Gold Chain Theft | ಸಾಗರ | ತಾಲೂಕಿನ ಚೆನ್ನಕೊಪ್ಪ ಗ್ರಾಮದಲ್ಲಿ ಪೌಡರ್ ಮಾರಾಟಕ್ಕೆ ಅಂತಾ ಬಂದ ಇಬ್ಬರು ಮಹಿಳೆಯೊಬ್ಬರ ಚಿನ್ನಾಭರಣ ಕದ್ದೊಯ್ದ ಘಟನೆ ಬಗ್ಗೆ ಆನಂದಪುರ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ದಾಖಲಾಗಿದೆ.
ಗ್ರಾಮದ ನಿವಾಸಿ ರತ್ನಾವತಿ ಎಂಬುವವರ ಮನೆ ಬಾಗಿಲಿಗೆ ಸುಮಾರು 35 ರಿಂದ 40 ವರ್ಷ ವಯಸ್ಸಿನ ಇಬ್ಬರು ಬಂದಿದ್ದರು. ಈ ಪೈಕಿ ಓಬ್ಬಾತ ಪಾತ್ರೆ ಸ್ವಚ್ಛಗೊಳಿಸುವ ಪೌಡರ್ ಮಾರಾಟಕ್ಕಿದೆ ಅಂತಾ ಬಿಳಿ ಬಣ್ಣದ ಪೌಡರ್ ಸ್ಯಾಂಪಲ್ ಕೊಟ್ಟಿದ್ದಾನೆ. ಅದೇಹೊತ್ತಿಗೆ ಇನ್ನೊಬ್ಬಾತ ಬೆಳ್ಳಿ ಹಾಗೂ ಬಂಗಾರ ತೊಳೆಯುವ ಕೆಂಪು ಪೌಡರ್ ಸಹ ಇರುವುದಾಗಿ ಹೇಳಿ ಮಹಿಳೆಯನ್ನ ನಂಬಿಸಿದ್ದಾನೆ.
ಶಿವಮೊಗ್ಗ: ಮನೆಗೆ ನುಗ್ಗಿ ಬಾಯಿ ಕಟ್ಟಿ 4 ಬಳೆ ದೋಚಿದ ಕಳ್ಳರು; ಅಸಲಿ ವಿಷಯ ತಿಳಿದರೆ ನೀವು ನಗುವುದು ಗ್ಯಾರಂಟಿ
ಅಲ್ಲದೆ ರತ್ನಾವತಿ ಅವರಿಗೆ ಕುತ್ತಿಗೆಯಲ್ಲಿದ್ದ ಸರವನ್ನು ತೆಗೆಯಿರಿ ಬಂಗಾರವನ್ನು ಪಳಪಳ ಹೊಳೆಯುವಂತೆ ಮಾಡುತ್ತೇವೆ ಎಂದಿದ್ದಾರೆ. ಇದಕ್ಕೆ ರತ್ನಾವತಿ ನಿರಾಕರಿಸಿದಾಗ, ಕುತ್ತಿಗೆಯಲ್ಲಿದ್ದಂತೆಯೇ ಅವರ ಸರಕ್ಕೆ ಪೌಡರ್ ಹಚ್ಚುವಂತೆ ತಿಳಿಸಿದ್ದಾರೆ. ಅವರು ಹೇಳಿದಂತೆ ಸರಕ್ಕೆ ಪೌಡರ್ ಹಚ್ಚಿದಾಗ ಬಂಗಾರ ಕಪ್ಪಾಗಿದೆ.

ಶಿವಮೊಗ್ಗ: ಮನೆಗೆ ನುಗ್ಗಿ ಬಾಯಿ ಕಟ್ಟಿ 4 ಬಳೆ ದೋಚಿದ ಕಳ್ಳರು; ಅಸಲಿ ವಿಷಯ ತಿಳಿದರೆ ನೀವು ನಗುವುದು ಗ್ಯಾರಂಟಿ
ಇದೆ ಹೊತ್ತಿಗೆ ಆರೋಪಿಗಳು, ಮನೆಯವರಿಂದ ಬಟ್ಲಲಲ್ಲಿ ನೀರು ಮತ್ತು ಅರಶಿನ ತರಿಸಿಕೊಂಡು, ಕಪ್ಪಾದ ಸರವನ್ನು ಅದರಲ್ಲಿ ಹಾಕಿ, ಸ್ವಲ್ಪ ಹೊತ್ತು ಬಿಟ್ಟು ನೋಡಿ ಚಿನ್ನ ಕಲರ್ ಬಂದಿರುತ್ತೆ ಎಂದು ಹೇಳಿದ್ದಾರೆ. ಈ ಮಧ್ಯೆ ಸರ ಹಾಕಿದ ಪಾತ್ರೆಗೆ ಇನ್ನೊಂದಿಷ್ಟು ಪೌಡರ್ ಹಾಕಿ ಆರೋಪಿಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಅವರು ಆ ಕಡೆ ಹೋದ ಬಳಿಕ, ಮಹಿಳೆ ಪಾತ್ರೆಯ ನೀರು ಚೆಲ್ಲಿ ನೋಡಿದರೆ, ಪಳಪಳ ಅನ್ನುವುದು ಹಾಗಿರಲಿ, ಬಂಗಾರವೇ ನಾಪತ್ತೆಯಾಗಿತ್ತು. ಈ ಸಂಬಂಧ ಸಂತ್ರಸ್ತೆ ಆನಂದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
Gold Chain Theft in Anandapura: Thieves Pose as Powder Sellers, ಆನಂದಪುರ: ಪೌಡರ್ ಮಾರುವ ನೆಪದಲ್ಲಿ 31 ಗ್ರಾಂ ಚಿನ್ನದ ಸರ ಕಳ್ಳತನ ,
