Lokayukta Raid updates 25 Nov 2025 ನವೆಂಬರ್ 25, 2025 : ಮಲೆನಾಡು ಟುಡೆ : ಇವತ್ತು ಬೆಳಗ್ಗೆ ಶಿವಮೊಗ್ಗವೂ ಸೇರಿದಂತೆ ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ರೇಡ್ ನಡೆಸಿದ್ದರು. ಒಟ್ಟು 10 ಸರ್ಕಾರಿ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ನಡೆಸಿದ ರೇಡ್ನಲ್ಲಿ ಲೋಕಾಯುಕ್ತರು ಭರ್ಜರಿ ಲೆಕ್ಕವನ್ನ ತೋರಿಸಿದ್ದಾರೆ. ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸಿದ ಆರೋಪದ ಅಡಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಬೆಂಗಳೂರು ನಗರ ಮೈಸೂರು ದಾವಣಗೆರೆ, ಮಂಡ್ಯ, ಬೀದರ್, ಹಾವೇರಿ, ಧಾರವಾಡ, ಗದಗ, ಕೊಡಗುಮತ್ತು ಶಿವಮೊಗ್ಗದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಮತ್ತು ಸಂಬಂಧಿಕರ ನಿವಾಸಗಳನ್ನು ಒಳಗೊಂಡಂತೆ ಬರೋಬ್ಬರಿ 47 ಕ್ಕೂ ಹೆಚ್ಚು ಸ್ಥಳಗಳಲ್ಲಿ ಇವತ್ತು ಲೋಕಾಯುಕ್ತ ರೇಡ್ ನಡೆದಿತ್ತು. ಈ ಕಾರ್ಯಾಚರಣೆಯಲ್ಲಿ ಒಟ್ಟು 10 ಅಧಿಕಾರಿಗಳಿಗೆ ಸೇರಿದ 35,31,77,227 ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳನ್ನು ಪತ್ತೆಹಚ್ಚಲಾಗಿದೆ.
ಲೋಕಾಯುಕ್ತರ ಬಯಲು ಮಾಡಿದ ಅಧಿಕಾರಿಗಳ ಆಸ್ತಿ ವಿವರ/Lokayukta Raid updates
Lokayukta Raid updates 25 Nov 2025 ಕೃಷ್ಣಮೂರ್ತಿ ಪಿ. ಬೆಂಗಳೂರು ನಗರ: ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿರುವ ಎಲೆಕ್ಟ್ರಾನಿಕ್ ಸಿಟಿ ಆರ್‌ಟಿಓ ಕಚೇರಿಯ ಕಚೇರಿ ಅಧೀಕ್ಷಕ ಕೃಷ್ಣಮೂರ್ತಿ ಪಿ. ಅವರಿಗೆ ಸಂಬಂಧಿಸಿದ 7 ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿತ್ತು. ಈ ವೇಳೆ, 7 ನಿವೇಶನಗಳು, 4 ಮನೆಗಳು ಮತ್ತು 5 ಎಕರೆ 30 ಗುಂಟೆ ಕೃಷಿ ಭೂಮಿ ಸೇರಿದಂತೆ 3,34,00,000 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಮತ್ತು 22,00,000 ರೂಪಾಯಿ ನಗದು, 32,00,000 ರೂಪಾಯಿ ಮೌಲ್ಯದ ಆಭರಣ, 22,00,000 ರೂಪಾಯಿ ಮೌಲ್ಯದ ವಾಹನ ಮತ್ತು 16,00,000 ರೂಪಾಯಿ ಮೌಲ್ಯದ ಮನೆ ಸಾಮಗ್ರಿಗಳು ಸೇರಿದಂತೆ 92,00,000 ರೂಪಾಯಿ ಮೌಲ್ಯದ ಚರಾಸ್ತಿ ಪತ್ತೆಯಾಗಿದ್ದು, ಇವರ ಒಟ್ಟು ಆಸ್ತಿಯ ಮೌಲ್ಯವು 4,26,00,000 ರೂಪಾಯಿನಷ್ಟಿದೆ.
