Shivamogga | shivamogga Silver Reaches 3.64 Lakh per Kg | ಮಾರುಕಟ್ಟೆಯಲ್ಲಿ ವಾರದ ಆರಂಭದಲ್ಲಿ ಚಿನ್ನ ಬೆಳ್ಳಿ ಮತ್ತೆ ಬೆಲೆ ಏರಿಸಿಕೊಂಡಿದೆ. ನಿನ್ನೆ ದಿನ ಅಂದರೆ ಸೋಮವಾರದ ವಹಿವಾಟಿನಲ್ಲಿ ಹಳದಿ ಲೋಹ ಮತ್ತು ಬೆಳ್ಳಿಯ ಧಾರಣೆಯಲ್ಲಿ ಏರಿಕೆಯಾಗಿದೆ.

ಶುದ್ಧ 24 ಕ್ಯಾರೆಟ್ ಚಿನ್ನದ ರೇಟು ಪ್ರತಿ 10 ಗ್ರಾಂಗೆ 1,67,590 ರೂಪಾಯಿಗಳಿಗೆ ತಲುಪಿದೆ. ಇತ್ತ ಬೆಳ್ಳಿ ದರ ಪ್ರತಿ ಕೆಜಿಗೆ 3,64,105 ರೂಪಾಯಿಗಳ ಗಡಿ ಮುಟ್ಟಿದೆ.
ಕಳೆದ ಶನಿವಾರಕ್ಕೆ ಹೋಲಿಸಿದರೆ ಚಿನ್ನದ ದರದಲ್ಲಿ 2,590 ರೂಪಾಯಿ ಹಾಗೂ ಬೆಳ್ಳಿಯ ದರದಲ್ಲಿ ಬರೋಬ್ಬರಿ 9,805 ರೂಪಾಯಿಗಳಷ್ಟು ಹೆಚ್ಚಳ ಕಂಡುಬಂದಿದೆ. ಶನಿವಾರ ಚಿನ್ನದ ಬೆಲೆ 1.65 ಲಕ್ಷ ರೂಪಾಯಿ ಹಾಗೂ ಬೆಳ್ಳಿ ದರವು 3,54,300 ರೂಪಾಯಿಗಳಷ್ಟಿತ್ತು.
ಲಂಡನ್ ಮಾರುಕಟ್ಟೆಯಲ್ಲಿ ಸೋಮವಾರ ಒಂದು ಔನ್ಸ್ ಚಿನ್ನದ ಬೆಲೆ 5,111 ಡಾಲರ್‌ಗೆ ಏರಿಕೆಯಾಗಿದೆ. ಇದೇ ವೇಳೆ ಬೆಳ್ಳಿ ದರ ಪ್ರತಿ ಔನ್ಸ್‌ಗೆ 110 ಡಾಲರ್ ತಲುಪುವ ಮೂಲಕ ಸಾರ್ವಕಾಲಿಕ ಗರಿಷ್ಠ ದಾಖಲೆ ನಿರ್ಮಿಸಿದೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
