ಭದ್ರಾವತಿ : ವ್ಯಾಟ್ಸ್ಪ್ನಲ್ಲಿ ಡೆಟ್ ನೊಟ್ ಬರೆದಿಟ್ಟು ನಾಪತ್ತೆಯಾಗಿದ್ದ ಭದ್ರಾವತಿ ಮೂಲದ ನವವಿವಾಹಿತೆ ಲತಾರವರ ಮೃತದೇಹವು ಸೂಳೇಕೆರೆ–ಬಿಲ್ಚಿ ಕಣಿವೆ ಸಮೀಪದ ಭದ್ರಾ ನಾಲೆಯಲ್ಲಿ ಪತ್ತೆಯಾಗಿದೆ.
ಶಿವಮೊಗ್ಗ ಶಾಸಕರು ಹಾಗೂ ಸಚಿವರಿಗೆ 15 ದಿನ ಗಡುವು : ರಸ್ತೆ ತಡೆ ಚಳುವಳಿಯ ಎಚ್ಚರಿಕೆ
ಕೇವಲ ಏಳು ತಿಂಗಳ ಹಿಂದೆ ವಿವಾಹವಾಗಿದ್ದ ಲತಾ, ಗಂಡನ ಮನೆಯವರಿಂದ ತೀವ್ರ ಮಾನಸಿಕ ಹಿಂಸೆ ಮತ್ತು ನಿರಂತರ ಕಿರುಕುಳಕ್ಕೆ ಒಳಗಾಗಿದ್ದರು ಎಂದು ಲತಾ ಮನೆಯವರು ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೊರೆತಿರುವ ವಾಟ್ಸಪ್ ‘ಡೆತ್ ನೋಟ್’ ನಲ್ಲಿ, ಲತಾ ತನ್ನ ಗಂಡನ ಮನೆಯ ಐವರು ಸದಸ್ಯರನ್ನು ನೇರವಾಗಿ ಆರೋಪಿಸಿದ್ದರು. ನಂತರ ಸಿದ್ದಾಪುರ ಬಳಿಯ ಭದ್ರಾ ನಾಲೆಯ ಬಳಿ ಮಹಿಳೆಯ ಬಟ್ಟೆ, ಮೊಬೈಲ್ ಪತ್ತೆಯಾಗಿತ್ತು.


ಇದು ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆಗೆ ಮತ್ತಷ್ಟು ಬಲ ನೀಡಿತ್ತು. ನಾಪತ್ತೆಯಾದ ದಿನದಿಂದಲೂ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿಯಿಡೀ ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸಿದ್ದರು. ಕೊನೆಗೂ ಸೂಳೇಕೆರೆ–ಬಿಲ್ಚಿ ಕಣಿವೆ ಬಳಿ ಮೃತದೇಹ ಪತ್ತೆಯಾಗುವುದರೊಂದಿಗೆ ಈ ರಹಸ್ಯ ಕೊನೆಗೊಂಡಂತಾಗಿದೆ.
ಈ ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಲತಾ ಅವರ ಕುಟುಂಬ ಸದಸ್ಯರು ಒತ್ತಾಯಿಸುತ್ತಿದ್ದಾರೆ. ಲತಾ ಬರೆದ ವಾಟ್ಸಪ್ ಡೆತ್ ನೋಟ್ ಅನ್ನು ಪ್ರಮುಖ ಆಧಾರವಾಗಿಟ್ಟುಕೊಂಡು ಪೊಲೀಸರು ತನಿಖೆಯ ವೇಗವನ್ನು ಹೆಚ್ಚಿಸಿದ್ದಾರೆ ಮತ್ತು ಆರೋಪಿತರ ವಿಚಾರಣೆ ಮುಂದುವರೆದಿದೆ.

Bhadravathi Newlywed Latha Found Dead in Bhadra Canal


