ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಕಳ್ಳತನ ಎಂಬುದು ಒಂದು ವ್ಯವಹಾರದಂತಾಗಿ ಬಿಟ್ಟಿದೆ. ವಿಳಾಸ ಕೇಳುವ ನೆಪದಲ್ಲಿ, ರಂಗೋಲಿ ಹಾಕುವಾಗ ಅಥವಾ ವಾಕಿಂಗ್ ಮಾಡುವ ಸಮಯದಲ್ಲಿ ಹೊಂಚು ಹಾಕಿ ಕಳ್ಳತನ ಮಾಡುವ ಘಟನೆಗಳು ಹೆಚ್ಚುತ್ತಿವೆ. ಆದರೆ ಶಿವಮೊಗ್ಗದಲ್ಲಿ ನಡೆದ ಈ ಒಂದು ಕಳ್ಳತನದ ಪ್ರಕರಣ ಮಾತ್ರ ತೀರಾ ವಿಭಿನ್ನವಾಗಿದ್ದು, ಕಳ್ಳರ ಪಾಡು ಕೇಳಿದರೆ ನಿಮಗೆ ಅಚ್ಚರಿಯ ಜೊತೆಗೆ ನಗು ಬರುವುದು ಖಂಡಿತ.

ಮೊಬೈಲ್ ಕಳೆದುಹೋಗಿದೆಯೇ? ಈಗ ರಪ್ಪಾ ಸಿಗ್ತದೆ ಫೋನ್! ಹೀಗಿದೆ ಶಿವಮೊಗ್ಗ ಪೊಲೀಸ್ ಕಾರ್ಯಾಚರಣೆ
Shivamogga Robbery ಮಗ ಬರುತ್ತಾನೆ ಎಂಬ ಮಾತಿನಿಂದ ಹೆದರಿದ ಕಳ್ಳರು, ಕೂಡಲೇ ಮಾಲೀಕರ ಕೈಯನ್ನು ಬಿಚ್ಚಿ ಅವರ ಕೈಯಲ್ಲಿದ್ದ 4 ಬಳೆಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇಷ್ಟೆಲ್ಲಾ ಕಷ್ಟಪಟ್ಟು, ಸಾಹಸ ಮಾಡಿ ಕಳ್ಳರು ಕದ್ದೊಯ್ದ ಆ ಬಳೆಗಳ ಬೆಲೆ ಕೇಳಿದರೆ ಯಾರಾದರೂ ನಗಲೇಬೇಕು. ಏಕೆಂದರೆ, ಕಳ್ಳರು ಬಂಗಾರದ ಬಳೆಗಳೆಂದು ನಂಬಿ ಕದ್ದ ಆ ನಾಲ್ಕು ಬಳೆಗಳ ಒಟ್ಟು ಮೌಲ್ಯ ಕೇವಲ 300 ರೂಪಾಯಿಗಳು
ಹೌದು, ಕಳ್ಳರು ಕದ್ದೊಯ್ದಿದ್ದು ಅಸಲಿ ಬಂಗಾರವಲ್ಲ, ಬದಲಾಗಿ ಅದು ‘ರೋಲ್ಡ್ ಗೋಲ್ಡ್’ (Rolled Gold) ಬಳೆಗಳಾಗಿದ್ದವು. ಬಂಗಾರದ ಆಸೆಗೆ ಬಿದ್ದು ಮನೆಗೆ ನುಗ್ಗಿ, ಇಷ್ಟೆಲ್ಲಾ ಶ್ರಮಪಟ್ಟ ಕಳ್ಳರಿಗೆ ಕೊನೆಗೆ ಸಿಕ್ಕಿದ್ದು ಮಾತ್ರ ಕೇವಲ ಮುನ್ನೂರು ರೂಪಾಯಿ ಬೆಲೆಯ ನಕಲಿ ಚಿನ್ನದ ಬಳೆಗಳು.
ಈ ಕಳ್ಳತನದ ಕುರಿತಾಗಿ ಸಂತ್ರಸ್ತ ಮಹಿಳೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
Shivamogga Robbery Thieves Steal Gold Bangles

