ಜೀವಾವಧಿ ಶಿಕ್ಷೆಗೆ ಒಳಗಾದ ಇಬ್ಬರು ಖೈದಿಗಳ ನಡುವೆ ಪ್ರೇಮಾಂಕುರ. ಮದುವೆಗೆ ಕೋರ್ಟ್​ನಲ್ಲಿ ಪಡೆದ್ರು ಪೆರೋಲ್

ಶಿವಮೊಗ್ಗ : ರಾಜಸ್ಥಾನದ ಜೈಲಿನಲ್ಲಿ ಇಬ್ಬರು ಕುಖ್ಯಾತ ಕೊಲೆ ಆರೋಪಿಗಳ ನಡುವೆ ಪ್ರೇಮಾಂಕುರವಾಗಿದ್ದು, ಇದೀಗ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಸಂಗಮೇರ್ ಓಪನ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಪ್ರಿಯಾ ಸೇರ್ ಮತ್ತು ಹನುಮಾನ್ ಪ್ರಸಾದ್ ಎಂಬುವವರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ರಾಜಸ್ಥಾನ ಹೈಕೋರ್ಟ್‌ನಿಂದ 15 ದಿನಗಳ ತುರ್ತು ಪೆರೋಲ್ ಪಡೆದುಕೊಂಡಿದ್ದಾರೆ.

SUNCONTROL_FINAL-scaled

ಶಿವಮೊಗ್ಗ ಸುದ್ದಿ ರೌಂಡ್ಸ್​ |ಭದ್ರಾ ನಾಲೆ 2 ಶವ ಪತ್ತೆ | ಶಿವಮೊಗ್ಗ ಜೈಲಿಗೆ ಬಂದ ಅಲೋಕ್​ ಕುಮಾರ್|ಕಾಶಿಪುರ ಗೇಟ್​ ಬಳಿ ವೃದ್ಧನ ಸಾವು!

ಜೈಲಿನಲ್ಲಿ ಒಟ್ಟಿಗೆ ಇದ್ದ ಸಂದರ್ಭದಲ್ಲಿ ಆರಂಭವಾದ ಇವರ ಪ್ರೇಮಕಥೆ ಇದೀಗ ಮದುವೆಯ ಹಂತಕ್ಕೆ ತಲುಪಿದೆ. ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವಕನೊಬ್ಬನನ್ನು ಹತ್ಯೆಗೈದ ಆರೋಪದ ಮೇಲೆ ಪ್ರಿಯಾ ಸೇರ್ ಜೈಲು ಸೇರಿದರೆ, ಐದು ಜನರನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪದಲ್ಲಿ ಹನುಮಾನ್ ಪ್ರಸಾದ್ ಶಿಕ್ಷೆಗೆ ಗುರಿಯಾಗಿದ್ದನು. ಈ ಇಬ್ಬರು ಕಳೆದ 6 ತಿಂಗಳ ಹಿಂದೆ ಸಂಗನೇರ್ ತೆರೆದ ಜೈಲಿನಲ್ಲಿ ಭೇಟಿಯಾಗಿದ್ದರು. ಅಲ್ಲಿಂದ ಶುರುವಾದ ಇವರ ಸ್ನೇಹ ಪ್ರೀತಿಗೆ ತಿರುಗಿದೆ. ಇದೀಗ ರಾಜಸ್ಥಾನದ ಅಲ್ವಾ‌ರ್ ಬರೋಡಮೇವ್‌ನಲ್ಲಿ ಇವರ ವಿವಾಹ ನೆರವೇರಲಿದ್ದು, ಇದಕ್ಕಾಗಿ ನ್ಯಾಯಾಲಯಅನುಮತಿ ನೀಡಿದೆ.

Life Convicts Marriage Rajasthan High Court Grants Parole
Life Convicts Marriage Rajasthan High Court Grants Parole

Life Convicts Marriage ಮಾಡೆಲ್ ಆಗಿದ್ದ ಪ್ರಿಯಾ ಸೇರ್ ಅಲಿಯಾಸ್ ನೇಹಾ ಸೇರ್ 2018 ರಲ್ಲಿ ನಡೆದ ದುಷ್ಯಂತ್ ಶರ್ಮಾ ಎಂಬುವವರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾಳೆ. 2018 ರ ಮೇ 2 ರಂದು ತನ್ನ ಪ್ರೇಮಿ ಮತ್ತು ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ಈ ಕೃಷ್ಣ ಎಸಗಿದ್ದಳು. ಡೇಟಿಂಗ್ ಆ್ಯಪ್ ಟಿಂಡರ್ ಮೂಲಕ ವ್ಯಕ್ತಿಯೊಬ್ಬನ ಸ್ನೇಹ ಬೆಳೆಸಿದ ಈಕೆ, ಬಜಾಜ್ ನಗರದ ಫ್ಲಾಟ್ಗೆ ಕರೆಸಿಕೊಂಡಿದ್ದಳು. ತನ್ನ ಪ್ರಿಯಕರನ ಸಾಲ ತೀರಿಸಲು ಆ ವ್ಯಕ್ತಿಯನ್ನು ಅಪಹರಿಸಿ, ಆತನ ತಂದೆಯಿಂದ 10 ಲಕ್ಷ ರೂಪಾಯಿ ಸುಲಿಗೆ ಮಾಡಲು ಯೋಜಿಸಿದ್ದಳು. ಆದರೆ ಆತನ ತಂದೆ 3 ಲಕ್ಷ ರೂಪಾಯಿ ನೀಡಲು ಒಪ್ಪಿದ್ದರು. ಹಣ ಪಡೆದ ನಂತರ ಆತನನ್ನು ಜೀವಂತವಾಗಿ ಬಿಟ್ಟರೆ ಪೋಲೀಸರಿಗೆ ಸಿಕ್ಕಿಬೀಳಬಹುದು ಎಂಬ ಭಯದಿಂದ ಪ್ರಿಯಾ ಸೇರ್, ತನ್ನ ಸಹಚರರಾದ ಕಮ್ರಾ ಮತ್ತು ಲಕ್ಷ ವಾಲಿಯಾ ಸೇರಿ ಆತನನ್ನು ಕೊಲೆ ಮಾಡಿದ್ದರು. ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಆಮೇರ್ ಬೆಟ್ಟಗಳಲ್ಲಿ ಬಿಸಾಡಿದ್ದರು. ಅಲ್ಲದೆ ಗುರುತು ಸಿಗಬಾರದು ಎಂದು ಮುಖದ ಮೇಲೆ ಇರಿದಯ ವಿಕೃತಗೊಳಿಸಿದ್ದರು.

ಇನ್ನೊಂದೆಡೆ ಹನುಮಾನ್ ಪ್ರಸಾದ್, ತನಗಿಂತ 10 ವರ್ಷ ದೊಡ್ಡವಳಾಗಿದ್ದ ತನ್ನ ಪ್ರೇಮಿಸಂತೋಷ್ ಎಂಬಾಕೆಯ ಪತಿ ಮತ್ತು ಮಕ್ಕಳನ್ನು ಕೊಲೆ ಮಾಡಿದ ಅಪರಾಧಿಯಾಗಿದ್ದಾನೆ. ಸಂತೋಷ್ ಅಲ್ವಾ‌ರ್ ನಲ್ಲಿ ಟೇಕ್ವಾಂಡೋ ಆಟಗಾರ್ತಿಯಾಗಿದ್ದಳು. 2017 ರ ಅಕ್ಟೋಬರ್ 2 ರ ರಾತ್ರಿ ತನ್ನ ಪತಿ ಬನ್ದಾರಿ ಲಾಲ್ ಮತ್ತು ಮಕ್ಕಳನ್ನು ಕೊಲ್ಲಲು ಹನುಮಾನ್ ಪ್ರಸಾದ್‌ನ್ನು ಮನೆಗೆ ಕರೆಸಿದ್ದಳು. ಪ್ರಸಾದ್ ಪ್ರಾಣಿಗಳನ್ನು ವಧಿಸುವ ಚಾಕುವಿನಿಂದ ಆಕೆಯ ಪತಿಯನ್ನು ಕೊಲೆ ಮಾಡಿದ್ದನು. ಈ ಕೃತ್ಯವನ್ನು ಸಂತೋಷ್ ಅವರ ಮೂವರು ಮಕ್ಕಳು ಮತ್ತು ಜೊತೆಗಿದ್ದ ಸೋದರಳಿಯ ನೋಡಿದ್ದರಿಂದ, ಸಾಕ್ಷ್ಯ ನಾಶಪಡಿಸಲು ಆ ನಾಲ್ವರು ಮಕ್ಕಳನ್ನು ಸಹ ಬರ್ಬರವಾಗಿ ಹತ್ಯೆ ಮಾಡಿದ್ದನು. ಅಂದು ಒಂದೇ ರಾತ್ರಿ5 ಜನರ ಹತ್ಯೆ ನಡೆದಿದ್ದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಇಂತಹ ಗಂಭೀರ ಅಪರಾಧದ ಹಿನ್ನೆಲೆಯುಳ್ಳ ಇಬ್ಬರು ಕೈದಿಗಳು ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದು ವಿಶೇಷವಾಗಿದೆ.

Life Convicts Marriage Rajasthan High Court Grants Parole
Life Convicts Marriage Rajasthan High Court Grants Parole

Life Convicts Marriage Rajasthan High Court Grants Parole

SUNCONTROL_FINAL-scaled