ಶಿವಮೊಗ್ಗ: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಸಚಿವ ಸಂಪುಟ ಪುನರ್‌ರಚನೆಯ ಚರ್ಚೆಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮತ್ತೊಮ್ಮೆ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ, ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇನು ಸನ್ಯಾಸಿ ಅಲ್ಲ, ನಾನು ನನ್ನ ಹಕ್ಕುಗಳನ್ನು ಕೇಳೇ ಕೇಳುತ್ತೇನೆ ಎಂದು. ಕೇಂದ್ರ ನಾಯಕರು ಮತ್ತು ರಾಜ್ಯ ನಾಯಕರಲ್ಲಿ ಮಂತ್ರಿ ಸ್ಥಾನದ ಬಗ್ಗೆ ತಾನು ಕೇಳಿಕೊಂಡಿರುವುದಾಗಿ ತಿಳಿಸಿದರು.

ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ದಿನಗಳಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಮಾತನಾಡಿದ ಬೇಳೂರು, ಈ ವಿಚಾರವನ್ನು ಕೇಂದ್ರ ನಾಯಕರು ಬಗೆಹರಿಸಬೇಕು. “ರಾಜ್ಯದಲ್ಲಿ ಗೊಂದಲ ಸೃಷ್ಟಿಯಾಗಿದೆ. ಇದರಿಂದ ಪಕ್ಷಕ್ಕೂ ಹಾನಿಯಾಗಿದೆ. ರಾಜ್ಯದಲ್ಲಿ ಮೂಡಿರುವ ಗೊಂದಲವನ್ನು ಹೈಕಮಾಂಡ್ ಬೇಗ ಬಗೆಹರಿಸಬೇಕು. ಬಲಿಷ್ಠ ಸರ್ಕಾರ ಮುಂದುವರಿಯಬೇಕಾದರೆ ಈ ಗೊಂದಲ ನಿವಾರಣೆಯಾಗಬೇಕು,” ಎಂದು ಅಭಿಪ್ರಾಯಪಟ್ಟರು.
ಹೊಳೆಹೊನ್ನೂರು : ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾದ ಗೃಹಿಣಿ : ಏನಿದು ಪ್ರಕರಣ
ಬಿಹಾರ ಚುನಾವಣೆಯ ಫಲಿತಾಂಶಕ್ಕೂ ನಮ್ಮ ಗೊಂದಲಕ್ಕೂ ಸಂಬಂಧವಿಲ್ಲ. ಒಳ್ಳೆಯ ಕೆಲಸ ಮಾಡಿದರೆ ಬಿಹಾರದ ರೀತಿಯ ಫಲಿತಾಂಶ ಇಲ್ಲೂ ಬರಲಿದೆ. ಇನ್ನೂ ಎರಡುವರೆ ವರ್ಷ ಉತ್ತಮ ಕೆಲಸ ಮಾಡಿದರೆ ಬಿಹಾರದ ತರಹದ ಫಲಿತಾಂಶ ಆಗುತ್ತೆ,ಎಂದರು, ಸಚಿವ ಸಂಪುಟದಲ್ಲಿ ಸಾಕಷ್ಟು ಖಾಲಿ ಸ್ಥಾನಗಳಿದ್ದು, ಹೊಸಬರಿಗೆ ಮಂತ್ರಿ ಸ್ಥಾನ ನೀಡುವ ಕುರಿತು ಹೈಕಮಾಂಡ್ ಶೀಘ್ರ ನಿರ್ಧಾರ ತೆಗೆದುಕೊಳ್ಳಬೇಕು. ಡಿ.ಕೆ. ಶಿವಕುಮಾರ್ ಅಥವಾ ಪರಮೇಶ್ವರ ಅವರು ಸಿಎಂ ಆಗಬೇಕು ಎಂದು ಕೇಳುವುದರಲ್ಲಿ ತಪ್ಪಿಲ್ಲ. ಕೇಳುವ ಹಕ್ಕು ಎಲ್ಲರಿಗೂ ಇದೆ. ಆದರೆ ಕೊಡೋದು ಬಿಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ” ಎಂದು ಹೇಳಿದರು.
ನಾನು ಕಾಂಗ್ರೆಸ್ ಪಕ್ಷದ ನಿಜವಾದ ಬಣ. ಯಾವುದೇ ವಯಕ್ತಿಕ ಬಣದಲ್ಲಿ ಇಲ್ಲ. ನಾನು ಒಟ್ಟಿನಲ್ಲಿ ಹೈಕಮಾಂಡ್ ಬಣ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಹ ನಮಗೆ ಸ್ಪಂದನೆ ಮಾಡುತ್ತಾರೆ ಎಂದು ತಿಳಿಸಿದರು.
MLA Belur Gopalakrishna Demands Minister Post


