ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಪ್ರತಿದಿನ ಒಂದಲ್ಲ ಒಂದು ಅಚ್ಚರಿಯ ಸುದ್ದಿಗಳು ದೇಶದ ಯಾವುದೋ ಮೂಲೆಯಲ್ಲಿ ನಡೆಯುತ್ತಲೇ ಇರುತ್ತದೆ. ಅಂತಹ ಸುದ್ದಿಗಳ ಪೈಕಿ ಒಂದನ್ನು ವಿಶೇಷವಾಗಿ ವರದಿ ಮಾಡುವ ಇವತ್ತಿನ ದಿನದ ಅಚ್ಚರಿಯ ಕಥೆ ವಿಭಾಗದ ಈ ದಿನದ ಸ್ಟೋರಿ ನಿಮ್ಮ ಮುಂಧೆ./
ಸಾಮಾನ್ಯ ಕಳ್ಳತನ ಮಾಡುವವರು ಕೈಗೆ ಸಿಕ್ಕಿದ್ದನ್ನ ದೋಚಿಕೊಂಡು ಹೋಗುತ್ತಾರೆ. ಒಮ್ಮೊಮ್ಮೆ ಕೈಗೇನು ಸಿಗದೆ ಬರಿಗೈಲಿಯೇ ವಾಪಸ್ ಆಗುವುದು ಇರುತ್ತದೆ. ಆದರೆ ಇಲ್ಲೊಬ್ಬ ಕಳ್ಳ, ತನ್ನ ಕಳ್ಳತನದಿಂದಲೇ ಸುದ್ದಿಯಾಗಿದ್ದಾನೆ. ಏಕೆಂದರೆ, ಆತ ಒಂದಲ್ಲ ಎರಡಲ್ಲ ಒಂದು ರಾತ್ರಿಯಲ್ಲಿ 110 ಹಂದಿಗಳನ್ನ (Pigs) ಕದ್ದು, ಮರುದಿನವೇ ಅದನ್ನ ಮಾರಿ ಸೈಲೆಂಟ್ ಆಗಿದ್ದ. ಅಲ್ಲದೆ ತಾನೊಂದು ಫರ್ಪೆಕ್ಟ್ ಕ್ರೈಂ ಮಾಡಿದ್ದೇನೆ ಎಂದು ಆರಾಮಾಗಿ ಓಡಾಡಿಕೊಂಡಿದ್ದ.

ಮಲೆನಾಡು APMCಗಳಲ್ಲಿ ಅಡಿಕೆ ವಹಿವಾಟು ಜೋರು! ಶಿವಮೊಗ್ಗ, ಸಾಗರ, ಯಲ್ಲಾಪುರ, ಶಿರಸಿ! ಎಲ್ಲೆಲ್ಲಿ ಎಷ್ಟಾಗಿದೆ ಅಡಿಕೆ ದರ
ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯ ಕೆಂಚಾರ್ಲಹಳ್ಳಿ ಪೊಲೀಸರು ಒಂದೇ ರಾತ್ರಿಯಲ್ಲಿ 100ಕ್ಕೂ ಹೆಚ್ಚು ಹಂದಿಗಳನ್ನು ಕದ್ದು ಮಾರಾಟ ಮಾಡಿದ್ದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಲೆನಿನ್ ನಗರದ ನಿವಾಸಿ ಆನಂದ (29) ಬಂಧಿತ ಆರೋಪಿ. ಹಂದಿ ಸಾಕಾಣಿಕೆದಾರನು (Pigs) ಆಗಿರುವ ಈತ, ಜೊತೆಯಲ್ಲಿ ಬೇರೆಯವರ ಹಂದಿಗಳನ್ನ ಕದಿಯುವ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬುರುಡುಗುಂಟೆ ಗ್ರಾಮದ ರೈತ ವೆಂಕಟಪತಿ ಅವರ ತೋಟದಲ್ಲಿ ನವೆಂಬರ್ 9 ರಂದು 130 ಹಂದಿಗಳನ್ನ ಈತ ಕದ್ದಿದ್ದಾನೆ.

