ಶಿವಮೊಗ್ಗ : ತಮ್ಮ ಅನುಭವದ ಮುಂದೆ ಶಾಸಕ ಆರಗ ಜ್ಞಾನೇಂದ್ರ ಅವರು ಬಚ್ಚಾ ಎಂಬ ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆಗೆ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಮಧು ಬಂಗಾರಪ್ಪ ಅವರು ತಮ್ಮ ಹೆಸರಿನ ಮುಂದೆ ತಮ್ಮ ತಂದೆ ಎಸ್. ಬಂಗಾರಪ್ಪ ಅವರ ಹೆಸರನ್ನು ಇಟ್ಟುಕೊಂಡರೆ ಮಾತ್ರ ಸಾಲುವುದಿಲ್ಲ, ಬದಲಾಗಿ ಅವರ ತಂದೆಯವರು ಹೊಂದಿದ್ದ ಉತ್ತಮ ಮಾತು ಮತ್ತು ಸೌಜನ್ಯದ ನಡವಳಿಕೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

Araga Jnanendra ಇಂದು ನಗರದಲ್ಲಿನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾವೆಲ್ಲ ರಾಜಕೀಯಕ್ಕೆ ಬಂದಾಗ ಬಚ್ಚಾಗಳಾಗಿಯೇ ಬಂದವರು. ಬಡತನದಿಂದ, ಶೂನ್ಯದಿಂದ ರಾಜಕೀಯದಲ್ಲಿ ನೆಲೆ ಕಂಡುಕೊಂಡವರು. ಆದರೆ ಮಧು ಬಂಗಾರಪ್ಪನವರು ರಕ್ತದಲ್ಲೇ ರಾಜಕಾರಣ ಹೊಂದಿದ್ದು, ಹುಟ್ಟಿನಿಂದಲೇ ಚಿನ್ನದ ಚಮಚ ಇಟ್ಟುಕೊಂಡು ಬಂದವರು. ಅವರು ತಮ್ಮ ತಂದೆಯವರ ನೆರಳಿನಲ್ಲಿಯೇ ಬೆಳೆದಿದ್ದಾರೆ. ಹಾಗಾಗಿ ಅವರು ನನಗಿಂತ ಚೆನ್ನಾಗಿ ಮಾತನಾಡಬೇಕು ಮತ್ತು ರಾಜಕೀಯದಲ್ಲಿ ಒಂದು ಅಂತಸ್ತನ್ನು ಕಾಪಾಡಿಕೊಳ್ಳಬೇಕು. ಅವರ ತಂದೆಯವರ ಯೋಗ್ಯತೆ, ಉತ್ತಮ ನಡವಳಿಕೆ, ಸ್ನೇಹಮಯಿ ಗುಣ ಮತ್ತು ರಾಜಕಾರಣದಲ್ಲಿ ಎದುರಾಳಿಗಳಿಗೆ ನೀಡುತ್ತಿದ್ದ ಗೌರವ ಈಶ್ವರಪ್ಪ ಅವರಿಗೂ ಬರಬೇಕು ಎಂದು ಆರಗ ಆಗ್ರಹಿಸಿದರು.
ನಾನು ಕೂಡ ಈ ಹಿಂದೆ ಎರಡು ಜಿಲ್ಲೆಗಳ ಉಸ್ತುವಾರಿ ಸಚಿವನಾಗಿದ್ದೆ. ನನ್ನ ತಾಲೂಕಿಗೆ ಮಂತ್ರಿಯೊಬ್ಬರು ಬಂದಾಗ ಅವರಿಗೆ ಗೌರವ ನೀಡುವುದು ನನ್ನ ಕರ್ತವ್ಯ. ರಾಜಕಾರಣದಲ್ಲಿ ಒಂದು ಅಂತಸ್ತನ್ನು ಕಾಯ್ದುಕೊಳ್ಳಬೇಕು. ವೈಯಕ್ತಿಕ ಚಾರಿತ್ರ್ಯ ಹರಣ ಮಾಡುವುದನ್ನು ಬಿಡಬೇಕು. ಕೇವಲ ಟೀಕೆ ಮಾಡುವ ಮೂಲಕ ನಾನು ದೊಡ್ಡವನಾಗಬೇಕು ಎನ್ನುವುದನ್ನು ಬಿಡಬೇಕು, ಎಂದು ಆರಗ ಜ್ಞಾನೇಂದ್ರ ಕಿವಿಮಾತು ಹೇಳಿದರು. ತಾವು ಕೂಡ ರಾಜಕೀಯ ಆರಂಭದಲ್ಲಿ ಹೀಗೆಲ್ಲಾ ಮಾತನಾಡುತ್ತಿದ್ದೆವು, ಆದರೆ ಮೆಚ್ಯುರಿಟಿ ಬಂದ ನಂತರ ಇಂತಹ ಮಾತುಗಳನ್ನು ಬಿಟ್ಟಿದ್ದೇವೆ ಎಂದು ಹೇಳಿ ಈ ಕುರಿತು ಹೆಚ್ಚು ಮಾತನಾಡದೆ ಇದನ್ನು ಜನರಿಗೆ ಬಿಡುವುದಾಗಿ ಹೇಳಿದರು.

Araga Jnanendra Hits Back at Madhu Bangarappa


