seizes Expired Food Stock

shivamogga car decor sun control house
shivamogga car decor sun control house