ಇವತ್ತಿನಿಂದ 3 ದಿನ ಕರೆಂಟ್ ಇರಲ್ಲ! ಶಿವಮೊಗ್ಗ, ಭದ್ರಾವತಿ, ಆನವಟ್ಟಿಯಲ್ಲಿ ಪವರ್ ಕಟ್ ಎಲ್ಲೆಲ್ಲಿ!
ಹಂದಿ ಮಾಲೀಕರು ಎಂದಿನಂತೆ ಹಂದಿಗಳನ್ನ ಎಣಿಸಿ ಮಲಗಿದ್ದರು. ಮರುದಿನ ಬೆಳಗ್ಗೆ ಒಂದು ಹಂದಿಯು ಕಾಣದಿರುವುದು ನೋಡಿ ಅಚ್ಚರಿಗೊಂಡಿದ್ದರು. ಆನಂತರ ಊರಿನವರನ್ನು ವಿಚಾರಿಸಿ, ಪೊಲೀಸರಿಗೆ ಕಂಪ್ಲೆಂಟ್ ನೀಡಿದ್ದರು. ಇಷ್ಟೊಂದು ಹಂದಿಗಳು ಹೇಗೆ ಕಾಣೆಯಾಗುತ್ತವೆ ಎಂಬುದನ್ನು ಅನುಮಾನದಿಂದಲೇ ನೋಡಿದ ಪೊಲೀಸರು, ಪ್ರಕರಣದ ಕುರಿತಾಗಿ ಸ್ಪೆಶಲ್ ಟೀಂ ರಚನೆ ಮಾಡಿದ್ದರು.
ಹಂದಿಗಳನ್ನ ಕಳೆದುಕೊಂಡ ಮಾಲೀಕ ವೆಂಕಟಪತಿ ನೀಡಿದ ದೂರಿನನ್ವಯ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ ಮತ್ತು ಸಬ್ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದ ವಿಶೇಷ ತಂಡ ಹಂದಿ ಕಳ್ಳನನ್ನು ಹುಡುಕಿಕೊಂಡು ಹೊರಟಿತ್ತು. ಗ್ರೌಂಡ್ ಲೆವಲ್ ಎನ್ಕ್ವೈರಿಗೆ ಇಳಿದ ಪೊಲೀಸರು ಹಂದಿ ವ್ಯಾಪಾರ ಸೇರಿದಂತೆ (Pigs )ಸುತ್ತಮುತ್ತಲಿನ ವ್ಯಾಪಾರಸ್ಥರು, ಹಂದಿಕಳ್ಳರ ಬಗ್ಗೆ ಮಾಹಿತಿ ಕಲೆಹಾಕಿ ಅಂತಿಮವಾಗಿ ಆರೋಪಿ ಆನಂದನನ್ನು ಹಿಡಿದು ತಂದು ಪೊಲೀಸ್ ಸ್ಟೈಲ್ನಲ್ಲಿ ವಿಚಾರಿಸಿದ್ದಾರೆ.
ಭದ್ರಾವತಿಯಲ್ಲಿ ಟ್ರೈನ್ನಿಂದ ಬಿದ್ದಿದ್ದ ವ್ಯಕ್ತಿ ಮೆಗ್ಗಾನ್ನಲ್ಲಿ ಮರಣ! 12 ದಿನಗಳ ಬಳಿಕ ನಿಧನ
ಅಂತಿಮವಾಗಿ ಆರೋಪಿ ಆನಂದ ತನ್ನೊಂದಿಗೆ ನಾಲ್ಕು ಮಂದಿಯನ್ನು ಬಳಸಿಕೊಂಡು ಹಂದಿಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಷ್ಟೆ ಅಲ್ಲದೆ ಆ ಹಂದಿಗಳನ್ನ ಮಾರಿ ಬಂದ 3 ಲಕ್ಷ ರೂಪಾಯಿಯನ್ನು ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದಾನೆ. ಪೊಲೀಸರು ಆರೋಪಿಯನ್ನ ಬಂಧಿಸಿ, ಪ್ರಕರಣದ ವಿಚಾರಣೆ ಮುಂದುವರಿಸಿದ್ದಾರೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
