ATM ಕದ್ದು ಹಣ ತೆಗೆಯದೇ ಅದನ್ನು ಎಸೆದು ಹೋದ ಕಳ್ಳರು, ಏನಿದು ಘಟನೆ

prathapa thirthahalli
Prathapa thirthahalli - content producer

ಬೆಳಗಾವಿ : ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಕೆಲವೊಮ್ಮೆ ಈ ಮಾತು ನಮಗೆ ಅನುಭವವಾದಾಗ  ಆ ಮಾತನ್ನು ನೆನೆಸಿಕೊಂಡು ಬೇಸರ ಪಡುತ್ತೇವೆ. ಅದೇ ರೀತಿ  ಬೆಳಗಾವಿಯಲ್ಲಿ ನಡೆದಿರುವ ಕಳ್ಳತನದ ಘಟನೆಯು ಈ ಮಾತಿಗೆ ನೈಜ ನಿದರ್ಶನವಾಗಿದೆ. ಲಕ್ಷಾಂತರ ರೂಪಾಯಿ ಹಣವಿದ್ದ ಎಟಿಎಂ ಯಂತ್ರವನ್ನೇ ಕದ್ದೊಯ್ದಿದ್ದರೂ, ಅದನ್ನು ತೆರೆಯಲು ವಿಫಲರಾಗಿ ಕಳ್ಳರು ನಗದು ದೋಚುವ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ.

ATM Thieves Fail to Steal Cash in belagavi 
ATM Thieves Fail to Steal Cash in belagavi

ಹೆಸರಿನ ಮುಂದೆ ಬಂಗಾರಪ್ಪ ಎಂದು ಇಟ್ಟುಕೊಂಡರೆ ಸಾಲದು, ಆರಗ ಜ್ಞಾನೇಂದ್ರ ತಿರುಗೇಟು

ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿರುವ ಇಂಡಿಯಾ ಬ್ಯಾಂಕ್‌ನ ಎಟಿಎಂ ಯಂತ್ರವನ್ನೇ ಕಳ್ಳರು ಕದ್ದೊಯ್ದಿದ್ದಾರೆ. ಗ್ರಾಮದ ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿರುವ ಕಿಯೋಸ್ಕ್‌ನಲ್ಲಿ ಸೋಮವಾರ ರಾತ್ರಿ ಈ ಕಳ್ಳತನ ನಡೆದಿದ್ದು, ಈ ಕೃತ್ಯದ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ATM Thieves  ದುಷ್ಕರ್ಮಿಗಳು ಎಟಿಎಂ ಯಂತ್ರವನ್ನು ಕಿಯೋಸ್ಕ್‌ನಿಂದ ಹೊರತೆಗೆದು, ನಂತರ ಅದನ್ನು ತಳ್ಳುವ ಗಾಡಿಯೊಂದರಲ್ಲಿ ಇರಿಸಿಕೊಂಡು ಸುಮಾರು 200 ಮೀಟರ್ ದೂರದವರೆಗೆ ಸಾಗಿಸಿದ್ದಾರೆ. ನಂತರ ಅವರು ಯಂತ್ರವನ್ನು ತಮ್ಮ ವಾಹನದಲ್ಲಿ ಇರಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯಕ್ಕೆ ಮುನ್ನ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು ವ್ಯಕ್ತಿಗಳು ಖಾಲಿ ಗಾಡಿಯನ್ನು ಎಟಿಎಂ ಕಿಯೋಸ್ಕ್‌ ಕಡೆಗೆ ತಳ್ಳಿಕೊಂಡು ಹೋಗುತ್ತಿರುವುದು ದಾಖಲಾಗಿದೆ.

ಪ್ರಾಥಮಿಕ ತನಿಖೆಗಳ ಆಧಾರದ ಮೇಲೆ, ಕಳ್ಳರು 1 ಲಕ್ಷ ರೂ.ಗೂ ಹೆಚ್ಚು ಹಣ ಹೊಂದಿದ್ದ ಎಟಿಎಂ ಯಂತ್ರವನ್ನು ತೆರೆಯಲು ಹರಸಾಹಸ ಪಟ್ಟಿದ್ದಾರೆ. ಆದರೆ, ಎಟಿಎಂ ಯಂತ್ರವನ್ನು ಒಡೆಯಲು ಸಾಧ್ಯವಾಗದೆ ವಿಫಲರಾದಾಗ, ಅದನ್ನು ಕೆಲವು ಮೀಟರ್ ದೂರದಲ್ಲಿ ಕೈಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಯಂತ್ರವನ್ನು ವಶಪಡಿಸಿಕೊಂಡಿದ್ದು, ಅದರಲ್ಲಿನ ನಗದು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ATM Thieves Fail to Steal Cash in belagavi 

ATM Thieves Fail to Steal Cash in belagavi 
ATM Thieves Fail to Steal Cash in belagavi
Share This Article