ಸಾಗರ | ಸಿಗಂದೂರು ಚೌಡೇಶ್ವರಿ ಸನ್ನಿಧಿಯಿಂದ ಸಾಗರ ಪಟ್ಟಣದತ್ತ ಪ್ರಯಾಣಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರು ಕೆಲಕಾಲ ಆತಂಕಕ್ಕೊಳಗಾದ ಘಟನೆ ಭಾನುವಾರ ಸಂಜೆ ಹುಲಿದೇವರಬನ ಸಮೀಪ ನಡೆದಿದೆ.
ಎಸ್‌ಬಿಕೆ (SBK) ಸಂಸ್ಥೆಗೆ ಸೇರಿದ ಈ ಬಸ್ ಸಂಚರಿಸುತ್ತಿದ್ದ ವೇಳೆ ಬಲಭಾಗದ ಹಿಂಬದಿಯ ಟಯರ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯ ಗ್ರಾಮಸ್ಥರು ಕೂಡಲೇ ಚಾಲಕನಿಗೆ ಎಚ್ಚರಿಕೆ ನೀಡಿ ವಾಹನ ನಿಲ್ಲಿಸುವಂತೆ ಸೂಚಿಸಿದ್ದಾರೆ. ಇದರಿಂದ ಎಚ್ಚೆತ್ತ ಚಾಲಕ ತಕ್ಷಣ ರಸ್ತೆ ಬದಿಗೆ ಬಸ್ ನಿಲ್ಲಿಸಿದ್ದು, ಈ ವೇಳೆ ಒಳಗಿದ್ದ ಪ್ರಯಾಣಿಕರು ಭಯದಿಂದ ಹೊರಬಂದಿದ್ದಾರೆ.
ಬಸ್, ಚಾಲಕ, ಗ್ರಾಮಸ್ಥರು ಹಾಗೂ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಬೆಂಕಿ ಹರಡುವ ಮುನ್ನವೇ ಹತೋಟಿಗೆ ತರಲಾಗಿದ್ದು, ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿದಂತಾಗಿದೆ.

