ಶಿವಮೊಗ್ಗ: ಸೋಗಾನೆಯಲ್ಲಿ ನಿರ್ಮಾಣವಾಗಲಿರುವ ಹೈ-ಸೆಕ್ಯೂರಿಟಿ ಜೈಲಿನ ಸ್ಥಳಕ್ಕೆ  ಡಿಸಿ ಮತ್ತು ಎಸ್ಪಿ ಭೇಟಿ

ಶಿವಮೊಗ್ಗ : ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಶಿವಮೊಗ್ಗದ ಸೋಗಾನೆಯಲ್ಲಿ ಹೈ ಸೆಕ್ಯೂರಿಟಿ ಜೈಲು ನಿರ್ಮಾಣಕ್ಕೆ ಸಿದ್ದತೆಯನ್ನು ನಡೆಸಲಾಗುತ್ತಿದೆ, ಈ ಕುರಿತು ಮೊನ್ನೆ ತಾನೇ ಬಂದಿದ್ದ ಎಡಿಜಿಪಿ ಅಲೋಕ್​ ಕುಮಾರ್​ ಕೂಡ ಇದರ ಬಗ್ಗೆ ಮಾಹಿತಿ ನೀಡಿದ್ದು, ಇದರ ನಡುವೆ ಶಿವಮೊಗ್ಗದ ಎಸ್​ ಪಿ ನಿಖಿಲ್​ ಬಿ ಹಾಗೂ ಡಿಸಿ ಪ್ರಭುಲಿಂಗ ಕವಲಿಕಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಟೊಮೆಟೊ ಚೀಪ್, ನುಗ್ಗೆಕಾಯಿ ಕಾಸ್ಟ್ಲಿ: ಶಿವಮೊಗ್ಗದಲ್ಲಿನ ತರಕಾರಿ, ಸೊಪ್ಪಿನ ರೇಟ್ ಎಷ್ಟಿದೆ ನೋಡಿ

ಈ ಕುರಿತು ಎಸ್​ ಪಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದ್ದು,  ಕೇಂದ್ರ ಕಾರಾ ಗೃಹ ಸೋಗಾನೆಯ ಆವರಣದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗುತ್ತಿರುವ ಹೈ ಸೆಕ್ಯುರಿಟಿ ಜೈಲಿನ ಸ್ಥಳಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿಗಳು, ಕಾರಾಗೃಹ ಅಧಿಕಾರಿಗಳು ಮತ್ತು ಕೆ.ಎಸ್.ಐ.ಎಸ್.ಎಫ್ ನ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಭೆ ನಡೆಸಿದ್ದೇವೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Shimoga High Security Prison DC and SP Inspect
Shimoga High Security Prison DC and SP Inspect

Shimoga High Security Prison DC and SP Inspect