ಶಿವಮೊಗ್ಗ ಜೈಲ್ನಲ್ಲಿದ್ದ ಮಾಸ್ಕ್ ಮ್ಯಾನ್ಗೆ ಜಾಮೀನು! ಆದರೆ? ವಿಷಯ ಇನ್ನಷ್ಟಿದೆ!
ರಾಮಸ್ವಾಮಿ ಸಿ. ಮೈಸೂರು: ಮೈಸೂರಿನ ಹೂಟಗಳ್ಳಿ ಪುರಸಭೆಯ ಕಂದಾಯ ನಿರೀಕ್ಷಕ ರಾಮಸ್ವಾಮಿ ಸಿ. ಅವರಿಗೆ ಸಂಬಂಧಿಸಿದ 3 ಸ್ಥಳಗಳ ಮೇಲೆ ದಾಳಿ ನಡೆಸಿ, 3 ನಿವೇಶನ, 2 ಮನೆ ಮತ್ತು 7 ಎಕರೆ ಕೃಷಿ ಭೂಮಿ ಸೇರಿದಂತೆ 1,65,54,000 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಮತ್ತು 1,15,660 ರೂಪಾಯಿ ನಗದು, 86,26,100 ರೂಪಾಯಿ ಮೌಲ್ಯದ ಆಭರಣ, 14,80,000 ರೂಪಾಯಿ ಮೌಲ್ಯದ ವಾಹನ ಹಾಗೂ 10,00,000 ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಒಳಗೊಂಡಂತೆ 1,12,21,760 ರೂಪಾಯಿ ಮೌಲ್ಯದ ಚರಾಸ್ತಿಯನ್ನು ಜಪ್ತಿ ಮಾಡಲಾಗಿದೆ. ಇದರ ಒಟ್ಟು ಮೌಲ್ಯ 2,77,75,760 ರೂಪಾಯಿ
ಸಾಗರದಲ್ಲಿ ಕರ್ತವ್ಯನಿರತ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹೃದಯಾಘಾತದಿಂದ ಸಾವು
Lokayukta Raid updates 25 Nov 2025 ಪ್ರಭು ಜೆ. ದಾವಣಗೆರೆ: ದಾವಣಗೆರೆಯ ಎಪಿಎಂಸಿ ಸಹಾಯಕ ನಿರ್ದೇಶಕರಾದ ಪ್ರಭು ಜೆ. ಅವರ 4 ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು , 5 ನಿವೇಶನಗಳು, 3 ಮನೆ ಮತ್ತು 3 ಎಕರೆ ಕೃಷಿ ಭೂಮಿ ಸೇರಿದಂತೆ 1,04,69,000 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಮತ್ತು 7,20,850 ರೂಪಾಯಿ ನಗದು, 85,60,000 ರೂಪಾಯಿ ಮೌಲ್ಯದ ಆಭರಣ, 12,00,000 ರೂಪಾಯಿ ಮೌಲ್ಯದ ವಾಹನ ಹಾಗೂ 40,50,000 ರೂಪಾಯಿ ಮೌಲ್ಯದ ಇತರೆ ಮತ್ತು ಗೃಹೋಪಯೋಗಿ ವಸ್ತುಗಳು ಸೇರಿದಂತೆ 1,45,30,850 ರೂಪಾಯಿ ಚರಾಸ್ತಿ ಪತ್ತೆಯಾಗಿದೆ. ಒಟ್ಟು ಮೌಲ್ಯ 2,49,99,850 ರೂಪಾಯಿ
ಪುಟ್ಟಸ್ವಾಮಿ ಸಿ. ಮಂಡ್ಯ: ಮಂಡ್ಯ ಪಟ್ಟಣದ ಪುರಸಭೆ ಕಚೇರಿಯ ಸಿಎಓ ಪುಟ್ಟಸ್ವಾಮಿ ಸಿ. ಅವರಿಗೆ ಸಂಬಂಧಿಸಿದ 3 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದ್ದು , 8 ನಿವೇಶನ, 2 ಮನೆ, 12 ಎಕರೆ ಕೃಷಿ ಭೂಮಿ ಮತ್ತು 72,28,000 ರೂಪಾಯಿ ಮೌಲ್ಯದ ಇತರೆ ಆಸ್ತಿ ಸೇರಿದಂತೆ ಒಟ್ಟು 3,48,45,000 ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಪತ್ತೆ ಮಾಡಲಾಗಿದೆ. ಇದರೊಂದಿಗೆ, 1,75,000 ರೂಪಾಯಿ ನಗದು, 25,00,000 ರೂಪಾಯಿ ಮೌಲ್ಯದ ಆಭರಣ, 33,00,000 ರೂಪಾಯಿ ಮೌಲ್ಯದ ವಾಹನ ಮತ್ತು 29,25,000 ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತು ಸೇರಿದಂತೆ ಒಟ್ಟು 89,00,000 ರೂಪಾಯಿ ಮೌಲ್ಯದ ಚರಾಸ್ತಿ ಲಭ್ಯವಾಗಿದೆ. ಈ ಅಧಿಕಾರಿಯ ಒಟ್ಟು ಸಂಪತ್ತು 4,37,45,000 ರೂಪಾಯಿ ಆಗಿದೆ.
