Health Scam ನವೆಂಬರ್ 24, 2025 : ಮಲೆನಾಡು ಟುಡೆ : ಶಿವಮೊಗ್ಗ, ಬೆಂಗಳೂರು: ಕುಂಬಾರನಿಗೆ ವರಷ, ದೊಣ್ಣೆಗೆ ನಿಮಿಷ ಎಂಬಂತೆ, ಪ್ರತಿಯೊಬ್ಬರು ಹಣ ಗಳಿಸಲು ಸಾಕಷ್ಟು ಕಷ್ಟಪಡುತ್ತಾರೆ. ಆದರೆ ಹಣವನ್ನು ಕಳೆದುಕೊಳ್ಳಲು ಕೆಲವೇ ನಿಮಿಷಗಳು ಸಾಕು. ಮನುಷ್ಯನಲ್ಲಿರುವ ವೈಯಕ್ತಿಕ ನ್ಯೂನ್ಯತೆಗಳು ಮತ್ತು ಸಮಸ್ಯೆಗಳು ಆತನನ್ನು ಪರಿಹಾರಕ್ಕಾಗಿ ಹಣ ಖರ್ಚು ಮಾಡಲು ಪ್ರೇರೇಪಿಸುತ್ತವೆ. ಇದನ್ನು ಬಂಡವಾಳ ಮಾಡಿಕೊಳ್ಳುವ ವಂಚಕರು, ಸಾರ್ವಜನಿಕರ ದುರ್ಬಲತೆಯನ್ನು ದುರುಪಯೋಗಪಡಿಸಿಕೊಂಡು ಹಣ ದೋಚಲು ಹೊಂಚು ಹಾಕಿರುತ್ತಾರೆ. ಇಂತಹದ್ದೇ ಒಂದು ಪ್ರಕರಣದಲ್ಲಿ, ಬೆಂಗಳೂರಿನ ಖಾಸಗಿ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿಯೊಬ್ಬರಿಗೆ ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ಕೊಡಿಸುವುದಾಗಿ ನಂಬಿಸಿ, ವಂಚಕರು ಬರೋಬ್ಬರಿ ₹48 ಲಕ್ಷ ಹಣವನ್ನು ದೋಚಿದ್ದಾರೆ.

Health Scam ಏನಿದು ವಂಚನೆಯ ಪ್ರಕರಣ?
ಬೆಂಗಳೂರಿನ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು 2023 ರಲ್ಲಿ ವಿವಾಹವಾಗಿದ್ದರು. ಅವರಿಗೆ ಲೈಂಗಿಕ ಸಮಸ್ಯೆಗಳಿತ್ತು. ಇದರ ಬಗ್ಗೆ ಕೆಂಗೇರಿಯಲ್ಲಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ಪರೀಕ್ಷೆ ಮಾಡಿಸಿದ್ದರು. ಅಲ್ಲದೆ ಅಲ್ಲಿನ ವೈದ್ಯರಿಂದ, ಸಲಹೆ ಮತ್ತು ಔಷಧಿ ಪಡೆದುಕೊಳ್ಳುತ್ತಿದ್ದರು. ಈ ನಡುವೆ ಅವರ ಗಮನ ಬೀದಿ ಬದಿಯಲ್ಲಿ ಕಾಣ ಸಿಗುವ ನಾಟಿ ಔಷಧಿಯ ಟೆಂಟ್ ಮೇಲೆ ಬಿದ್ದಿತ್ತು. ಸಮಸ್ಯೆ ನಿವಾರಣೆ ಆಗುವ ಹಾಗಿದ್ದರೇ ಇದನ್ನೇಕೆ ಪ್ರಯತ್ನಿಸಬಾರದು ಎಂದು ಕೊಂಡು ಬೀದಿ ಬದಿಯ ಟೆಂಟ್ನತ್ತ ತೆರಳಿದ್ದರು. ಆದರೆ ತದನಂತರ ನಡೆದಿದ್ದೇ ಬೇರೆ.
ಕೆಂಗೇರಿಯ ಆಸ್ಪತ್ರೆಗೆ ಹೋಗಿ ಬರುವ ಮಾರ್ಗ ಮದ್ಯೆ ಸಂತ್ರಸ್ತ ವ್ಯಕ್ತಿಗೆ ಒಂದು ಆಯುರ್ವೇದಿಕ್ ಟೆಂಟ್ ಕಾಣಿಸಿತ್ತು. ಆ ಟೆಂಟ್‌ನ ಹೊರಗೆ ಲೈಂಗಿಕ ಸಮಸ್ಯೆಗೆ ಶೀಘ್ರ ಪರಿಹಾರ ಎಂಬ ಬೋರ್ಡ್ ಹಾಕಲಾಗಿತ್ತು. ಬೋರ್ಡ್ ನೋಡಿ ಇದರಿಂದ ಏನಾದರೂ ಉಪಯೋಗ ಆಗಬಹುದೆಂದು ಕುತೂಹಲದಿಂದ ಒಳಗೆ ಹೋಗಿದ್ದ ಸಂತ್ರಸ್ತರು ತಮ್ಮ ಸಮಸ್ಯೆಯನ್ನು ಅಲ್ಲಿದ್ದ ವ್ಯಕ್ತಿಯ ಬಳಿ ಹೇಳಿಕೊಂಡಿದ್ದಾರೆ. ಆ ವ್ಯಕ್ತಿಯು ತಕ್ಷಣವೇ, ನಾನು ಗುರೂಜಿಯೊಬ್ಬರನ್ನು ಕರೆಹಿಸುತ್ತೇವೆ, ಅವರು ನಿಮಗೆ ಶೀಘ್ರ ಪರಿಹಾರ ನೀಡುತ್ತಾರೆ ಎಂದು ಭರವಸೆ ನೀಡಿದ್ದಅದೇ ದಿನ ಸಂಜೆ 4 ಗಂಟೆಗೆ ವಿಜಯ್ ಗುರೂಜಿ ಹೆಸರಿನ ವ್ಯಕ್ತಿ ಟೆಂಟ್ಗೆ ಬಂದು ಒಂದು ಗ್ರಾಂ ತೂಕದ ದೇವರಾಜ್ ಬೂಟಿ ಎಂಬ ಔಷಧಿಯನ್ನು ಆಯುರ್ವೇದಿಕ್ ಶಾಪ್ ಒಂದರಲ್ಲಿ ಖರೀದಿಸಿ. ಇದರ ಬೆಲೆ ₹1,60,000. ಇದು ಬೇರೆಲ್ಲೂ ಸಿಗುವುದಿಲ್ಲ, ಹರಿದ್ವಾರದಿಂದ ತರಿಸಲಾಗುತ್ತದೆ. ಮೇಲಾಗಿ ಔಷಧಿಯನ್ನು ಕೊಳ್ಳುವಾಗ ಯಾವುದೇ ಆನ್‌ಲೈನ್ ಪಾವತಿ ಮಾಡಬಾರದು ಮತ್ತು ಯಾರನ್ನೂ ಜೊತೆಗೆ ಕರೆದುಕೊಂಡು ಹೋಗಬಾರದು ಹಾಗೆ ಮಾಡಿದರೆ ಔಷಧಿಗೆ ಶಕ್ತಿ ಬರುವುದಿಲ್ಲ ಎಂದು ನಂಬಿಸಿದ್ದ.
A software engineer working with Capgemini was duped of ₹48 lakh after approaching an “Ayurvedic Dawakhana” to enhance his sexual performance. Case registered in Bengaluru. Vinay Guruji the prime accused is absconding. Investigation underway. pic.twitter.com/06HF9kBgdS
— Deepak Bopanna (@dpkBopanna) November 23, 2025
ವಿಜಯ್ ಗುರೂಜಿ ಎಂಬಾತನ ಮಾತಿಗೆ ಮರುಳಾದ ಸಂತ್ರಸ್ತ ಮನೆಯಲ್ಲಿನ ಹಣವನ್ನು ಬಳಸಿ ಔಷಧಿಯನ್ನು ಖರಿಸಿದ್ದ. ಇದನ್ನ ಬಳಸುತ್ತಿದ್ದ ಬೆನ್ನಲ್ಲೆ ಗುರೂಜಿ ಅವರು ಪ್ರತಿ ಗ್ರಾಂಗೆ ₹76,000 ಬೆಲೆಯ ಭವನ ಬೂಟಿ ತೈಲ (ಆಯಿಲ್) ಖರೀದಿಸುವಂತೆ ತಿಳಿಸಿದ್ದ. ಅದನ್ನು ನಂಬಿದ ಸಂತ್ರಸ್ತರು ಹೀಗೆ ಸುಮಾರು ಒಟ್ಟು ₹17 