ಶಿವಮೊಗ್ಗದಿಂದ ಭದ್ರಾವತಿಗೆ ಹೋಗ್ತಿದ್ದವನಿಗೆ ಡೈರಿ ಸರ್ಕಲ್ ಬಳಿ ಅಚ್ಚರಿ! ಹೋಂಡಾ ಆಸೆಂಟ್ ಕಾರಲ್ಲಿ ಬಂದು ಹಾರ್ನೆಟ್ ಬೈಕ್ ದರೋಡೆ

ajjimane ganesh

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಬೈಕ್​ನಲ್ಲಿ ಬರುತ್ತಿದ್ದವರನ್ನು ಅಡ್ಡಗಟ್ಟಿ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಆತನ ಬೈಕ್​ ಕಿತ್ತುಕೊಂಡು ಹೋಗಲಾಗಿದೆ. ಡಿಸೆಂಬರ್​ 06 ರಂದು ನಡೆದ ಘಟನೆ ಸಂಬಂಧ ಭದ್ರಾವತಿ ನ್ಯೂಟೌನ್​ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಭದ್ರಾವತಿ ಮಾಚೇನಹಳ್ಳಿ ಸಮೀಪ ಈ ಘಟನೆ ನಡೆದಿದ್ದು, ಶಿವಮೊಗ್ಗ ನಗರದಿಂದ ಭದ್ರಾವತಿ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಬೈಕ್ ಸವಾರನನ್ನು ಕಪ್ಪು ಬಣ್ಣದ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿ  ಆತನ ಬೈಕ್​ ಬಲವಂತವಾಗಿ ಕಿತ್ತುಕೊಂಡು ಹೋಗಿದ್ದಾರೆ. 

Bhadravathi Robbery Drivers 1 Lakh Bike Snatched Near Ayurvedic College, 3 Accused, shivamogga news today paper 
Bhadravathi Robbery Drivers 1 Lakh Bike Snatched Near Ayurvedic College, 3 Accused, shivamogga news today paper

ಪತ್ನಿ ವಿಚಾರದಲ್ಲಿ ಪತಿರಾಯನಿಗೆ 2 ವರ್ಷ ಶಿಕ್ಷೆ! ಸಾಗರ ಕೋರ್ಟ್​ನಲ್ಲಿ ತೀರ್ಪು

ನಡೆದ ಘಟನೆಯ ಪೂರ್ಣ ವಿವರ

ಶಿಕಾರಿಪುರ ತಾಲ್ಲೂಕಿನ ಮಂಚಿಕೊಪ್ಪ ಗ್ರಾಮದ ನಿವಾಸಿಯೊಬ್ಬರು ಡಿಸೆಂಬರ್ 5 ರಂದು ರಾತ್ರಿ 8:00 ಗಂಟೆಗೆ ಹೋಂಡಾ ಹಾರ್ನೆಟ್ ಬೈಕ್‌ನಲ್ಲಿ ಭದ್ರಾವತಿಗೆ ತೆರಳುತ್ತಿದ್ದರು. ಈ ವೇಳೆ ಶಿವಮೊಗ್ಗದ ಕಡೆಯಿಂದ ಅವರನ್ನು ಹಿಂಬಾಲಿಸಿದ ಕಪ್ಪು ಬಣ್ಣದ ಹೋಂಡಾ ಆಸೆಂಟ್ (HONDA ACCENT) ಕಾರು ಮಾಚೇನಹಳ್ಳಿ ಬಳಿ ಟಿ.ಎಂ.ಎ.ಇ.ಎಸ್ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಹತ್ತಿರ ಬೈಕ್​ನ್ನು ಅಡ್ಡಗಟ್ಟಿದೆ. ಬಳಿಕ ಕಾರಿನಲ್ಲಿದ್ದವರು, ಮಾಲೀಕನಿಂದ ಬೈಕ್​ ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂಬಂಧ  ಸಂತ್ರಸ್ತರು ನೀಡಿದ ದೂರಿನನ್ವಯ ಬಲವಂತವಾಗಿ ಬೈಕನ್ನು ಕಿತ್ತುಕೊಂಡು ಹೋದ ಮೂವರು ಅಪರಿಚಿತ ಆರೋಪಿಗಳ ವಿರುದ್ಧ ಭದ್ರಾವತಿ ನ್ಯೂ ಟೌನ್ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

Bhadravathi Robbery Drivers 1 Lakh Bike Snatched Near Ayurvedic College, 3 Accused, shivamogga news today paper 
Bhadravathi Robbery Drivers 1 Lakh Bike Snatched Near Ayurvedic College, 3 Accused, shivamogga news today paper

ಸದ್ಯ ಟ್ರೆಂಡ್​ನಲ್ಲಿದ್ದಾರೆ 73ರ ಬಾಡಿಬಿಲ್ಡರ್​ ರಾಮಪ್ಪ! ವಯಸ್ಸಿಗೆ ಸೆಡ್ಡು ಹೊಡೆದ ಇವರ ಕಥೆ ಗೊತ್ತಾ! ಇವರು ಶಿವಮೊಗ್ಗದವರು!

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಸದ್ಯ ಟ್ರೆಂಡ್​ನಲ್ಲಿದ್ದಾರೆ 73ರ ಬಾಡಿಬಿಲ್ಡರ್​ ರಾಮಪ್ಪ! ವಯಸ್ಸಿಗೆ ಸೆಡ್ಡು ಹೊಡೆದ ಇವರ ಕಥೆ ಗೊತ್ತಾ! ಇವರು ಶಿವಮೊಗ್ಗದವರು!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಭದ್ರಾವತಿ ಆಯುರ್ವೇದ ಕಾಲೇಜು ಬಳಿ ಡ್ರೈವರ್‌ಗೆ ಅಡ್ಡಗಟ್ಟಿ ಬೈಕ್ ದರೋಡೆ, 3 ಅಪರಿಚಿತರ ವಿರುದ್ಧ ಕೇಸ್, Bhadravathi Robbery Drivers 1 Lakh Bike Snatched Near Ayurvedic College, 3 Accused, shivamogga news today paper 
Share This Article