ಶುಭಸುದ್ದಿ ಇವತ್ತಿನ ರಾಶಿಫಲ! ಅದೃಷ್ಟ! ಧನಲಾಭ!

ajjimane ganesh

November 24 Horoscope  ನವೆಂಬರ್ 24,  2025 : ಮಲೆನಾಡು ಟುಡೆ : ವಾರದ ಆರಂಭ, ದ್ವಾದಶ ರಾಶಿಗಳ ಭವಿಷ್ಯ. ಕೆಲವರಿಗೆ ಹೊಸ ಉದ್ಯೋಗ, ಮತ್ತೆ ಕೆಲವರಿಗೆ ಗೊಂದಲದ ವಾತಾವರಣ ಇದು ಸೋಮವಾರದ ರಾಶಿಫಲ

November 24 Horoscope
November 24 Horoscope

ಇಂದಿನ ಪಂಚಾಂಗ/ November 24 Horoscope

ವಿಶ್ವಾವಸು ನಾಮ ಸಂವತ್ಸರದ ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಚತುರ್ಥಿ,  ಪೂರ್ವಆಷಾಢ ನಕ್ಷತ್ರ. ರಾಹುಕಾಲ ಬೆಳಗ್ಗೆ 7.30 ರಿಂದ 9.00 ರವರೆಗೆ ಇದ್ದು, ಯಮಗಂಡ ಕಾಲವು ಬೆಳಗ್ಗೆ 10.30 ರಿಂದ 12.00 ರವರೆಗೆ ಇರುತ್ತದೆ. ಮಧ್ಯಾಹ್ನ 2.24 ರಿಂದ 4.01 ರವರೆಗೆ ಅಮೃತ ಘಳಿಗೆ ಇರಲಿದೆ

ದ್ವಾದಶ ರಾಶಿಗಳ ಭವಿಷ್ಯದ ವಿವರ/November 24 Horoscope

ಮೇಷ: ಆದಾಯಕ್ಕಿಂತಲೂ ಅಧಿಕ ಖರ್ಚುಗ. ಅನಿರೀಕ್ಷಿತ ಪ್ರಯಾಣ ಕೈಗೊಳ್ಳುವ ಸಾಧ್ಯತೆ. ಒತ್ತಡಕ್ಕೆ ಒಳಗಾಗುವರು. ಬಂಧುಗಳೊಡನೆ ಕೆಲವು ವಿವಾದ ಅಥವಾ ತಕರಾರು ಉಂಟಾಗುವ ಸಾಧ್ಯತೆಯಿದೆ. ಆರೋಗ್ಯದ ಕಡೆಗೆ ವಿಶೇಷ ಗಮನ ಬೇಕು. ಉದ್ಯೋಗದ ಪ್ರಯತ್ನ ಫಲಕಾರಿಯಾಗದಿರಬಹುದು. ಉದ್ಯೋಗ ಮತ್ತು ವೃತ್ತಿ ಕ್ಷೇತ್ರದಲ್ಲಿ ಗೊಂದಲಮಯ ವಾತಾವರಣ ಮುಂದುವರಿಯಲಿದೆ.

ಹೊಸನಗರ: ಖಾಸಗಿ ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ :  ಇಬ್ಬರಿಗೆ ಗಂಭೀರ ಗಾಯ

ವೃಷಭ : ಹೆಚ್ಚಿನ ವ್ಯಯ ಮತ್ತು ಶ್ರಮ ಎದುರಾಗುತ್ತವೆ. ಬಂಧುಗಳೊಂದಿಗೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ತಲೆದೋರಬಹುದು. ದೂರ ಪ್ರಯಾಣ ಕೈಗೊಳ್ಳಬೇಕಾಗಿ ಬರುತ್ತದೆ. ಹೊಸ ಕೆಲಸ ಅಥವಾ ಉದ್ಯೋಗದ ಯತ್ನ ನಿಧಾನವಾಗುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಒಂದು ರೀತಿಯ ಗೊಂದಲ ಮತ್ತು ಅಸ್ಥಿರತೆ ಇರುತ್ತದೆ.