ಸಾಗರ ಟೌನ್ ಪೊಲೀಸರ ಕಾರ್ಯಾಚರಣೆ! ದಾವಣಗೆರೆ ಮಹಿಳೆ ಚಿನ್ನ ಕದ್ದಿದ್ದ ಪ್ರಕರಣ ಸೇರಿ 2 ಕೇಸ್ ಕ್ಲೀಯರ್
Lokayukta Raid updates 25 Nov 2025 ಪ್ರೇಮ್ ಸಿಂಗ್ (ಬೀದರ್): ಬೀದರ್ ಜಿಲ್ಲೆಯ ಕೆಬಿಜೆಎನ್‌ಎಲ್ (KBJNL) ಮುಖ್ಯ ಇಂಜಿನಿಯರ್ ಪ್ರೇಮ್ ಸಿಂಗ್ ಅವರಿಗೆ ಸೇರಿದ 4 ಸ್ಥಳಗಳಲ್ಲಿ ಶೋಧ ನಡೆದಿದ್ದು , 4 ನಿವೇಶನ, 1 ಮನೆ ಹಾಗೂ 24 ಎಕರೆ 30 ಗುಂಟೆ ಕೃಷಿ ಭೂಮಿ ಸೇರಿದಂತೆ 2,43,00,000 ರೂಪಾಯಿ ಮೌಲ್ಯದ ಸ್ಥಿರಾಸ್ ಮತ್ತು 62,00,000 ರೂಪಾಯಿ ಮೌಲ್ಯದ ಬ್ಯಾಂಕ್ ಎಫ್‌ಡಿ (FD), 50,75,000 ರೂಪಾಯಿ ಮೌಲ್ಯದ ಆಭರಣ, 42,48,000 ರೂಪಾಯಿ ಮೌಲ್ಯದ ವಾಹನ ಹಾಗೂ 8,83,552 ರೂಪಾಯಿ ಮೌಲ್ಯದ ಇತರ ವಸ್ತುಗಳನ್ನು ಒಳಗೊಂಡಂತೆ 1,64,06,552 ರೂಪಾಯಿ ಮೌಲ್ಯದ ಚರಾಸ್ತಿಯು ಪತ್ತೆಯಾಗಿದೆ. ಒಟ್ಟು ಆಸ್ತಿಯ ಮೌಲ್ಯ 4,07,06,552 ರೂಪಾಯಿ
Lokayukta Raid updates 25 Nov 2025 ಶೇಖಪ್ಪ ಸಣ್ಣಪ್ಪ ಕಟ್ಟೀಮನಿ (ಹಾವೇರಿ): ಹಾವೇರಿ ಜಿಲ್ಲಾ ನಗರಾಭಿವೃದ್ಧಿ ಕೋಶದ (DUDC) ಕಾರ್ಯನಿರ್ವಾಹಕ ಇಂಜಿನಿಯರ್ ಶೇಖಪ್ಪ ಸಣ್ಣಪ್ಪ ಕಟ್ಟೀಮನಿ ಅವರ 6 ಸ್ಥಳಗಳಲ್ಲಿ ದಾಳಿ ನಡೆಸಿ , 14 ನಿವೇಶನ ಮತ್ತು 3 ಮನೆ ಸೇರಿದಂತೆ 3,67,42,200 ರೂಪಾಯಿ ಮೌಲ್ಯದ ಸ್ಥಿರಾಸ್ತಿ 10,44,830 ರೂಪಾಯಿ ನಗದು, 25,40,000 ರೂಪಾಯಿ ಮೌಲ್ಯದ ಆಭರಣ, 15,00,000 ರೂಪಾಯಿ ಮೌಲ್ಯದ ವಾಹನ ಮತ್ತು 1,18,07,850 ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಒಳಗೊಂಡಂತೆ 1,68,92,680 ರೂಪಾಯಿ ಮೌಲ್ಯದ ಚರಾಸ್ತಿಯು ಸೇರಿದಂತೆ 5,36,34,680 ರೂಪಾಯಿ ಮೌಲ್ಯ ಆಸ್ತಿ ವಶಕ್ಕೆಪಡೆಯಲಾಗಿದೆ.
