ಹೆದ್ದಾರಿಯಲ್ಲಿ ಮೃತ್ಯು ರೂಪದಲ್ಲಿ ಬಂದ ಮೈಲಿಗಲ್ಲು! ಬೈಕ್ ಸವಾರ ಸ್ಥಳದಲ್ಲೇ ಸಾವು

ಸಾಗರ ಸುದ್ದಿ : ತಾಲ್ಲೂಕಿನ ಆನಂದಪುರದಲ್ಲಿ ಬೈಕ್ ಅಪಘಾತ ಸಂಭವಿಸಿದ್ದು ಓರ್ವರು ಸಾವನ್ನಪ್ಪಿದ್ದಾರೆ. ಆನಂದಪುರ- ಶಿಕಾರಿಪುರ ನಡುವಿನ ಹೆದ್ದಾರಿಯಲ್ಲಿ ಬೈರಾಪುರ ಬಳಿ ಈ ಘಟನೆ ಸಂಭವಿಸಿದೆ. ಬೈಕ್ ಅಪಘಾತದಲ್ಲಿ ಸ್ಥಳದಲ್ಲೇ ಓರ್ವ ಮೃತಪಟ್ಟಿದ್ದಾರೆ. ರಸ್ತೆಯ ಪಕ್ಕದಲ್ಲಿರುವ ಕಿಲೋಮೀಟರ್​ ತೋರಿಸುವ ಮೈಲಿಗಲ್ಲಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್​ ಸವಾರ ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಮೇಶ್​ ತ್ಯಾಗರ್ತಿ ಗ್ರಾಪಂ ವ್ಯಾಪ್ತಿಯ ಕೋಟೆಕೊಪ ಗ್ರಾಮದ ನಿವಾಸಿ. ಶಿಕಾರಿಪುರದಿಂದ ಸ್ವಗ್ರಾಮ ಕೋಟೆಕೊಪ್ಪ ಗ್ರಾಮಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಬೈಕು ಹೆದ್ದಾರಿಯ ಪಕ್ಕದಲ್ಲಿರುವ ಮೀಟ‌ರ್ ಬೋರ್ಡ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ರಮೇಶ್​ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಈ ಸಂಬಂಧ ಆನಂದಪುರ ಪೊಲೀಸ್ ಪಿಎಸ್‌ಐ ಪ್ರವೀಣ್ ಹಾಗೂ ಸಿಬ್ಬಂದಿ ಸ್ಥಳಮಹಜರ್​ ನಡೆಸಿ ಕೇಸ್ ದಾಖಲಿಸಿದ್ದಾರೆ. 

ಸಾಗರ: ಆನಂದಪುರ ಸಮೀಪ ಭೀಕರ ಬೈಕ್ ಅಪಘಾತ; ಕೋಟೆಕೊಪ್ಪದ ವ್ಯಕ್ತಿ ಸಾವು, Sagar: Fatal Bike Accident Near Anandapura, Kotekoppa Man Dies on the Spot

ಸಾಗರ: ಆನಂದಪುರ ಸಮೀಪ ಭೀಕರ ಬೈಕ್ ಅಪಘಾತ; ಕೋಟೆಕೊಪ್ಪದ ವ್ಯಕ್ತಿ ಸಾವು, Sagar: Fatal Bike Accident Near Anandapura, Kotekoppa Man Dies on the Spot

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 