ಮಿಥುನ  : ಇಂದು ನಿಮಗೆ ಪರಿಸ್ಥಿತಿ ಸಂಪೂರ್ಣವಾಗಿ ಅನುಕೂಲಕರವಾಗಿರುತ್ತದೆ. ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಇದು ಉತ್ತಮ ದಿನವಾಗಿದೆ. ಹಿಂದೆ ನೀಡಿದ ಬಾಕಿ ಹಣ ವಸೂಲಿಯಾಗಲಿದೆ. ಹೊಸ ವಾಹನ ಖರೀದಿಸುವ ಯೋಗವಿದೆ. ವ್ಯಾಪಾರ ವಹಿವಾಟು ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶವಿದೆ. 

ಕರ್ಕಾಟಕ: ಕೆಲಸ ಕಾರ್ಯ ಸರಿಯಾದ ಸಮಯದಲ್ಲಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ವಿಶೇಷ ಗೌರವ ಮತ್ತು ಮರ್ಯಾದೆಗಳನ್ನು ಪಡೆಯುತ್ತಾರೆ. ವಾಹನ ಖರೀದಿಯ ಯೋಗವಿದೆ. ದೈವಿಕ ಚಿಂತನೆಗಳಲ್ಲಿ ಮತ್ತು ಪೂಜಾ ಕಾರ್ಯಗಳಲ್ಲಿ ಮನಸ್ಸು ತೊಡಗುತ್ತದೆ. ವ್ಯಾಪಾರ ವ್ಯವಹಾರಗಳು ಮತ್ತು ನೌಕರಿಗಳಲ್ಲಿ ಇದ್ದಂತಹ ವಿವಾದ ಮತ್ತು ಸಮಸ್ಯೆ ಇತ್ಯರ್ಥವಾಗುತ್ತದೆ.

ಸಾಗರದಲ್ಲಿ ಕರ್ತವ್ಯನಿರತ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹೃದಯಾಘಾತದಿಂದ ಸಾವು

November 24 Horoscope

ಸಿಂಹ  :  ದಿನನಿತ್ಯದ ವ್ಯವಹಾರ ಮುಗಿಸಲು ಇಂದು ಕೆಲವು ಅಡೆತಡೆ ಎದುರಾಗುತ್ತವೆ. ಅನಿವಾರ್ಯ ಕಾರಣಗಳಿಂದ ಸಾಲಮಾಡಬೇಕಾಗಬಹುದು. ಬಂಧುಗಳೊಡನೆ ಸಣ್ಣಪುಟ್ಟ ಜಗಳ ಅಥವಾ ತಗಾದೆ ಉಂಟಾಗಬಹುದು. ದೂರ ಪ್ರಯಾಣ ಕೈಗೊಳ್ಳಬೇಕಾಗುತ್ತದೆ. ಅನಾರೋಗ್ಯ ಕಾಡುವ ಸಾಧ್ಯತೆ ಇದೆ. ವ್ಯಾಪಾರ ವಹಿವಾಟು ಮತ್ತು ಉದ್ಯೋಗಗಳಲ್ಲಿ ಮಹತ್ವದ ಬದಲಾವಣೆಗ 

ಕನ್ಯಾ : ಈ ದಿನ ಸ್ವಲ್ಪ ಮಟ್ಟಿಗೆ ಮಂದಗತಿಯಲ್ಲಿ ಸಾಗುತ್ತವೆ. ದೂರ ಪ್ರಯಾಣ ಮಾಡಬೇಕಾಗಬಹುದು. ಆಸ್ತಿ-ಸಂಬಂಧಿತ ವಿಷಯಗಳಲ್ಲಿ ವಿವಾದ ಅಥವಾ ತಕರಾರು ಉಂಟಾಗುವ ಸಾಧ್ಯತೆಗಳಿವೆ. ಆಲೋಚನೆಗಳು ಸ್ಥಿರವಾಗಿರಲ್ಲ. ದೇವಸ್ಥಾನಗಳಿಗೆ ಭೇಟಿ. ವ್ಯಾಪಾರ ಹಾಗೂ ನೌಕರಿಯಲ್ಲಿ ವಿವಾದ ನಿಮ್ಮನ್ನು ಕಾಡುತ್ತವೆ.

