ನವೆಂಬರ್ 24, 2025 : ಮಲೆನಾಡು ಟುಡೆ : ಈಗೀಗ ಅಪರಾಧ ಯಾಕಾಗಿ ನಡೆಯುತ್ತದೆ ಎನ್ನುವುದೆ ಅರ್ಥವಾಗುತ್ತಿಲ್ಲ. ಇದಕ್ಕಿಂತ ಹೆಚ್ಚಾಗಿ ಕ್ರೈಂಗೆ ಕಾರಣವೇ ಚಿತ್ರವಿಚಿತ್ರ ಅನಿಸುತ್ತದೆ. ಇಂತಹುದ್ದೆ ವಿಚಿತ್ರ ಎನ್ನಿಸುವಂತೆ ಎರಡು ಘಟನೆಗಳು ಶಿವಮೊಗ್ಗದಲ್ಲಿ ನಡೆದಿದೆ. ಪ್ರಕರಣದಲ್ಲಿನ ಗುರುತು ಪರಿಚಯವನ್ನು ಗೌಪ್ಯವಾಗಿ ಮುಂದುವರಿಯುವುದಾದರೆ, ಪ್ರಕರಣದ ವಿವರ ಹೀಗಿದೆ.

ಶಿವಮೊಗ್ಗದಲ್ಲಿಯೇ ತೆರೆಯಲಿದೆ ಕಂಠೀರವ ಸ್ಟುಡಿಯೋ! ಬೇಗ ಬರಲಿದೆ ಸರ್ಕಾರಿ OTT, ಫಿಲ್ಮ್ ಸಿಟಿ
ಅಂಗಳ ಗುಡಿಸಿದ ದೂಳು ಹಾರಿದ್ದಕ್ಕೆ ಹೊಡೆದಾಟ
ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಗ್ರಾಮವೊಂದರಲ್ಲಿ ಈ ಘಟನೆ ವರದಿಯಾಗಿದೆ. ಮನೆಯ ಮುಂಭಾಗ ಕಸ ಗುಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ತಕರಾರು ಉಂಟಾಗಿ ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿದೆ. ನವೆಂಬರ್ 20, 2025 ರಂದು ಬೆಳಗ್ಗೆ 6 ಗಂಟೆಯ ಸಮಯದಲ್ಲಿ ಗ್ರಾಮದ ನಿವಾಸಿ ತಮ್ಮ ಮನೆಯ ಮುಂಭಾಗದ ಅಂಗಳ ಗುಡಿಸುತ್ತಿದ್ದರು. ಈ ವೇಳೆ ದೂಳು ಪಕ್ಕದ ಮನೆಯ ಕಡೆಗೆ ಹಾರುತ್ತಿತ್ತು. ಇದೇ ಕಾರಣಕ್ಕೆ ಜಗಳವಾಗಿದೆ. ನೆರೆಮನೆಯ ನಿವಾಸಿ ಹಾಗೂ ಆಕೆಯ ಕುಟುಂಬಸ್ಥರು ಕಾಲಿನಿಂದ ಒದ್ದು, ತಲೆಕೂದಲು ಹಿಡಿದು, ಬೆನ್ನಿಗೆ ಗುದ್ದಿ ಹಲ್ಲೆ ಮಾಡಿದ್ದಾರೆ ಎಂಬುದು ಆರೋಪ. ಈ ಸಂಬಂಧ ಜೀವ ಬೆದರಿಕೆಯ ದೂರು ಸಹ ನೀಡಲಾಗಿದೆ.

ತೀರ್ಥಹಳ್ಳಿ: ನೇಣು ಬಿಗಿದ ಸ್ಥಿತಿಯಲ್ಲಿ ಬಿಬಿಎ ವಿದ್ಯಾರ್ಥಿನಿ ಪತ್ತೆ! ಸಿಗದ ಸಾವಿನ ಕಾರಣ?
ಮಾಟ ಮಂತ್ರ ಮಾಡಿಸುತ್ತೀಯಾ ಎಂದು ಹಲ್ಲೆ
ಇನ್ನೊಂದು ಘಟನೆಯು ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಯೇ ನಡೆದಿದೆ. ಇಲ್ಲಿನ ಗ್ರಾಮದಲ್ಲಿ ಮಾಟ ಮಂತ್ರ ಮಾಡಿಸುತ್ತೀಯಾ ಎಂದು ಆರೋಪಿಸಿ ದಂಪತಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ನವೆಂಬರ್ 21, 2025 ರಂದು ರಾತ್ರಿ 10 ಗಂಟೆಯ ಸಮಯದಲ್ಲಿ ಘಟನೆ ನಡೆದಿದೆ. ಇಲ್ಲಿನ ನಿವಾಸಿ ದಂಪತಿ, ತಮ್ಮ ಮನೆಯ ಹಿಂಭಾಗದ ಖಾಲಿ ನಿವೇಶನದಲ್ಲಿ ಕುಳಿತು ಹಣಕಾಸಿನ ವಿಚಾರವಾಗಿ ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಆರೋಪಿಗಳಿಬ್ಬರು ನೀವು ಇಲ್ಲಿ ಮಾಟ ಮಂತ್ರ ಮಾಡಿಸುತ್ತಿದ್ದೀರಾ ಎಂದು ಆರೋಪಿಸಿ ಅವಾಚ್ಯವಾಗಿ ನಿಂದಿಸಿ, ಕೈ ಹಾಗೂ ಕೋಲಿನಿಂದ ಹಲ್ಲೆ ನಡೆಸಿದ್ದಾರೆ. ಈ ಹಿಂದೆಯೂ ಆರೋಪಿಗಳು ಪದೇ ಪದೇ ಜಗಳ ಮಾಡುತ್ತಿದ್ದರು ಎಂದು ದೂರು ನೀಡಲಾಗಿದ್ದು, ತುಂಗಾನಗರ ಪೊಲೀಸರು ಕೇಸ್ ಮಾಡಿ, ವಿಚಾರಿಸ್ತಿದ್ದಾರೆ.
ಮಾದಕ ನಶೆಯ ನಡುವೆ ಸಿಟಿಯಲ್ಲಿ ಹೆಚ್ಚಾದ ಸರಗಳ್ಳತನ! ತಿಂಗಳಿನಲ್ಲಿ 3ನೇ ಕೇಸ್
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Two separate assault cases reported in Shivamogga. A woman assaulted over sweeping dust, and a couple attacked on suspicion of black magic. Cases registered at Tunga Nagar Police Station.
