ಡಿಸೆಂಬರ್,03, 2025 : ಮಲೆನಾಡು ಟುಡೆ ಸುದ್ದಿ ಶಿವಮೊಗ್ಗ : 7 ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಶಿವಮೊಗ್ಗದ ವಿಧ್ಯಾನಗರದಲ್ಲಿ ನಡೆದಿದೆ.
ಮಲೆನಾಡಲ್ಲಿ ಅಡಿಕೆ ದರ ಏರಿಳಿತ: ಶಿವಮೊಗ್ಗ, ಸಾಗರ ಸೇರಿದಂತೆ ಹಲವು APMC ಅಡಕೆ ರೇಟ್‌ಗಳು ಇಲ್ಲಿವೆ
ಡಿಸೆಂಬರ್ 02 ರಂದು 07 ವರ್ಷದ ಬಾಲಕ ಆಟವಾಡುತ್ತಿದ್ದ ವೇಳೆ ಬೀದಿ ನಾಯಿಯೊಂದು ಏಕಾಏಕಿ ಬಾಲಕನ ಮೇಲೆರಗಿದೆ. ಇದರಿಂದಾಗಿ ಬಾಲಕನಿಗೆ ದೇಹದ ಐದು ಕಡೆ ಕಚ್ಚಿದಗಾಯಗಳಾಗಿದ್ದು ಆತನನ್ನು ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದಾಗಿ ಪೋಷಕರು ಪಾಲಿಕೆಯ ಅಧಿಕಾರಿಗಳ ಮೇಲೆ ಅಸಮಧಾನ ವ್ಯಕ್ತಪಡಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
Shimoga Stabbing Dog Attack ದೂರಿನಲ್ಲಿ ಏನಿದೆ
ವಿದ್ಯಾನಗರದಲ್ಲಿ 10-15 ಬೀದಿನಾಯಿಗಳು ಸಾರ್ವಜನಿಕರಿಗೆ ತೀವ್ರತೊಂದರೆ ಉಂಟು ಮಾಡುತ್ತಿದೆ. ಈ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೂ ಸಹ ಪಾಲಿಕೆ ಅಧಿಕಾರಿಗಳು ಯಾವ ಕ್ರಮವನ್ನೂ ಜರುಗಿಸಿಲ್ಲ. ಈ ಹಿನ್ನೆಕೆ ಪಾಲಿಕೆ ಆಯುಕ್ತರು ಮತ್ತು ಹೆಲ್ತ್ ಇನ್ ಸ್ಪೆಕ್ಟರ್ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಬಾಲಕನ ಪೋಷಕರು ದೂರು ನೀಡಿದ್ದಾರೆ.