ತುಲಾ: ಶ್ರಮದ ಫಲವನ್ನು ಇಂದು ಪಡೆಯುತ್ತಾರೆ. ಹೊಸ ಕೆಲಸ ಕಾರ್ಯ ಆರಂಭಿಸಲು ಸೂಕ್ತ ದಿನವಾಗಿದೆ. ಸಮಾಜದಲ್ಲಿ ಮನ್ನಣೆ ಪಡೆಯುವಿರಿ. ಶುಭ ಕಾರ್ಯಗಳ ನಿಮಿತ್ತ ಅಥವಾ ಇತರ ವಿಷಯಗಳಿಗಾಗಿ ಆಮಂತ್ರಣ ನಿಮ್ಮನ್ನು ತಲುಪುತ್ತವೆ. ವ್ಯಾಪಾರ ವಹಿವಾಟುಗಳನ್ನು ಮತ್ತಷ್ಟು ವಿಸ್ತರಿಸುವಸಮಯ . ಉದ್ಯೋಗದಲ್ಲಿ ಕೆಲಸಗಳನ್ನ ಸಮರ್ಥವಾಗಿ ಮತ್ತು ದಕ್ಷತೆಯಿಂದ ನಿರ್ವಹಿಸುವಿರಿ.

ವೃಶ್ಚಿಕ: ಶ್ರಮದ ದಿನ, ಬಂಧುಗಳೊಡನೆ ವಿವಾದ ಮತ್ತು ಭಿನ್ನಾಭಿಪ್ರಾಯ ಸೃಷ್ಟಿಯಾಗಬಹುದು.. ಕೆಲವು ಪ್ರಮುಖ ವ್ಯವಹಾರ ನಿಧಾನವಾಗಿ ಮುಂದುವರಿಯುತ್ತವೆ. ದೇವಸ್ಥಾನಗಳಿಗೆ ತೆರಳುವಿರಿ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ.

ಎಪಿಎಂಸಿಯಲ್ಲಿ ಎಷ್ಟಿದೆ ಅಡಿಕೆ ದರ!? ಯಾವ ಮಾರ್ಕೆಟ್​ನಲ್ಲಿ ಹೇಗೆ ತಗೊತ್ತಿದ್ದಾರೆ ಅಡಕೆ

November 24 Horoscope ಧನುಸ್ಸು: ಹೊಸ ಕೆಲಸಗಳನ್ನು ಕೈಗೆತ್ತಿಕೊಳ್ಳುವಿರಿ. ಆಪ್ತರಿಂದ ಅಥವಾ ಆತ್ಮೀಯರಿಂದ ಕರೆ  ಬರಬಹುದು. ಸಾಮಾಜಿಕ ವಲಯದಲ್ಲಿ ಗೌರವ ಸ್ಥಾನಮಾನ ದೊರೆಯುತ್ತದೆ. ಆರ್ಥಿಕವಾಗಿ ತೆಗೆದುಕೊಂಡ ನಿರ್ಧಾರ ತೃಪ್ತಿ ನೀಡಲಿವೆ. ವ್ಯಾಪಾರ ವಹಿವಾಟು ಮತ್ತು ನೌಕರಿಗಳಲ್ಲಿ ಹೊಸ ಉತ್ಸಾಹದ ವಾತಾವರಣ ಸೃಷ್ಟಿಯಾಗುತ್ತದೆ.

ಮಕರ: ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ಮತ್ತು ವಿರೋಧ ಉಂಟಾಗಬಹುದು. ಅನಿರೀಕ್ಷಿತ ಪ್ರಯಾಣ. ಕೆಲವು ಪ್ರಮುಖ ಕೆಲಸಗಳನ್ನು ಮುಂದೂಡಬೇಕಾಗುತ್ತದೆ. ಆರ್ಥಿಕ ವಿಷಯಗಳು ನಿರಾಸೆಗೊಳಿಸಬಹುದು. ದೈವಚಿಂತನೆಯಲ್ಲಿ ನಿರತರಾಗುವಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಅಡೆತಡೆ ಉಂಟಾಗಬಹುದು.