ಟೂರಿಸ್ಟ್ಗಳಿಗೆ ಎಚ್ಚರಿಕೆ! ಹೊಸನಗರ ಈ ಸ್ಟಳಕ್ಕೆ ಹೋದರೆ ಕೇಸ್!, ಬೇಲಿ, ಬೋರ್ಡ್ ಹಾಕಿ ವಾರ್ನಿಂಗ್
ಸುಭಾಷ್ ಚಂದ್ರ ಚಂದ್ರಯ್ಯ ನಾಟಿಕಾರ್ (ಧಾರವಾಡ): ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುಭಾಷ್ ಚಂದ ನಾಟಿಕಾರ್ ಅವರಿಗೆ ಸೇರಿದ 6 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ ಲೋಕಾಯುಕ್ತ ಸಿಬ್ಬಂದಿ , 5 ನಿವೇಶನ, 2 ಮನೆ ಮತ್ತು 18 ಎಕರೆ 20 ಗುಂಟೆ ಕೃಷಿ ಭೂಮಿ ಸೇರಿದಂತೆ 2,59,08,000 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹಾಗೂ 1,12,400 ರೂಪಾಯಿ ನಗದು, 6,75,000 ರೂಪಾಯಿ ಮೌಲ್ಯದ ಆಭರಣ, 37,00,000 ರೂಪಾಯಿ ಮೌಲ್ಯದ ವಾಹನ ಮತ್ತು 8,00,000 ರೂಪಾಯಿ ಮೌಲ್ಯದ ಇತರ ವಸ್ತುಗಳನ್ನು ಒಳಗೊಂಡಂತೆ 52,87,400 ರೂಪಾಯಿ ಮೌಲ್ಯದ ಚರಾಸ್ತಿ ಪತ್ತೆ ಮಾಡಿದ್ದಾರೆ.
Lokayukta Raid updates 25 Nov 2025
ತೀರ್ಥಹಳ್ಳಿ: ನೇಣು ಬಿಗಿದ ಸ್ಥಿತಿಯಲ್ಲಿ ಬಿಬಿಎ ವಿದ್ಯಾರ್ಥಿನಿ ಪತ್ತೆ! ಸಿಗದ ಸಾವಿನ ಕಾರಣ?
