ಶಿವಮೊಗ್ಗ : ಶಿವಮೊಗ್ಗ ನಗರ ಉಪವಿಭಾಗ-2ರ ವ್ಯಾಪ್ತಿಯಲ್ಲಿನ ಮಂಡ್ಲಿ ಪ್ರದೇಶದಲ್ಲಿ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವ ಕಾರಣ, ನವೆಂಬರ್ 24, 2025 ರಂದು ನಗರದ ಕೆಲವು ಪ್ರಮುಖ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ (MESCOM) ಪ್ರಕಟಣೆ ಮೂಲಕ ತಿಳಿಸಿದೆ. ವಿದ್ಯುತ್ ಕಾಮಗಾರಿಗಳ ಕಾರಣದಿಂದಾಗಿ ಅಂದು ಬೆಳಿಗ್ಗೆ 10:30 ರಿಂದ ಸಂಜೆ 4:00 ರವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ. ಮಂಡ್ಲಿ ಭಾಗದಲ್ಲಿ ತುರ್ತಾಗಿ ನಿರ್ವಹಣಾ ಕಾರ್ಯಗಳನ್ನು ಕೈಗೊಂಡಿರುವುದರಿಂದ ವಿದ್ಯುತ್ ವ್ಯತ್ಯಯವಾಗಲಿದೆ.
ವಿದೇಶ ವ್ಯಾಸಂಗಕ್ಕೆ ₹1ಲಕ್ಷ ಸಿಗುತ್ತೆ! ಧಾರ್ಮಿಕ ದತ್ತಿ ಇಲಾಖೆಯಿಂದ ಗುಡ್ ನ್ಯೂಸ್ ! ಇಲ್ಲಿದೆ ಪೂರ್ಣ ಮಾಹಿತಿ!
MESCOM ಎಲ್ಲೆಲ್ಲಿ ಕರೆಂಟ್ ಇರಲ್ಲ
ಹಳೇಮಂಡ್ಲಿ, ಗಂಧರ್ವನಗರ, ಹರಕೆರೆ, ಶಂಕರಕಣ್ಣಿನ ಆಸ್ಪತ್ರೆ, ವಿಜಯವಾಣಿ ಪ್ರೆಸ್ ಹತ್ತಿರ, ಸಾವಾಯಿ ಪಾಳ್ಯ, ಕುರುಬರ ಪಾಳ್ಯ, ಶ್ರೀನಿವಾಸ ಲೇಔಟ್, ಇಲಿಯಾಜ್ ನಗರ 1 ರಿಂದ 4ನೇ ಕ್ರಾಸ್, ನಾರಾಯಣ ಹೃದಯಾಲಯ, ಗಜಾನನ ಗ್ಯಾರೇಜ್, ಮಂಜುನಾಥ ರೈಸ್ ಮಿಲ್, ಬೆನಕೇಶ್ವರ ರೈಸ್ ಮಿಲ್, ಅನ್ನಪೂರ್ಣೇಶ್ವರಿ ಬಡಾವಣೆ, ಎಫ್ -5 ಗಾಜನೂರು ಗ್ರಾಮಾಂತರ ಪ್ರದೇಶ, ಎಫ್ -8 ರಾಮಿಕೊಪ್ಪ ಗ್ರಾಮಾಂತರ ಪ್ರದೇಶ ಹಾಗೂ ಐಪಿ ಲಿಮಿಟ್‌ನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.