 ದ್ವಾದಶ ರಾಶಿ ಭವಿಷ್ಯ, ಇಂದು ರಾಶಿ ಫಲ, ನವೆಂಬರ್ 24 ಜ್ಯೋತಿಷ್ಯ, ಹೊಸ ಉದ್ಯೋಗ ಯೋಗ, ಕನ್ನಡ ರಾಶಿ ಭವಿಷ್ಯ, ಮಲೆನಾಡು ಟುಡೆ, ವಿಶ್ವಾवसु ನಾಮ ಸಂವತ್ಸರ, ಶುಭ ಘಳಿಗೆ,  November 24 Rashi Bhavishya, Daily Horoscope Kannada, Today's Astrology, New Job Opportunities, Financial Gains, Vishvavasu Samvatsara, Malenadu Today.
ದ್ವಾದಶ ರಾಶಿ ಭವಿಷ್ಯ, ಇಂದು ರಾಶಿ ಫಲ, ನವೆಂಬರ್ 24 ಜ್ಯೋತಿಷ್ಯ, ಹೊಸ ಉದ್ಯೋಗ ಯೋಗ, ಕನ್ನಡ ರಾಶಿ ಭವಿಷ್ಯ, ಮಲೆನಾಡು ಟುಡೆ, ವಿಶ್ವಾवसु ನಾಮ ಸಂವತ್ಸರ, ಶುಭ ಘಳಿಗೆ,  November 24 Rashi Bhavishya, Daily Horoscope Kannada, Today’s Astrology, New Job Opportunities, Financial Gains, Vishvavasu Samvatsara, Malenadu Today.

ಕುಂಭ: ಈ ದಿನ ನಿಮಗೆ ಶುಭ ಸಮಾಚಾರ ಕೇಳಿಬರುತ್ತವೆ. ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಇಂದು ಸೂಕ್ತ ಸಮಯ. ಸಮಾಜ ಸೇವೆ ಮತ್ತು ಜನೋಪಕಾರಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ವ್ಯಾಪಾರ ವಹಿವಾಟುಗಳು ಮತ್ತು ಉದ್ಯೋಗದಲ್ಲಿ ಸಂಪೂರ್ಣ ತೃಪ್ತಿ ಸಿಗಲಿದೆ.

ಮೀನ: ಹೊಸ ಉದ್ಯೋಗದ ಅವಕಾಶ ಅಥವಾ ನೌಕರಿ ಲಭಿಸಲಿವೆ. ಪ್ರಮುಖ ಮತ್ತು ಪ್ರತಿಷ್ಠಿತ ವ್ಯಕ್ತಿಗಳೊಂದಿಗೆ ಹೊಸ ಪರಿಚಯ ಬೆಳೆಯುತ್ತವೆ. ಚಿಂತನೆ ಮತ್ತು ಯೋಜನೆ ನಿಮಗೆ ಯಶಸ್ಸು ತಂದುಕೊಡುತ್ತವೆ. ಕೆಲವು ಸಭೆ ಸಮಾರಂಭಗಳಲ್ಲಿ ಭಾಗವಹಿಸುವಿರಿ. ವ್ಯಾಪಾರ ಮತ್ತು ನೌಕರಿ ಕ್ಷೇತ್ರಗಳಲ್ಲಿ ಸಕಾರಾತ್ಮಕ ಮತ್ತು ಅನುಕೂಲಕರ ವಾತಾವರಣ ಇರಲಿದೆ.

ಶಿವಮೊಗ್ಗದಲ್ಲಿ ನವೆಂಬರ್‌ 07ರಿಂದ 4 ದಿನಗಳ ಬೃಹತ್ ಕೃಷಿ ಮೇಳ

November 24 Horoscope New Opportunities and Financial Gains for 12 Signs

ನವೆಂಬರ್ 24, 2025 ರ ದ್ವಾದಶ ರಾಶಿಗಳ ಇಂದಿನ ಭವಿಷ್ಯ, ಮೇಷದಿಂದ ಮೀನದವರೆಗೆ ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಜ್ಯೋತಿಷ್ಯದ ಸಂಪೂರ್ಣ ವಿವರ.Daily Horoscope for November 24, 2025, for all 12 Rashi , ದ್ವಾದಶ ರಾಶಿ ಭವಿಷ್ಯ, ಇಂದು ರಾಶಿ ಫಲ, ನವೆಂಬರ್ 24 ಜ್ಯೋತಿಷ್ಯ, ಹೊಸ ಉದ್ಯೋಗ ಯೋಗ, ಕನ್ನಡ ರಾಶಿ ಭವಿಷ್ಯ, ಮಲೆನಾಡು ಟುಡೆ, ವಿಶ್ವಾवसु ನಾಮ ಸಂವತ್ಸರ, ಶುಭ ಘಳಿಗೆ,  November 24 Rashi Bhavishya, Daily Horoscope Kannada, Today’s Astrology, New Job Opportunities, Financial Gains, Vishvavasu Samvatsara, Malenadu Today.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

 

Share This Article