ಸತೀಶ ರಾಮಣ್ಣ ಕಟ್ಟೀಮನಿ (ಗದಗ): ಗದಗ ಜಿಲ್ಲೆಯ ಹುಲಿಗೋಳ ಪ್ರಾಥಮಿಕ ಪಶುವೈದ್ಯಕೀಯ ಚಿಕಿತ್ಸಾಲಯದ ಹಿರಿಯ ಪಶುವೈದ್ಯಕೀಯ ಪರೀಕ್ಷಕರಾದ ಸತೀಶ ರಾಮಣ್ಣ ಕಟ್ಟೀಮನಿ ಅವರ 5 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿ , 2 ಮನೆ ಮತ್ತು 4 ಎಕರೆ ಕೃಷಿ ಭೂಮಿ ಸೇರಿದಂತೆ 55,50,000 ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ಹಾಗೂ 17,16,805 ರೂಪಾಯಿ ನಗದು, 74,80,806 ರೂಪಾಯಿ ಮೌಲ್ಯದ ಆಭರಣ, 25,00,000 ರೂಪಾಯಿ ಮೌಲ್ಯದ ವಾಹನ ಮತ್ತು 36,60,288 ರೂಪಾಯಿ ಮೌಲ್ಯದ ಬ್ಯಾಂಕ್ ಎಫ್‌ಡಿ, ಷೇರುಗಳು ಮತ್ತು ಬ್ಯಾಂಕ್ ಬ್ಯಾಲೆನ್ಸ್ ಸೇರಿದಂತೆ 1,53,57,899 ರೂಪಾಯಿ ಮೌಲ್ಯದ ಚರಾಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

ಡಿ.ಎಂ. ಗಿರೀಶ (ಕೊಡಗು): ಕೊಡಗು ಜಿಲ್ಲೆಯ ಮಡಿಕೇರಿ ಉಪ ವಿಭಾಗದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಡಿ.ಎಂ. ಗಿರೀಶ ಅವರ 4 ಸ್ಥಳಗಳಲ್ಲಿ ಶೋಧ ನಡೆಸಿದಾಗ , 4 ನಿವೇಶನ ಮತ್ತು 1 ಮನೆ ಸೇರಿದಂತೆ 1,89,94,000 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹಾಗೂ 5,53,715 ರೂಪಾಯಿ ನಗದು, 1,81,92,690 ರೂಪಾಯಿ ಮೌಲ್ಯದ ಆಭರಣ, 9,08,000 ರೂಪಾಯಿ ಮೌಲ್ಯದ ವಾಹನ ಮತ್ತು 40,00,000 ರೂಪಾಯಿ ಮೌಲ್ಯದ ಗೃಹೋಪಯೋಗಿ ಮತ್ತು ಇತರೆ ವಸ್ತುಗಳನ್ನು ಒಳಗೊಂಡಂತೆ 2,36,54,405 ರೂಪಾಯಿ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಇವರ ಒಟ್ಟು ಸಂಪತ್ತು 4,26,48,405 ರೂಪಾಯಿ ಆಗಿದೆ.

Lokayukta Raid updates 25 Nov 2025 ಲಕ್ಷ್ಮೀಪತಿ ಸಿ.ಎನ್. (ಶಿವಮೊಗ್ಗ): ಶಿವಮೊಗ್ಗದ ಸಿಮ್ಸ್ ವೈದ್ಯಕೀಯ ಕಾಲೇಜಿನ ಪ್ರಥಮ ದರ್ಜೆ ಸಹಾಯಕರಾದ (FDA) ಲಕ್ಷ್ಮೀಪತಿ ಸಿ.ಎನ್. ಅವರಿಗೆ ಸೇರಿದ 5 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಯಿತು. 3 ಮನೆಗಳು ಮತ್ತು 3 ಎಕರೆ 20 ಗುಂಟೆ ಕೃಷಿ ಭೂಮಿ ಸೇರಿದಂತೆ 1,63,80,000 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹಾಗೂ 12,01,720 ರೂಪಾಯಿ ನಗದು, 23,29,880 ರೂಪಾಯಿ ಮೌಲ್ಯದ ಆಭರಣ, 23,04,000 ರೂಪಾಯಿ ಮೌಲ್ಯದ ವಾಹನ ಮತ್ತು 27,47,881 ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಒಳಗೊಂಡಂತೆ 85,83,481 ರೂಪಾಯಿ ಮೌಲ್ಯದ ಚರಾಸ್ತಿ ಲಭ್ಯವಾಗಿದೆ. ಈ ಅಧಿಕಾರಿಯ ಒಟ್ಟು ಆಸ್ತಿಯ ಮೌಲ್ಯ 2,49,63,481 ರೂಪಾಯಿ.
Lokayukta Raid updates 25 Nov 2025
ಕ್ರಿಕೆಟ್ ವಿಶ್ವಕಪ್ಗೆದ್ದ ರಿಪ್ಪನ್ಪೇಟೆಯ ಕಾವ್ಯಾ! ಕಾಣುವ ಕಣ್ಗಳೇ ಸೋಲುವ ಕಾಣದ ಕಂಗಳ ಕನಸು ಓದಿ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
