Shivamogga Feb 19, 2024 ಸಾಗರ ತಾಲ್ಲೂಕು ಕೋಣೆಹೊಸೂರು ಸಮೀಪ ಬೈಕ್ ಸ್ಕಿಡ್ ಆಗಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾರೆ. ಇಲ್ಲಿ ಪತ್ರೆಹೊಂಡದ ಬಳಿ ಈ ಘಟನೆ ನಡೆದಿದೆ. ಶಿವಮೊಗ್ಗ ತಾಲ್ಲೂಕು ಉಂಬ್ಳೆಬೈಲ್ ನ 26 ವರ್ಷ ಖಾಲೀದ್ ಮೃತ ವ್ಯಕ್ತಿ. ಇನ್ನೊಬ್ಬನನ್ನ ಸಾಗರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲಸದ ಕಾರಣಕ್ಕಾಗಿ ಸೊರಬಕ್ಕೆ ತೆರಳುತ್ತಿದ್ದರು, ಈ ವೇಳೆ ಅಪಘಾತವಾಗಿದೆ. ಘಟನೆಯಲ್ಲಿ ಕೆಳಕ್ಕೆ ಬಿದ್ದ ಖಾಲಿದ್ ರ ತಲೆಗೆ ತೀವ್ರ ಪೆಟ್ಟು ಬಿದ್ದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಇನ್ನೊಬ್ಬರಿಗೂ ಗಂಭೀರ ಪೆಟ್ಟಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೊಂದೆಡೆ ಶಿವಮೊಗ್ಗದ ಎನ್ಟಿ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸೈಫಾನ್ ಎಂಬಾತ ಸಾವನ್ನಪ್ಪಿದ್ದಾರೆ. ಎನ್ ಟಿ ರಸ್ತೆಯಲ್ಲಿ ಬರುತ್ತಿದ್ದಾಗ ಬೈಕ್ ಟ್ರ್ಯಾಕ್ಟರ್ಗೆ ಡಿಕ್ಕಿಯಾಗಿದೆ. ಇತ್ತೀಚೆಗೆ ಬೈಕ್ ರ್ಯಾಲಿಯೊಂದರಲ್ಲಿ ಪಾಲ್ಗೊಂಡಿದ್ದ ಸೈಫಾನ್, ದುರಂತ ಅಂತ್ಯ ಕಂಡಿರುವುದು ಅವರ ಕುಟುಂಬಸ್ಥರಲ್ಲಿ ದುಃ ಮೂಡಿಸಿದೆ.
