ಶಿವಮೊಗ್ಗಕ್ಕೆ ಗೀತಾ ಶಿವರಾಜ್​ ಕುಮಾರ್​ ಆಗಮನದ ದಿನಾಂಕ ಫಿಕ್ಸ್​! ಮಧು ಬಂಗಾರಪ್ಪ ಹೇಳಿದ್ದೇನು?

shivamogga Mar 15, 2024 :  ಶಿವಮೊಗ್ಗ ಲೋಕಸಭಾ ಚುನಾವಣಾ ಕಣದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್​ ಶಿವಮೊಗ್ಗಕ್ಕೆ ಬರುವ ದಿನಾಂಕ ನಿಕ್ಕಿಯಾಗಿದೆ. ಸೋಶಿಯಲ್ ಮೀಡಿಯಾ ಟ್ರೋಲ್ ಅಭಿಯಾನಗಳನ್ನ ಟೀಕಿಸಿದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಗೀತಾ ಶಿವರಾಜ್​ ಕುಮಾರ್​ರವರ ಶಿವಮೊಗ್ಗ ಆಗಮನದ ದಿನಾಂಕ ತಿಳಿಸಿದ್ದಾರೆ. 

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನ ನಡೆಸಿದ ಅವರು, ಇದೇ ಮಾರ್ಚ್​ 20 ರಂದು ಗೀತಾಶಿವರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಶಿವಮೊಗ್ಗಕ್ಕೆ ಬರಲಿದ್ದು, ಚುನಾವಣಾ ಪ್ರಚಾರ ಪ್ರಾರಂಭ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಅದೇ ದಿನ  ಶಿವಮೊಗ್ಗದಲ್ಲಿ ಕಾರ್ಯಕರ್ತರ ಸಭೆಯು ಸಹ ನಡೆಯಲಿದೆ ಎಂದ ಮಧು ಬಂಗಾರಪ್ಪ ನಂತರ ತಾಲ್ಲೂಕು ಮಟ್ಟದಲ್ಲಿ ಪ್ರಚಾರ ಸಭೆಗಳು ನಡೆಯಲಿದೆ ಎಂದು ತಿಳಿಸಿದ್ದಾರೆ. 

ತಾಲೂಕು ಮಟ್ಟದ ಮತ್ತು ಹೋಬಳಿ ಮಟ್ಟದ ಪ್ರಚಾರ ಸಭೆಗಳು ಸೇರಿದಂತೆ ಚುನಾವಣಾ ರಣಕಣದಲ್ಲಿ ಹಲವು ಚಟುವಟಿಕೆಗಳನ್ನ ಹಮ್ಮಿಕೊಂಡಿರುವುದಾಗಿ ತಿಳಿಸಿದ ಮಧು ಬಂಗಾರಪ್ಪ, ಗ್ಯಾರಂಟಿ ಯೋಜನೆಗಳಿಂದ ಗೆದ್ದೆ ಗೆಲ್ಲುತ್ತೇವೆ ಎಂದಿದ್ದಾರೆ. 

Leave a Comment