ಲಕ್ಷ ರೂಪಾಯಿಯ ಔಷಧಿ ಖರೀದಿಸಿ ಸೇವಿಸಿದ್ದರು. ಈ ನಂತರ ವಿಜಯ್ ಗುರೂಜಿ ಸಂತ್ರಸ್ತರಿಗೆ ಮತ್ತೆ ಮೂರು ಬಾರಿ ದೇವರಾಜ್ ಬೂಟಿ ಎಂಬ ಹೆಸರಿನ ಪೌಡರ್ಅನ್ನು ಪ್ರತಿ ಗ್ರಾಂಗೆ ₹1,60,000 ದಂತೆ ಖರೀದಿಸಬೇಕು ಎಂದಿದ್ದ. ಅಲ್ಲದೆ ಇದನ್ನು ಪಡೆಯದಿದ್ದರೆ ಇಲ್ಲಿಯವರೆಗೆ ನೀಡಿರುವ ಚಿಕಿತ್ಸೆ ಫಲಕಾರಿಯಾಗುವುದಿಲ್ಲ, ಸಮಸ್ಯೆ ಮುಂದುವರಿಯುತ್ತದೆ ಎಂದು ಹೆದರಿಸಿದ್ದ. ಇದರಿಂದ ಭಯದಲ್ಲಿ ಸಂತ್ರಸ್ತರು ಎಚ್.ಡಿ.ಎಫ್.ಸಿ. ಬ್ಯಾಂಕ್ ಖಾತೆಯಲ್ಲಿ ₹20 ಲಕ್ಷ ಲೋನ್ ಪಡೆದು, ಒಟ್ಟು 18 ಗ್ರಾಂ ದೇವರಾಜ್ ಬೂಟಿ ಔಷಧಿಯನ್ನು ಖರೀದಿಸಿದ್ದರು. ಹೀಗೆ ಒಟ್ಟು ₹48 ಲಕ್ಷ ಹಣವನ್ನು ಆರ್ಯುವೇದಿಕ್ ಔಷಧಿಗೆಂದೆ ಪಾವತಿಸಿದ್ದರು.

Health Scam ಹಣ ದೋಚಿ ಬೆದರಿಕೆ: ಕಿಡ್ನಿಗೆ ಹಾನಿ
ಇಷ್ಟೊಂದು ಹಣ ಖರ್ಚು ಮಾಡಿದರೂ ದೂರುದಾರರಿಗೆ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ವಿಷಯವನ್ನು ವಿಜಯ್ ಗುರೂಜಿಗೆ ತಿಳಿಸಿದಾಗ, ಅವರು ಇನ್ನೂ ಬೇರೆ ಆಯುರ್ವೇದಿಕ್ ಔಷಧಿ ಇದೆ, ಅದನ್ನು ತೆಗೆದುಕೊಂಡರೆ ನಿಮಗೆ ಸರಿಹೋಗುತ್ತದೆ ಎಂದಿದ್ದಾರೆ. ಒಂದು ವೇಳೆ ಚಿಕಿತ್ಸೆಗೆ ಬರದಿದ್ದರೆ ಹೆಚ್ಚಿನ ಸಮಸ್ಯೆಯಾಗಿ ಜೀವಕ್ಕೆ ತೊಂದರೆಯಾಗುತ್ತದೆ ಎಂದು ಪ್ರತಿದಿನ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾರೆ.ದೂರುದಾರರು ಗುರೂಜಿ ನೀಡಿದ ಔಷಧಿಯ ಸೇವನೆಯ ನಂತರ ರಕ್ತ ಪರೀಕ್ಷೆ ಮಾಡಿಸಿದಾಗ, ತಮ್ಮ ಕಿಡ್ನಿಗೆ ಹಾನಿಯಾಗಿದೆ ಎಂದು ವೈದ್ಯರು ತಿಳಿಸಿರುತ್ತಾರೆ. ಇದರಿಂದ ತೀವ್ರ ಆತಂಕಗೊಂಡ ದೂರುದಾರರು, ಮೋಸ ಮಾಡಿ ಹಣ ಗಳಿಸಿದ್ದಷ್ಟೆ ಅಲ್ಲದೆ ಹಾನಿಕಾರಕ ಔಷಧ ನೀಡಿ, ಆರೋಗ್ಯಕ್ಕೆ ಸಮಸ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಮೂಲತಃ ಶಿವಮೊಗ್ಗದವರಾದ ಸಂತ್ರಸ್ತರು ಬೆಂಗಳೂರಿನಲ್ಲಿ ನೆಲಸಿದ್ದಾರೆ. ಇವರ ಈ ಪ್ರಕರಣ ಎಲ್ಲಂದರಲ್ಲಿ ಯಾರಂದರೆ ಅವರ ಬಳಿ ಸಿಕ್ಕಸಿಕ್ಕ ಔಷಧ ಪಡೆಯುವುದರಿಂದ ಅನಾಹುತವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

