ಶಿವಮೊಗ್ಗ : ಸಿಬ್ಬಂದಿ ಕೊರತೆಯಿಂದಾಗಿ ಇಂಡಿಗೋ ವಿಮಾನಯಾನ ಸಂಸ್ಥೆಯು ನಿನ್ನೆಯ ಒಂದೇ ದಿನದಲ್ಲಿ ಮುಂಬೈ, ದೆಹಲಿ ಮತ್ತು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 180ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದ್ದು, ದೇಶಾದ್ಯಂತ ಪ್ರಯಾಣಿಕರು ತೀವ್ರ ಪರದಾಟ ನಡೆಸುವಂತಾಯಿತು. ಈ ವಿಮಾನಗಳ ರದ್ದತಿಯ ಬಿಸಿ ಶಿವಮೊಗ್ಗದ ಪ್ರಯಾಣಿಕರಿಗೂ ತಟ್ಟಿದೆ.

IndiGo Crisis ಶಿವಮೊಗ್ಗಕ್ಕೂ ತಟ್ಟಿದ ವಿಮಾನ ರದ್ದತಿಯ ಬಿಸಿ
ಬೆಂಗಳೂರಿನಲ್ಲಿ ಮಾತ್ರವೇ 73 ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು, ಇದು ರಾಜ್ಯದ ಇತರ ಭಾಗಗಳ ಸಂಚಾರದ ಮೇಲೂ ಪರಿಣಾಮ ಬೀರಿದೆ. ಪ್ರತಿದಿನ ಬೆಂಗಳೂರು – ಶಿವಮೊಗ್ಗ – ಬೆಂಗಳೂರು ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಇಂಡಿಗೋ ವಿಮಾನ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ವಿಮಾನ ಸಂಚಾರ ಸಂಪೂರ್ಣವಾಗಿ ರದ್ದಾಗಿದೆ. ಗುರುವಾರ ರದ್ದಾದ ವಿಮಾನದಲ್ಲಿ ಸುಮಾರು 60 ಮಂದಿ ಪ್ರಯಾಣಿಕರು ಬೆಂಗಳೂರಿಗೆ ಪ್ರಯಾಣಿಸಲು ಟಿಕೆಟ್ ಕಾಯ್ದಿರಿಸಿದ್ದರು. ಏಕಾಏಕಿ ವಿಮಾನ ರದ್ದುಗೊಂಡಿರುವುದರಿಂದ ಈ ಪ್ರಯಾಣಿಕರು ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಪರದಾಡಬೇಕಾಯಿತು.
Shivamogga airport | ಸ್ಟಾರ್ ಏರ್, ಇಂಡಿಗೋ ನಂತರ ಇನ್ನೆರಡು ಸಂಸ್ಥೆಗಳಿಂದ ಶಿವಮೊಗ್ಗದಲ್ಲಿ ವಿಮಾನ ಸಂಚಾರ!
ಮೂಲಗಳ ಪ್ರಕಾರ, ಗುರುವಾರ ಮಧ್ಯಾಹ್ನ ಶಿವಮೊಗ್ಗಕ್ಕೆ ಆಗಮಿಸಬೇಕಿದ್ದ ಇಂಡಿಗೋ ವಿಮಾನವು ತಡವಾಗಿ ಸಂಜೆ ವೇಳೆಗೆ ತಲುಪಿತ್ತು. ಸಂಜೆ 4.30ಕ್ಕೆ ಆಗಮಿಸಿದ ವಿಮಾನವು ಬಳಿಕ ಬೆಂಗಳೂರಿಗೆ ಹಿಂತಿರುಗಿತ್ತು. ಆದರೆ, ಶುಕ್ರವಾರದ ಸೇವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ಆನ್‌ಲೈನ್‌ನಲ್ಲಿ ಆರತಕ್ಷತೆ: ಮದುಮಕ್ಕಳೇ ಇಲ್ಲದೆ ಶಾಸ್ತ್ರ ಮುಗಿಸಿದ ಪೋಷಕರು!
ಇದೇ ವಿಮಾನ ರದ್ದತಿಯ ಪರಿಣಾಮವಾಗಿ, ಬುಧವಾರ ಹುಬ್ಬಳ್ಳಿಯಲ್ಲಿ ಅಪರೂಪದ ಪ್ರಸಂಗ ನಡೆದಿದೆ. ವಿಮಾನ ರದ್ದಾದ ಕಾರಣದಿಂದಾಗಿ ಮದುಮಕ್ಕಳು ಸರಿಯಾದ ಸಮಯಕ್ಕೆ ಹುಬ್ಬಳ್ಳಿಯ ಆರತಕ್ಷತೆ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ, ಆರತಕ್ಷತೆಯನ್ನು ಒಂದು ವಿಭಿನ್ನ ರೀತಿಯಲ್ಲಿ ನಡೆಸಲಾಯಿತು.
ವಧು-ವರರು ವಿಮಾನ ನಿಲ್ದಾಣದಲ್ಲಿ ಸಿಲುಕಿದ ಕಾರಣ, ಅವರ ಪೋಷಕರು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಆನ್‌ಲೈನ್ ಮೂಲಕವೇ (ವೀಡಿಯೋ ಕರೆಯ ಮೂಲಕ) ಆರತಕ್ಷತೆಯನ್ನು ನಡೆಸಲು ನಿರ್ಧರಿಸಿದರು. ವಧುವಿನ ತಂದೆ-ತಾಯಿಯರೇ ಮಗಳು ಮತ್ತು ಅಳಿಯನ ಬದಲು ಕೂತು ಆರತಕ್ಷತೆಯ ಸಂಪ್ರದಾಯಗಳು ಮತ್ತು ಶಾಸ್ತ್ರಗಳನ್ನು ಮುಗಿಸಿದ್ದಾರೆ.
IndiGo Crisis 180+ Flights Cancelled


