ನವೆಂಬರ್ 27, 2025 : ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ ನಗರದ ಗೋಪಾಳದಲ್ಲಿರುವ ಗುಡ್ ಶೆಫರ್ಡ್ ಚರ್ಚ್ ಸಮೀಪದ ಚಾನೆಲ್‌ಗೆ ಇವತ್ತು ಯುವಕನೊಬ್ಬ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಅದೃಷ್ಟವಶಾತ್ ಆತನನ್ನು ಅಲ್ಲಿನ ಯುವಕರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಚಾವ್ ಮಾಡಿದ್ದಾರೆ.
ಇಂದು ಬೆಳಗ್ಗೆ 24 ವರ್ಷದ ಯುವಕನೊಬ್ಬ ಇಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ. ಅದನ್ನ ಗಮನಿಸಿದ ಸ್ಥಳದಲ್ಲಿದ್ದ ಯುವಕರು, ಅಗ್ನಿಶಾಮಕ ಸಿಬ್ಬಂದಿ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ: ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
ಯುವಕ ಚಾನೆಲ್‌ಗೆ ಹಾರುವುದನ್ನು ಕಂಡ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ಇನ್ನು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಡಿಎಫ್‌ಓ ಅಶೋಕ್ ಕುಮಾರ್ ನೇತೃತ್ವದ ತಂಡ ತಕ್ಷಣವೇ ಕಾರ್ಯಾಚರಣೆ ಆರಂಭಿಸಿದೆ. ದೋಣಿ ಹಾಗೂ ರೆಸ್ಕ್ಯು ಹಗ್ಗವನ್ನು ಬಳಸಿಕೊಂಡು, ಯುವಕನನ್ನು ಮೇಲಕ್ಕೆ ಎತ್ತಿದ್ದಾರೆ.
ಇನ್ನೂ ಚಾನೆಲ್‌ಗೆ ಬಿದ್ದಿದ್ದ ಯುವಕನನ್ನು ಹಿತೇಶ್ ಎಂದು ಗುರುತಿಸಲಾಗಿದೆ. ಈತ ನಗರದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, 2023 ರಲ್ಲಿ ಬಿ.ಇ. (Bachelor of Engineering) ಪದವಿ ಪಡೆದಿದ್ದ ಎಂದು ತಿಳಿದು ಬಂದಿದೆ. ಉದ್ಯೋಗ ಸಿಗದೇ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಮರಳಿದ್ದ ಈತ ಆತ್ಮಹತ್ಯೆಗೆ ಯತ್ನಿಸಲು ಕಾರಣ ಏನು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ..

ಕ್ರಿಕೆಟ್: ಸಾಗರದ ವಿರಾಟ್ ಆರ್. ಗಣ್ಯಗೆ ಕರ್ನಾಟಕ ತಂಡದಲ್ಲಿ ಸ್ಥಾನ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Unemployed Suicide Attempt in Shivamogga Channel Firefighters Successfully Rescue Youth.
Shivamogga tourist places, Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Shimoga news kannada today, Shimoga news kannada epaper today, Shivamogga today breaking news, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಸಾಗರ ನ್ಯೂಸ್, ಭದ್ರಾವತಿ ನ್ಯೂಸ್, ತೀರ್ಥಹಳ್ಳಿ ಸುದ್ದಿ, ಶಿಕಾರಿಪುರ ವಾರ್ತೆ, ಸೊರಬ ನ್ಯೂಸ್, ಹೊಸನಗರ ಸುದ್ದಿ, ಕರ್ನಾಟಕ ನ್ಯೂಸ್ ಶಿವಮೊಗ್ಗ, ಶಿವಮೊಗ್ಗ ರಾಜಕೀಯ ಸುದ್ದಿ, Shivamogga crime news, Shimoga weather today, Agumbe news, Jog Falls news.
